Wednesday, April 30, 2025
Google search engine
Homeರಾಜ್ಯಕವಿಯೂ ಕಲಿಯೂ ಆಗಿದ್ದ ಕನಕದಾಸರು: ಡಾ.ಬಾಲಕೃಷ್ಣ ಹೆಗಡೆ..!!

ಕವಿಯೂ ಕಲಿಯೂ ಆಗಿದ್ದ ಕನಕದಾಸರು: ಡಾ.ಬಾಲಕೃಷ್ಣ ಹೆಗಡೆ..!!


ಶಿವಮೊಗ್ಗ: ಮೇಲ್ವರ್ಗದ ಪಂಕ್ತಿಗೆ ಮಾತ್ರ ಸೀಮಿತವಾದ ಭಕ್ತಿ ಪರಂಪರೆಯ ಚಕ್ರವ್ಯೂಹವನ್ನು ಭೇದಿಸಿ ಒಳ ಹೊಕ್ಕು ತಮ್ಮ ತನವನ್ನು ಮೆರೆದವರು ಕನಕದಾಸರು ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ, ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ ಹೇಳಿದರು.
ಅವರು ತಮ್ಮ ಕಾಲೇಜಿನಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಕವಿಯೂ ಕಲಿಯೂ ಆದ ಕನಕದಾಸರು ತಮ್ಮ ವೈಚಾರಿಕತೆಯ ಪ್ರಖರತೆಯಿಂದದಾಸರಲ್ಲಿ ಕವಿ, ಕವಿಗಳಲ್ಲಿ ದಾಸರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಎಂದು ತಿಳಿಸಿದರು.
ಕೀರ್ತನೆ, ಮುಂಡಿಗೆ, ಮೋಹನತರಂಗಿಣಿ,ರಾಧಾನ್ಯ ಚರಿತೆ, ನಳಚರಿತ್ರೆ, ಹರಿಭಕ್ತಸಾರ, ಮೊದಲಾದ ಕೃತಿಗಳ ಮೂಲಕ ಜೀವಪರ ಸಂದೇಶಗಳನ್ನು ಬಿತ್ತಿದ್ದಾರೆ ಎಂದ ಅವರು ಸಮಾಜದಲ್ಲಿ ಅಂಕಾರ, ಡಾಂಬಿಕತನ, ಭಕ್ತಿ ಶೂನ್ಯತೆಯಿಂದ ಕೂಡಿದವರನ್ನು ಕಟುವಾಗಿ ಟೀಕಿಸಿದರು ಎಂದು ವಿವರಿಸಿದರು.
ಹೃದಯ ಹೊಲವನು ಮಾಡಿ, ತನುವ ನೇಗಿಲ ಮಾಡಿ ನಾಲಿಗೆಯ ಕೂರಿಗೆ ಮಾಡಿ ಬಿತ್ತಿರಯ್ಯ ಎನ್ನುವ ಚಿಂತನೆಯ ಮೂಲಕ ಸಮಾಜಕ್ಕೆ ಒಳಿತನ್ನು ಬಯಸಿದವರು ಕನಕದಾಸರು ಎಂದು ಬಣ್ಣಿಸಿದರು.
ಕುಲಕ್ಕಿಂತ ಗುಣ ಶ್ರೇಷ್ಠ ಎಂದು ಪ್ರತಿಪಾದಿಸಿದ ಅವರು ಗುಣವೇ ಮುಖ್ಯ ಹೊರತು ಕುಲವಲ್ಲ ಎಂದು ತೀವ್ರವಾಗಿ ಪ್ರತಿಪಾದಿಸಿದ್ದರು ಎಂದು ಮಾಹಿತಿ ನೀಡಿದರು.
ಕನಕದಾಸರ ಉಪದೇಶಗಳು ಸರ್ವಕಾಲಿಕ ಪ್ರಸ್ತುತತೆಯನ್ನು ಪಡೆದುಕೊಂಡಿವೆ ಎಂದು ಡಾ.ಹೆಗಡೆ ಹೇಳಿದರು.
ಉಪಪ್ರಾಂಶುಪಾಲರಾದ ಡಾ.ಆರ್.ಎಂ.ಜಗದೀಶ ಅಧ್ಯಕ್ಷತೆ ವಹಿಸಿ ಮಾತನಾಡಿ ಕನಕದಾದರು 14ನೇ ಶತಮಾನದಲ್ಲೇ ತಮ್ಮ ಉಪದೇಶಗಳ ಮೂಲಕ ಜಾತಿ ಪದ್ಧತಿ ನಿರ್ಮೂಲನೆಗೆ ಮುನ್ನುಡಿ ಬರೆದವರು ಕನಕದಾಸರು ಎಂದು ಗುಣಗಾನ ಮಾಡಿದರು.
ಐಕ್ಯೂಎಸಿ ಸಂಯೋಜಕ ಡಾ.ಎ.ಪಿ.ಓಂಕಾರಪ್ಪ, ದಾಸರ ಪದವನ್ನು ಹಾಡಿದರು. ಡಾ.ಬಿ.ಎಂ.ರವಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಎನ್.ಡಿ.ರಮೇಶ ವಂದಿಸಿದರು.

ರಘುರಾಜ್ ಹೆಚ್.ಕೆ..9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...