
ಕೋವಿಡ್ ನಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ, ತಮ್ಮ ಬಿಡುವಿಲ್ಲದ ಕಾರ್ಯಚಟುವಟಿಕೆ ನಡುವೆಯೂ ನಮ್ಮ ಕರೆಗೆ ಓಗೊಟ್ಟು ಸ್ವಯಂ ಪ್ರೇರಣೆಯಿಂದ ಇಂದು ರಕ್ತದಾನ ಮಾಡುವ ಮೂಲಕ ಎಪ್ಪತ್ತೈದನೆಯ ಸ್ವಾತಂತ್ರೋತ್ಸವನ್ನು ಸಮಾಜಮುಖಿಯಾಗಿ ಸಂಭ್ರಮಿಸಿದ ಎಲ್ಲಾ ಸಹೃದಯಿ ಬಂಧುಗಳಿಗೆ,
ಆಗಮಿಸಿದರೂ ತಾಂತ್ರಿಕ ಕಾರಣಗಳಿಂದ ರಕ್ತದಾನ ಮಾಡಲು ಸಾಧ್ಯವಾಗದ ಎಲ್ಲಾ ಸಹೃದಯಿ ಬಂಧುಗಳಿಗೆ,
ಮತ್ತು ..,
ರಕ್ತದಾನ ಮಾಡಲು ಪ್ರೇರೇಪಿಸಲು ಶ್ರಮವಹಿಸಿದ ಎಲ್ಲಾ ಸಹೃದಯಿ ಬಂಧುಗಳಿಗೆ,
ತಮ್ಮ ಸಮಾಜಮುಖಿ ಕಾಳಜಿ,ಬದ್ದತೆಗಳಿಗಾಗಿ ಕರ್ನಾಟಕ ರಾಜ್ಯ ಸಂಘ, ತೀರ್ಥಹಳ್ಳಿ ತಾಲ್ಲೂಕು ಶಾಖೆಯು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ.
ಕಾರ್ಯಕ್ರಮದ ಯಶಸ್ಸಿಗೆ ವಿಶೇಷ ಶ್ರಮವಹಿಸಿದ ನಮ್ಮ ಸಂಘದ ನಿಕಟಪೂರ್ವ ಗೌರವಾಧ್ಯಕ್ಷ ಶ್ರೀ ಆರ್ ಎಂ ಧರ್ಮಕುಮಾರ್, ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಶ್ರೀ ಮಂಜಣ್ಣ, ನಮ್ಮ ಸಂಘದ ಕ್ರೀಡಾ ಕಾರ್ಯದರ್ಶಿ ಶ್ರೀ ಜಯಪ್ರಕಾಶ್, ಜಂಟಿ ಕಾರ್ಯದರ್ಶಿ ಶ್ರೀ ಕೌಶಿಕ್, ಉಪಾಧ್ಯಕ್ಷರುಗಳಾದ ಶ್ರೀ ರಾಘವೇಂದ್ರ ಎಸ್, ಶ್ರೀಮತಿ ಸುಷ್ಮಾ ಎಸ್ ಪಿ, ಜಂಟಿ ಕಾರ್ಯದರ್ಶಿ ಶ್ರೀ ಎಲ್ಲಪ್ಪ ವಡ್ಡರ್, ಕೃಷಿ ಅಧಿಕಾರಿ ಶ್ರೀ ಅಜಿತ್, ಪೋಲಿಸ್ ಅಧಿಕಾರಿಗಳಾದ ಶ್ರೀ ಎಲ್ಲಪ್ಪನವರ್,ಶ್ರೀ ಶಿವಾನಂದ ಕೋಲಿ, ಸಹೃದಯಿ ನಾಗರೀಕ ಬಂಧುಗಳಾದ ಮಾರಿಕಾಂಬ ಡ್ರೈವಿಂಗ್ ಸ್ಕೂಲ್ ನ ಶ್ರೀ ಕವಿರಾಜ್, ಶ್ರೀ ಸುಭಾಷ್,ಕೃಷಿಕ ಶ್ರೀ ಮಹೇಶ್ವರ,ರಜತ್ ಮೋಟರ್ಸ್ ನ ಟಿ ವಿ ಸುರೇಶ್ ಶೆಟ್ಟಿ, ಸಂಘದ ಮ್ಯಾನೇಜರ್ ಶ್ರೀ ಕಾಡಪ್ಪ ಗೌಡ ಸೇರಿದಂತೆ ಎಲ್ಲಾ ಸಹೃದಯಿ ಬಂಧುಗಳಿಗೂ ತುಂಬು ಹೃದಯದ ಧನ್ಯವಾದಗಳು.
ಇಲಾಖಾವಾರು ರಕ್ತದಾನಿಗಳ ವಿವರ ಈ ಕೆಳಕಂಡಂತಿದೆ.
ಕಂದಾಯ. : 10
ಆರ್ ಡಿ ಪಿ ಆರ್ : 6
ಕೃಷಿ : 5
ಸಾರ್ವಜನಿಕ ಬಂಧುಗಳು: 5
ಆರೋಗ್ಯ. : 4
ಭೂಮಾಪನಾ : 2
ಪೋಲಿಸ್ : 2
——————————-
ಒಟ್ಟು : 34
——————————
ಇದೇ ದಿನ ಪ್ರಥಮ ಬಾರಿ ರಕ್ತದಾನ ಮಾಡಿದ ದಾನಿಗಳ ಸಂಖ್ಯೆ : 7
ರಕ್ತದಾನ ಮಾಡಿದ, ಸಹಕರಿಸಿದ ಎಲ್ಲಾ ಸಹೃದಯಿ ಬಂಧುಗಳಿಗೂ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು.
🙏🙏🙏🙏🙏🙏🙏🙏
ಅಧ್ಯಕ್ಷರು ಮತ್ತು ಸದಸ್ಯರು ರಾಜ್ಯ ಸರ್ಕಾರಿ ನೌಕರರ ಸಂಘ
ತಾಲ್ಲೂಕು ಶಾಖೆ, ತೀರ್ಥಹಳ್ಳಿ…
ವರದಿ.. ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305/7892830899…