
ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ನಿಗಮಕ್ಕೆ 500 ಕೋಟಿ ಹಣ ಮಂಜೂರು ಮಾಡಿದ ಮಾಜಿ ಮುಖ್ಯಮಂತ್ರಿಗಳಾದ ಬಿ,ಎಸ್ ಯಡಿಯೂರಪ್ಪ ನವರಿಗೆ ಹಾಗೂ ಜಿಲ್ಲೆಯ ಒಕ್ಕಲಿಗರಿಗೆ ಅನುಕೂಲವಾಗಲೆಂದು ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘಕ್ಕೆ ಸಮುದಾಯ ಭವನ ನಿರ್ಮಾಣಕ್ಕಾಗಿ 1.5 ರೂ,ಗಳ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿ ಒಕ್ಕಲಿಗರ ಶ್ರೇಯಅಭಿವೃದ್ಧಿಗೆ ಸದಾ ಸ್ಪಂದಿಸುವ ಸಂಸದರಾದ ಬಿ,ವೈ ರಾಘವೇಂದ್ರ ಅವರಿಗೆ ಶಿವಮೊಗ್ಗ ನಗರ ಒಕ್ಕಲಿಗರ ಸಂಘದ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಹಾಗೂ ಆಗಸ್ಟ್ 16ರಂದು ಯುವಕರ ಕಣ್ಮಣಿ ಸದಾ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಯುವ ಸಂಸದರಾದ ಬಿ,ವೈ ರಾಘವೇಂದ್ರ ರವರಿಗೆ 48ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಸಮುದಾಯ ಭವನ ನಿರ್ಮಾಣಕ್ಕೆ ಸಂಸದರಲ್ಲಿ ಮನವಿ ಮಾಡಿದ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳಿಗೂ ಸಂಘದ ಅಧ್ಯಕ್ಷರಾದ ಎಸ್, ಕೆ ರಾಘವೇಂದ್ರ ರವರು ಪತ್ರಿಕೆ ಪ್ರಕಟಣೆ ನೀಡುವುದರ ಮೂಲಕ ವಂದನೆಗಳನ್ನು ಸಲ್ಲಿಸಿದ್ದಾರೆ….

ವರದಿ.. ರಘುರಾಜ್ ಹೆಚ್. ಕೆ..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/78928308999…