
ಉದ್ಯಮಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿರುವ ಸರ್ಕಾರಿ ಸಭೆಯಲ್ಲಿ ಅವರ ಪುತ್ರ ಭರತ್ ಪಾಲ್ಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹಿಂದೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಗ ವಿಜಯೇಂದ್ರ ಅವರ ಹಸ್ತಕ್ಷೇಪ ಸರ್ಕಾರದಲ್ಲಿ ಇತ್ತು ಎನ್ನುವ ನೇರ ಆರೋಪಗಳು ಕೇಳಿ ಬಂದಿದ್ದವು.ಅದೇ ಕಾರಣಕ್ಕಾಗಿ ಮುಖ್ಯಮಂತ್ರಿ ಪಟ್ಟದಿಂದ ಇಳಿಯಬೇಕಾಗಿ ಬಂತು ಎನ್ನುವ ಮಾತುಗಳನ್ನು ಅವರ ಪಕ್ಷದ ಶಾಸಕರುಗಳು ನೇರವಾಗಿ ಹೇಳಿದ್ದಾರೆ.
ಈಗ ಬಸವರಾಜ್ ಬೊಮ್ಮಾಯಿ ಕೂಡ ಅಂತಹ ಆಪಾದನೆಗೆ ಗುರಿಯಾಗುತ್ತಾರ ? ತಮ್ಮ ಮಗನನ್ನು ಸರ್ಕಾರಿ ಕಾರ್ಯಕ್ರಮಗಳ ಸಭೆಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಿರುವುದು ಮತ್ತೊಂದು ವಂಶಪಾರಂಪರ್ಯ ರಾಜಕೀಯ ಹುಟ್ಟುಹಾಕುತ್ತಾ? ಎನ್ನುವುದು ಹಲವರ ಪ್ರಶ್ನೆ.
ಒಂದಷ್ಟು ಮಹತ್ವದ ಬದಲಾವಣೆಗಳನ್ನು ತರುವುದರ ಮುಖಾಂತರ ರಾಜಕೀಯದಲ್ಲಿ ಹೊಸ ಸಂಚಲನವನ್ನು ಉಂಟುಮಾಡುವ ಪ್ರಯತ್ನದಲ್ಲಿರುವ ಬೊಮ್ಮಾಯಿ ಅವರಿಗೆ ಪುತ್ರ ಪ್ರೇಮ ಹಿನ್ನಡೆ ಆಗಬಾರದು.
ಮುಖ್ಯಮಂತ್ರಿಗಳು ಈಗಲೇ ಇದನ್ನು ಸರಿಪಡಿಸಿಕೊಂಡರೆ ಒಳಿತು…
ವರದಿ …ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…