
ಶಿವಮೊಗ್ಗ:: ನಗರದ ನವುಲೆ ಶ್ರೀ ಶ್ರೀ ಶ್ರೀ ಬೀರೇಶ್ವರ ವಿಕಾಸನ ಸಂಸ್ಥೆ ವತಿಯಿಂದ ಇಂದು ದಾಸ ಶ್ರೇಷ್ಠ ಶ್ರೀ ಕನಕದಾಸರ 535ನೇ ಜಯಂತೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ದಾನಿಗಳಾದ ಹಿಂದೂ ದರ್ ಜೈನ್ ರವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ನವುಲೆ ಮಂಜುನಾಥ್ ವಹಿಸಿದ್ದರು.
ಸಂಸ್ಥೆ ಯ ಸಭಾಧ್ಯಕ್ಷರಾದ ಎಂ ಈಶ್ವರಪ್ಪನವರು ದೀಪ ಬೆಳಗಿಸಿದರು ಗೌರವಾಧ್ಯಕ್ಷರಾದ ಈ ಬೀರಪ್ಪನವರು ಪುಷ್ಪಾರ್ಚನೆ ಮಾಡಿದರು. ರವೀಂದ್ರ ಸ್ವಾಗತಿಸಿದರು ಎನ್ ಕೃಷ್ಣ ವಂದನಾರ್ಪಣೆ ಮಾಡಿದರು ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಅಣ್ಣಪ್ಪ ವಿ ಸಂಘಟನಾ ಕಾರ್ಯದರ್ಶಿ ಸುರೇಶ್ ಎಚ್ ಸಹ ಕಾರ್ಯದರ್ಶಿ ಆನಂದ್. ರಾಘು ಷಣ್ಮುಖ. ಪರಮೇಶ್. ಹನುಮಂತು, ಬೀರಪ್ಪ ಹಾಲೇಶ್ ಹಾಗೂ ಎಲ್ಲ ಪದಾಧಿಕಾರಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಪ್ರಸಾದ ವಿತರಣೆ ಮಾಡಲಾಯಿತು…
ರಘುರಾಜ್ ಹೆಚ್.ಕೆ…9449553305…