
ಗೃಹಸಚಿವರ ತವರಲ್ಲಿ ಅಧಿಕಾರಿಗಳು ಹಾಗೂ ಬಜರಂಗದಳ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆ, ಗೋಮಾಂಸ ಸಾಗಾಟ ಜಾಲವನ್ನು ಭೇಧಿಸಿದ ಆಗುಂಬೆಯ ಪೋಲಿಸ್ ಹಾಗೂ ಅರಣ್ಯ ತಪಾಸಣಾ ಸಿಬ್ಬಂದಿ.
ಶಿವಮೊಗ್ಗದಿಂದ ಮಂಗಳೂರಿಗೆ ಗೋಮಾಂಸ ಸಾಗಿಸುತ್ತಿದ್ದ ಇರ್ಷಾದ್ ಬಿನ್ ಮುಸ್ತಫಾ ಕಂಕನಾಡಿ ಹಾಗೂ ದೇರಳಕಟ್ಟೆಯ ಇಮ್ತಿಯಾಜ್ ಬಿನ್ ಹಸನಬ್ಬ ಎಂಬುವವರನ್ನು ತೀರ್ಥಹಳ್ಳಿ ತಾಲೂಕು ಆಗುಂಬೆ ಅರಣ್ಯ ಇಲಾಖೆ ತಪಾಸಣಾ ಕೇಂದ್ರದಲ್ಲಿ ಬಂಧಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ
ತೀರ್ಥಹಳ್ಳಿಯ ವಿಶ್ವಹಿಂದೂ ಪರಿಷತ್ ಭಜರಂಗದಳದ ಮುಖಂಡರು ಹಾಗೂ ಕಾರ್ಯಕರ್ತರ ತಂಡದ ಜತೆ ಆಗುಂಬೆ ಘಟಕದ ಭಜರಂಗದಳ ಪ್ರಮುಖರು ಹಾಗೂ ಕಾರ್ಯಕರ್ತರು ಸಹಕಾರ ನೀಡಿದರು.
ಎ.ಎನ್.ಎಸ್ ನ ಸಿಬ್ಬಂದಿಯಾದ ಪ್ರವೀಣ್ ರವರು ಹಾಗೂ ಅರಣ್ಯ ತನಿಖಾ ಠಾಣೆಯ ಜಗದೀಶ್ ರವರು ಜೀವದ ಹಂಗು ತೊರೆದು ವಾಹನ ಅಡ್ಡಗಟ್ಟಿ ಗೋ ಮಾಂಸ ದಂಧೆಕೋರರನ್ನು ಬಂಧಿಸಲು ಸಹಕರಿಸಿದ್ದಾರೆ. ತಮ್ಮ ಇಲಾಖೆಯ ಕೆಲಸಗಳ ಜತೆಗೆ ನೆರೆ, ಅಪಘಾತಗಳಂತಹ ಸಮಯದಲ್ಲಿ ಸಹಾಯಹಸ್ತ ನೀಡುವ ಸಮಾಜಮುಖಿ ಕೆಲಸದಲ್ಲಿ ಈ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ. ಆಗುಂಬೆಯ ಪಿ.ಎಸ್.ಐ ಯವರಾದ ಶಿವಕುಮಾರ್ ರವರು ಯಾವುದೇ ಒತ್ತಡಕ್ಕೆ ಮಣಿಯದೇ ಗೋಮಾತೆಯ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಇಂದೂ ಕೂಡಾ ಅಪರಾಧಿಗಳನ್ನು ಬಂಧಿಸಿ ಎಫ್.ಐ.ಆರ್ ದಾಖಲಿಸಿದ್ದು ಸ್ಥಳೀಯರು ಈ ಎಲ್ಲಾ ಸಿಬ್ಬಂದಿಗಳನ್ನು ಪ್ರಶಂಸಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಹಕರಿಸಿದ ಎಲ್ಲ ಕಾರ್ಯಕರ್ತರಿಗೂ ಸಾರ್ವಜನಿಕರಿಗೂ ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಂಡ ಇಲಾಖೆಯ ಅಧಿಕಾರಿಗಳಿಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ತೀರ್ಥಹಳ್ಳಿ ಹಾಗೂ ಆಗುಂಬೆ ವಲಯ ಧನ್ಯವಾದಗಳನ್ನು ಸಲ್ಲಿಸಿದೆ….
ವರದಿ.. ರಘುರಾಜ್ ಹೆಚ್.ಕೆ….
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305/7892830899…