
ಶಿವಮೊಗ್ಗ : ಜಿಲ್ಲೆಗೆ ನೂತನವಾಗಿ ಬಂದಿರುವ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿಕೆ ಮಿಥುನ್ ಕುಮಾರ್ ಅವರು ತಮ್ಮದೇ ಆದ ವಿಶೇಷ ವಿನೂತನವಾದ ಶೈಲಿಯಿಂದ ಅಪರಾಧ ಜಗತ್ತನ್ನು ನಿಯಂತ್ರಣ ಮಾಡುವ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಅಪರಾಧ ಜಗತ್ತಿಗೆ ಫಿಂಗರ್ ಪ್ರಿಂಟ್ ಅಪ್ಲಿಕೇಶನ್ ಎಂಟ್ರಿ ::
ವ್ಯಕ್ತಿಗಳ ಅಪರಾಧ ಹಿನ್ನೆಲೆಯನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ಪೊಲೀಸ್ ಇಲಾಖೆಯಿಂದ ಹೊಸದಾಗಿ MCCTNS (Mobile – Crime and Criminal Tracking Network System) ಎಂಬ ಅಪ್ಲಿಕೇಷನ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.
ರಾತ್ರಿ ಗಸ್ತು ತಿರುಗುವ ಪೊಲೀಸರಿಗೆ ಸಿಕ್ತು ಹೊಸ ಅಸ್ತ್ರ :
MCCTNS ಅಪ್ಲಿಕೇಷನ್ ಅನ್ನು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳ ಮೊಬೈಲ್ ಫೋನ್ ಗಳಲ್ಲಿ ಈಗಾಗಲೇ Install ಮಾಡಲಾಗಿರುತ್ತದೆ. ರಾತ್ರಿಗಸ್ತು ಕರ್ತವ್ಯವನ್ನು ನಿರ್ವಸಹಿಸುವ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗುವುದು.
ಅವರುಗಳು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಗಳನ್ನು ತಮ್ಮ ಮೊಬೈಲ್ ಫೋನ್ ಗೆ ಅಳವಡಿಸಿಕೊಂಡು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಬೆರಳುಗಳನ್ನು ಸ್ಕ್ಯಾನ್ ಮಾಡಿ, ಅವರುಗಳು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದು ಕಂಡು ಬಂದರೆ. ಅಂತವರನ್ನು ಠಾಣೆಗೆ ಕರೆತಂದು ಅವರ ಹಿನ್ನೆಲೆಯನ್ನು ಪರಿಶೀಲಿಸಿ ಅವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಅನುಕೂಲವಾಗುತ್ತದೆ..
ಅಪರಾಧ ಜಗತ್ತಿಗೆ ಹೊಸ ಅಸ್ತ್ರ ಎಂಟ್ರಿ ಇದರಿಂದ ರಾತ್ರಿ ಹೊತ್ತು ಅಪರಾಧ ಎಸಗುವ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಮೇಲೆ ಪೊಲೀಸರಿಗೆ ನಿಗಾವಹಿಸಲು ಅನುಕೂಲವಾಗುತ್ತದೆ ಇದರಿಂದ ಅಪರಾಧ ಕೃತ್ಯಗಳು ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ…
ರಘುರಾಜ್ ಹೆಚ್.ಕೆ…9449553305…