
ತೀರ್ಥಹಳ್ಳಿ : ತೀರ್ಥಹಳ್ಳಿ ಹೊಸನಗರದ ಭಾಗವಾಗಿರುವ ಯಡೂರು ತಾಲಸಿ ಅಬ್ಬಿ ಫಾಲ್ಸ್ ನಲ್ಲಿ ನಿನ್ನೆ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ತೀರ್ಥಹಳ್ಳಿಯ ಕುರವಳ್ಳಿ ಭಾಗದ ಯುವಕರಿಗೂ, ಹಾಗೂ ಉಡುಪಿಯ ಯುವಕರಿಗೂ ಗಲಾಟೆ ನಡೆದಿದ್ದು. ತೀರ್ಥಹಳ್ಳಿ ಕುರುವಳ್ಳಿ ಯುವಕರಿಂದ ಉಡುಪಿಯ ಯುವಕರಿಗೆ ಮಾರಣಾಂತಿಕ ಹಲ್ಲೆ ಒಬ್ಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ…
ಘಟನೆಯ ಹಿನ್ನೆಲೆ :
ಯಡೂರು ತಾಲಸಿ ಅಬ್ಬಿಫಾಲ್ಸ್ ನೋಡಲು ಟಿಟಿ ವಾಹನದಲ್ಲಿ ಉಡುಪಿಯ ಯುವಕರು ಬಂದಿದ್ದರು. ನಿನ್ನೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನೀರಿನಲ್ಲಿ ಇಳಿದ ಯುವಕರು ನಂತರ ಊಟಕ್ಕೆ ಮುಂದಾಗಿದ್ದಾರೆ.
ತೀರ್ಥಹಳ್ಳಿಯ ಮೇಲಿನ ಕುರವಳ್ಳಿಯ ಯುವಕರ ತಂಡ ಬೈಕಿನಲ್ಲಿ ಅಲ್ಲಿಗೆ ಬಂದಿದ್ದಾರೆ. ಬಿಯರ್ ಕುಡಿದ ನಷೆಯಲ್ಲಿದ್ದ ಯುವಕರು ಉಡುಪಿಯ ಯುವಕರ ಹತ್ತಿರ ಊಟ ಕೇಳಿದ್ದಾರೆ. ಉಡುಪಿಯ ಯುವಕರು ಊಟವನ್ನು ಕೊಟ್ಟಿದ್ದಾರೆ ಆದರೆ ಮೊದಲೇ ನಶೆಯಲ್ಲಿದ್ದ ಕುರುವಳ್ಳಿಯ ಯುವಕರು ಉಡುಪಿಯ ಯುವಕರೊಂದಿಗೆ ಕಿರಿಕ್ ತೆಗೆದಿದ್ದಾರೆ. ಅದು ಅತಿರೇಕಕ್ಕೆ ಹೋಗಿ ಬಿಯರ್ ಬಾಟಲ್ ನಿಂದ ಉಡುಪಿಯ ಯುವಕರಿಗೆ ಹೊಡೆದಿದ್ದಾರೆ.
ಹಲ್ಲೆಯ ನಂತರ ಆಸ್ಪತ್ರೆಗೆ ಕರೆದೊಯ್ದ ಕುರುವಳ್ಳಿಯ ಯುವಕರು :
ಹಲ್ಲೆ ಮಾಡಿದ ಕುರವಳ್ಳಿಯ ಯುವಕರು ಸಾಯುತ್ತಾರೆ ಎನ್ನುವ ಭಯದಿಂದ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ತಕ್ಷಣ ಅಲ್ಲಿಗೆ ಉಡುಪಿಯ ಯುವಕರು ಬರುತ್ತಾರೆ ಅಷ್ಟರಲ್ಲಿ ಕುರುವಳ್ಳಿಯ ಯುವಕರು ಇವರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿರುತ್ತಾರೆ…
ಈ ಹಲ್ಲೆಯಲ್ಲಿ ಮಣಿಕಂಠ ಮತ್ತು ಜೇಸುದಾಸ್ ಅವರಿಗೆ ಗಾಯಗಳಾಗಿದ್ದು ಜೇಸುದಾಸ್ ಡಿಸ್ಚಾರ್ಜ್ ಆಗಿ ಪೊಲೀಸರ ವಶದಲ್ಲಿದ್ದು. ಮಣಿಕಂಠನಿಗೆ ಆಪರೇಷನ್ ಅವಶ್ಯಕತೆ ಇದೆ ಎಂದು ಮಣಿಪಾಲ್ ವೈದ್ಯರು ತಿಳಿಸಿದ್ದಾರೆ… ಎನ್ನಲಾಗುತ್ತಿದೆ..
ಹಲ್ಲೆ ನಡೆಸಿ ಪರಾರಿಯಾದ ಕುರವಳ್ಳಿಯ ಕೆಲವು ಯುವಕರು :
ಹಲ್ಲೆ ನಡೆಸಿ ಗಾಬರಿಗೊಂಡ ಕುರುವಳ್ಳಿ ಯುವಕರು ಊರು ಬಿಟ್ಟಿದ್ದಾರೆ. ಅವರನ್ನು ಬಚಾವ್ ಮಾಡಲು ಕೆಲವರ ಹೆಸರು ತೆಗೆದುಹಾಕುವಂತೆ ಧರ್ಮರಾಯ ಮತ್ತು ಆತನ ಸಂಗಡಿಗರು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ… ಇದೆಲ್ಲಕ್ಕೂ ಡೋಂಟ್ ಕೇರ್ ಎನ್ನದ ತೀರ್ಥಹಳ್ಳಿ ಪೊಲೀಸರು ತಪ್ಪಿತಸ್ಥ ಯುವಕರ ಮನೆ ಮನೆಗೂ ಹೋಗಿ ವಿಚಾರಣೆ ನಡೆಸುತ್ತಿದ್ದಾರೆ.. ಎನ್ನಲಾಗಿದ್ದು ಈ ಘಟನೆಯಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಎಫ್ ಐ ಆರ್ ದಾಖಲಾಗುವ ಸಂಭವವಿದೆ…
ರಘುರಾಜ್ ಹೆಚ್.ಕೆ…9449553305…