
ಹಾಗೆಯೇ ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಧ್ವಜಾರೋಹಣ ನೆರವೇರಿಸಿದರು. ಹಾಗೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆಯಿತು ಈಗ ನಾವು ಏನು ಜೀವನ ಮಾಡುತ್ತಿದ್ದೇವೆ,
ಅದಕ್ಕೆ ಕಾರಣ ತಮಗೆ ಸ್ವಾತಂತ್ರ ತಂದುಕೊಟ್ಟ ವೀರ ಸೇನಾನಿಗಳು, ಅವರಿಗೆ ನಾವು ಯಾವಾಗಲೂ ಋಣಿಯಾಗಿರಬೇಕು. ಆ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ , ದಿಂದ ನಾವು ಈಗ ನೆಮ್ಮದಿಯಾಗಿ ಬ್ರಿಟಿಷರಿಂದ ಮುಕ್ತವಾಗಿ ಜೀವನ ನಡೆಸುತ್ತಿದ್ದೇವೆ.ಈ ಸುಸಂದರ್ಭ ನಾವು ಪಾಲ್ಗೊಂಡು ಧ್ವಜಾರೋಹಣ ಮಾಡುತ್ತಿರುವುದು ಹೆಮ್ಮೆಯ ವಿಷಯ ಎನಿಸುತ್ತದೆ ಎಂದು ಹೇಳಿದರು .
ಈ ಸಮಯದಲ್ಲಿ ವಾಲ್ಮೀಕಿ ಸಮಾಜದ ಸದಸ್ಯರು,ಗ್ರಾಮದ ಗುರುಹಿರಿಯರು, ಸರ್ಕಾರಿ ಶಾಲೆಯ ಸಿಬ್ಬಂದಿ ವರ್ಗದವರು, ಗುರುಗಳಾದ ಮಕಾಶಿ ಸಿ ಅಂಗಡಿ, ಕವಿತಾ ಬಾ ತಳವಾರ,ನಾಗಮ್ಮ, ನಿರ್ಮಲ ಕೊಡತಗೆರೆ, ಸುಮಂಗಲ ವಸ್ತ್ರದ್, ಮುಂತಾದವರು ಉಪಸ್ಥಿತರಿದ್ದರು….
ವರದಿ… ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/78928308999…
.