
ಕ್ರಾಂತಿ ಭಗತ್ ಪತ್ರಿಕೆಯ ಸಂಪಾದಕರು ಹಿರಿಯ ಪತ್ರಕರ್ತರು ಆದ ಕಾಮ್ರೇಡ್ ಕೆ ಲಿಂಗಪ್ಪ (97) ಇಂದು ನಿಧನವಾಗಿದ್ದಾರೆ.
ಹೋರಾಟದ ಮೂಲಕ ಪತ್ರಿಕೋದ್ಯಮಕ್ಕೆ ಬಂದ ಹಿರಿಯ ಪತ್ರಕರ್ತರಾದ ಕಾಮ್ರೇಡ್ ಕೆ ಲಿಂಗಪ್ಪನವರು ಯುವ ಪತ್ರಕರ್ತರಿಗೆ ಸದಾ ಮಾರ್ಗದರ್ಶಕರಾಗಿದ್ದರು.
ಇಳಿ ವಯಸ್ಸಿನಲ್ಲೂ ಕ್ರಿಯಾಶೀಲರಾಗಿ ಓಡಾಡುತ್ತಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ರಾಜಕಾರಣಿಗಳೊಂದಿಗೆ ನಿರಂತರವಾಗಿ ತಮ್ಮ ಬರಹಗಳ ಮೂಲಕ ನೇರವಾಗಿ ಸಂಘರ್ಷಕ್ಕೆ ಇಳಿಯುತ್ತಿದ್ದ ಕಾಮ್ರೇಡ್ ಲಿಂಗಪ್ಪನವರು ಹಲವರ ನಿಷ್ಠೂರವನ್ನು ಕಟ್ಟಿಕೊಂಡಿದ್ದರು.
ಸದಾ ಚಟುವಟಿಕೆಯಿಂದ ಇರುತ್ತಿದ್ದ ಸದಾ ಎಲ್ಲೇ ಸಿಕ್ಕರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಹಿರಿಯ ಜೀವ ಇಂದು ಇಲ್ಲ ಎನ್ನುವುದು ಇಡೀ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಅವರ ಆತ್ಮಕ್ಕೆ ಶಾಂತಿ ಸಿಗಲಿ …
ರಘುರಾಜ್ ಹೆಚ್.ಕೆ..9449553305…