
ಗಜೇಂದ್ರಗಡ ನಗರದಲ್ಲಿ ನಡೆದ ಗಾನ ಕೋಗಿಲೆ ವೇದಿಕೆ ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ಬಸವಂತಪ್ಪ ಎಚ್ ತಳವಾರ ಮಾಜಿ ಅಧ್ಯಕ್ಷರು ಗದಗ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ , ರೋಣ ತಾಲೂಕು ಶ್ರೀ ಮಹಶ್ರೀ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರು ನೆರವೇರಿಸಿದರು.
ನಂತರ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಯುವಕ-ಯುವತಿಯರು ಹೆಚ್ಚಾಗಿ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮಗೆ ಸಿಕ್ಕಿರುವ ಅವಕಾಶಗಳನ್ನು ಉಪಯೋಗ ಪಡಿಸಿಕೊಳ್ಳಬೇಕು.

ಹಾಗೆ ಗ್ರಾಮೀಣ ಭಾಗದ ಯುವಕ ಯುವತಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಎನ್ ಕೆ ಎಸ್ ಟಿವಿ ಕನ್ನಡ ವಾಹಿನಿಯಲ್ಲಿ ಗಾನಕೋಗಿಲೆ ಗಾಯಕ ಕಾರ್ಯಕ್ರಮ ಪ್ರಾರಂಭ ಮಾಡಿರುವುದು ಸಂತೋಷದ ಸಂಗತಿ.
ಹೋದವರ್ಷ ಅಂದರೆ 2019- 20 ರಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಕೋರೋಣ ಸಾಂಕ್ರಮಿಕ ಕಾಯಿಲೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು.
ಈಗ ಪುನಃ ಪ್ರಾರಂಭ ಮಾಡಿರುವುದು ಸಂತೋಷದ ಸಂಗತಿ ಹಾಗಾಗಿ ತಮ್ಮೆಲ್ಲರಿಗೂ ಧನ್ಯವಾದಗಳು ಎಂದು ತಮ್ಮ ಮಾತು ಮುಗಿಸಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ/ ಆರ್ ಎಸ್ ಜೀರೆ, ಅಶೋಕ್ ವನ್ನಾಲ, ಗ್ರಾಮೀಣ ಪ್ರದೇಶದಲ್ಲಿ ಯುವಕ-ಯುವತಿಯರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಬಣ್ಣ ಕೇಸರಿ, ಬಸಣ್ಣ ಕಟ್ಟಿ, ಶಂಕರ್ ಉರವ ಕೋಡ್, ಎಂಡಿ,ಎನ್ ಕೆ ಮಹೇಶ್, ಎನ್ ಕೆ ಎಸ್ ಗೌಡರ್, ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು….
ವರದಿ… ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…