ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿರುವ ಕಾರ್ಮಿಕರ ಕಛೇರಿಗೆ ವರ್ಷವಿಡೀ ಗ್ರಹಣ ಹಿಡಿದಿದೆ. ಬೇಜವಾಬ್ದಾರಿ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷತನದಿಂದ ಕಾರ್ಮಿಕರಿಗೆ ಕಾರ್ಮಿಕರ ಇಲಾಖೆಯಿಂದ ಸರ್ಕಾರಿ ಸೇವಾ ಸೌಲಭ್ಯ ಪಡೆಯಲು ಹರಸಾಹಸ ಪಡುತ್ತಿದ್ದರೂ ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಾದ ಹರತಾಳು ಹಾಲಪ್ಪ ಹಾಗೂ ಕುಮಾರ್ ಬಂಗಾರಪ್ಪ ಕಾರ್ಮಿಕ ಇಲಾಖೆಯ ಬೇಜವಾಬ್ದಾರಿ ಅಧಿಕಾರಿಗಳ ಬೇಜವಾಬ್ದಾರಿತನ ತುಟಿ ಬಿಚ್ಚದೇ ಮೌನವಾಗಿರುವ ಹಿಂದೇ ಕಾರ್ಮಿಕರುಗಳು ಹಿಡಿಶಾಪ ಹಾಕುತ್ತಿದ್ದಾರೆ.
*ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಆದೇಶದಂತೆ ಅರ್ಹ ಕಾರ್ಮಿಕರ ಮಕ್ಕಳು 6 ರಿಂದ 10 ನೇ ತರಗತಿಯ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಪಡೆಯಲು ಅರ್ಜಿಗಳನ್ನು ತಾಲ್ಲೂಕು ಮಟ್ಟದ ಕಾರ್ಮಿಕ ಕಛೇರಿಯಲ್ಲಿ ಪಡೆಯುವಂತೆ ಅಂತಿಮ ದಿನಾಂಕದ ಸೂಚನೆಯಿಲ್ಲದೇ ಇದ್ದರೂ, ಸಾಗರದ ಕಾರ್ಮಿಕ ಕಛೇರಿಯಲ್ಲಿ ಕರ್ತವ್ಯ ನಿರತ ಅಧಿಕಾರಿಗಳು ಹಾಗೂ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರತ ಸಿಬ್ಬಂದಿಯೂ ಅರ್ಹ ಕಾರ್ಮಿಕರುಗಳು ದೂರ ದೂರದಿಂದ ಸಾಗರದ ಕಾರ್ಮಿಕ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಲು ಆಗಮಿಸಿದರೆ ಅರ್ಜಿಗಳನ್ನು ಸ್ವೀಕರಿಸುವ ದಿನಾಂಕ ಮುಗಿದಿದೆ ಎಂದು ವಾಪಸ್ಸು ಕಳುಹಿಸುತ್ತಿರುವ ಮಾಹಿತಿ ದೊರೆತಿದೆ.
ಕೂಡಲೇ ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ ರವರು ಸಾಗರ ಕಾರ್ಮಿಕ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ ಬಗ್ಗೆ ತನಿಖೆ ನೆಡೆಸಿ ಕಾರ್ಮಿಕರಿಗೆ ಸೂಕ್ತ ನ್ಯಾಯ ಒದಗಿಸಿ, ಕಾರ್ಮಿಕ ಮಕ್ಕಳ ಕಂಪ್ಯೂಟರ್ ಅರ್ಜಿಗಳನ್ನು ಪಡೆಯಲು ಆದೇಶ ಮಾಡಿಸುವಂತೆ ನೊಂದ ಅರ್ಹ ಕಾರ್ಮಿಕರ ಪರವಾಗಿ ಮನವಿ …
ಓಂಕಾರ ಎಸ್. ವಿ. ತಾಳಗುಪ್ಪ….