
ಶಿವಮೊಗ್ಗ: ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘ ನಿ.ದ ನೂತನ ಅಧ್ಯಕ್ಷರಾಗಿ ಸಂಘದ ನಿರ್ದೇಶಕರೂ ಆದ ಹೊಳಲೂರು ಮಾರುತಿ ಪ.ಪೂ.ಕಾಲೇಜಿನ (ಹೈಸ್ಕೂಲ್ ವಿಭಾಗ) ಮುಖ್ಯೋಪಾಧ್ಯಾಯರಾದ ಯೋಗೇಶ್ ಎಸ್. ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಸರ್ಕಾರದ ಕೆ-2 ಜಾರಿಯಿಂದಾಗಿ ಸಾಲ ಮರುಪಾವತಿಗೆ ಸಮಸ್ಯೆಯಾಗಿದೆ. ಆ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಸಾಲ ಪಡೆದ ಸಂಘದ ಸದಸ್ಯಸು ಮರು ಪಾವತಿಗೂ ಆದ್ಯ ಗಮನ ನೀಡಬೇಕು. ಆಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೂ ಮುತುವರ್ಜಿ ವಹಿಸಬೇಕು ಎಂದು ಅವರು ವಿನಂತಿಸಿದರಲ್ಲದೆ ಸುಸ್ತಿದಾರರು ಸಾಲ ಮರುಪಾವತಿ ಮಾಡಿ ಮುಂದಾಗುವ ಕಾನೂನಾತ್ಮಕ ತೊಡಕುಗಳಿಂದ ಪಾರಾಗಬೇಕು ಎಂದು ಕಿವಿಮಾತು ಹೇಳಿದರು.
ತಾವು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಲು ಸಹಕರಿಸಿದ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರಿಗೆ ಅವರು ಇದೇ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಿದರು.
ಸಂಘದ ನಿಕಟಪೂರ್ವ ಅಧ್ಯಕ್ಷರಾದ ಡಾ.ಬಾಲಕೃಷ್ಣ ಹೆಗಡೆ, ಎಚ್.ಪ್ರಭಾಕರ, ಎಸ್.ಎಚ್.ಪ್ರಶಾಂತ, ಉಪಾಧ್ಯಕ್ಷರಾದ ಬಿ.ಎಂ.ರಘು, ನಿರ್ದೇಶಕರಾದ ಜ್ಯೋತಿ, ರಾಜು, ಕೆಂಚಮ್ಮ, ಸುರೇಶ, ಪರಶುರಾಮಪ್ಪ, ರುದ್ರಪ್ಪ, ಮಂಜಪ್ಪ ಮೊದಲಾದವರಿದ್ದರು.
ಸಹಕಾರ ಸಂಘಗಳ ಇಲಾಖೆಯ ಶ್ರೀಮತಿ ಜಲಜಾಕ್ಷಿ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.…
ರಘುರಾಜ್ ಹೆಚ್.ಕೆ…9449553305…