
ರಾಜ್ಯ ಸರ್ಕಾರಿ ನೌಕರರ ಸಂಘ,ತಾಲ್ಲೂಕು ಶಾಖೆ ತೀರ್ಥಹಳ್ಳಿಯಲ್ಲಿ 75 ನೇ ಸ್ವಾತಂತ್ರೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಟಿ ವಿ ಸತೀಶ ಧ್ವಜಾರೋಹಣ ನೆರವೇರಿಸಿದರು. ಹಿರಿಯ ನಾಗರೀಕ ಕಾಡಪ್ಪ ಗೌಡರು ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಬಲಿದಾನಗಳನ್ನು ಸ್ಮರಿಸಿ ಇಂದಿನ ಹಾಗೂ ಮುಂದಿನ ಪೀಳಿಗೆ ಅವರಿಗೆ ಸದಾ ಕೃತಜ್ಞರಾಗಿರಬೇಕು ಎಂದರು.
ಸಂಘದ ಕಾರ್ಯದರ್ಶಿ ರಾಮು ಬಿ, ಉಪಾಧ್ಯಕ್ಷರುಗಳಾದ ಸುಭಾಷ್ ಬಾಬು, ಸುಷ್ಮ ಎಸ್ ಪಿ, ಜಂಟಿ ಕಾರ್ಯದರ್ಶಿ ಕೌಶಿಕ್, ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್, ನಿಕಟಪೂರ್ವ ಗೌರವಾಧ್ಯಕ್ಷ ಆರ್ ಎಂ ಧರ್ಮಕುಮಾರ್, ಶಿರಸ್ತೇದಾರ್ ಮೇಘರಾಜ್, ಗ್ರಾಮ ಲೆಕ್ಕಾಧಿಕಾರಿ ವಿಘ್ನೇಶ್ ಮತ್ತಿತರರು ಇದ್ದರು.
ಸ್ವಾತಂತ್ರೋತ್ಸವದ ಪ್ರಯುಕ್ತ ಸಂಘದ ವತಿಯಿಂದ ಸತತ ಐದನೇ ವರ್ಷದ ರಕ್ತದಾನದಲ್ಲಿ ಪಾಲ್ಗೊಂಡ ಸಂಘದ ಪದಾಧಿಕಾರಿಗಳು, ಸದಸ್ಯರು, ಸಹೃದಯಿ ನಾಗರೀಕ ಬಂಧುಗಳು ರೋಟರಿ ಐಎಂಎ ರಕ್ತನಿಧಿಯಲ್ಲಿ ಉತ್ಸಾಹ ಸಡಗರ ಸಂಭ್ರಮದಿಂದ ರಕ್ತದಾನ ಮಾಡಿದರು. ತಹಶಿಲ್ದಾರ್ ಡಾ. ಶ್ರೀಪಾದ ಆಗಮಿಸಿ ಸಂಘದ ನಿರಂತರ ಸಮಾಜಮುಖಿ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.
ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಕಟ್ಟೆ ಮಂಜುನಾಥ್ ಮತ್ತು ಸಂಘದ ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್ ನೇತೃತ್ವದ ಕಂದಾಯ ಇಲಾಖಾ ತಂಡ, ಸಂಘದ ಉಪಾಧ್ಯಕ್ಷ ರಾಘವೇಂದ್ರ ಎಸ್ ನೇತೃತ್ವದ ಆರ್ ಡಿ ಪಿ ಆರ್ ತಂಡ, ಜಂಟಿ ಕಾರ್ಯದರ್ಶಿ ಕೌಶಿಕ್ ನೇತೃತ್ವದ ಕೃಷಿ ಇಲಾಖಾ ತಂಡ, ಉಪಾಧ್ಯಕ್ಷೆ ಸುಷ್ಮ ಎಸ್ ಪಿ ನೇತೃತ್ವದ ಭೂಮಾಪನ ತಂಡ, ಆರಕ್ಷಕ ಉಪನಿರೀಕ್ಷಕರಾದ ಎಲ್ಲಪ್ಪನವರ್ ನೇತೃತ್ವದ ಪೋಲಿಸ್ ತಂಡ, ರಾಘವೇಂದ್ರ ನೇತೃತ್ವದ ಆರೋಗ್ಯ ಇಲಾಖಾ ತಂಡಗಳ ಜೊತೆಗೆ ಉಪನ್ಯಾಸಕ ಕೆ ನಾಗಭೂಷಣ, ಮಾರಿಕಾಂಬ ಡ್ರೈವಿಂಗ್ ಶಾಲೆಯ ಕವಿರಾಜ್, ಸುಭಾಷ್, ರಜತ್ ಮೋಟರ್ಸ್ ನ ಸುರೇಶ್ ಶೆಟ್ಟಿ, ಕೃಷಿಕ ಮಹೇಶ್ವರ, ಉದ್ಯಮಿ ಯಜ್ಞನಾರಾಯಣ ಉಡುಪ, ವಿದ್ಯಾರ್ಥಿ ನಚಿಕೇತ್ ಎಸ್ ಶೆಟ್ಟಿ ಮುಂತಾದವರು ರಕ್ತದಾನ ಮಾಡಿ ಸಂಭ್ರಮಿಸಿದರು.
ಏಳು ಜನ ಇದೇ ಪ್ರಥಮ ಬಾರಿಗೆ ರಕ್ತದಾನ ಮಾಡುವ ಮೂಲಕ ರಕ್ತದಾನಿಗಳ ತಂಡಕ್ಕೆ ಸೇರ್ಪಡೆಗೊಂಡಿದ್ದು ವಿಶೇಷವಾಗಿತ್ತು
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿವಾಗಿ ಪಾಲ್ಗೊಂಡು ಎಪ್ಪತ್ತೈದನೇ ಸ್ವಾತಂತ್ರೋತ್ಸವದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಿದ ಎಲ್ಲಾ ಸಹೃದಯಿಗಳಿಗೂ ಸಂಘದ ಅಧ್ಯಕ್ಷ ಟಿ ವಿ ಸತೀಶ, ಕಾರ್ಯದರ್ಶಿ ರಾಮು ಬಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ವರದಿ.. ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305/7892830899…