Wednesday, April 30, 2025
Google search engine
Homeಅಂತಾರಾಷ್ಟ್ರೀಯಭಾರತೀಯರ ಪಾಸ್ಪೋರ್ಟ್ ಗಳನ್ನು ಪರಿಶೀಲಿಸಿದ ತಾಲಿಬಾನಿ ಉಗ್ರರು ಅಫ್ಘಾನಿಸ್ತಾನದಿಂದ ಇಂದು 500 ಜನ...

ಭಾರತೀಯರ ಪಾಸ್ಪೋರ್ಟ್ ಗಳನ್ನು ಪರಿಶೀಲಿಸಿದ ತಾಲಿಬಾನಿ ಉಗ್ರರು ಅಫ್ಘಾನಿಸ್ತಾನದಿಂದ ಇಂದು 500 ಜನ ಭಾರತಕ್ಕೆ…‌ಭಾರತೀಯರ ಜೀವಕ್ಕೆ ಉಗ್ರರಿಂದ ಅಪಾಯವಿದೆಯಾ?

ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಸಿಲುಕಿದ್ದ 87 ಭಾರತೀಯರ ರಕ್ಷಣೆ ಮಾಡಲಾಗಿರುವ ಬಗ್ಗೆಯೂ ತಿಳಿದುಬಂದಿದೆ. 87 ಭಾರತೀಯರನ್ನು ರಕ್ಷಿಸಿ ತಜಕಿಸ್ತಾನದಿಂದ ಏರ್‌ಲಿಫ್ಟ್ ಮಾಡಲಾಗಿದ್ದು.


ದೋಹಾ ಮಾರ್ಗವಾಗಿ ಒಟ್ಟು 135 ಭಾರತೀಯರ ಸ್ಥಳಾಂತರ ಮಾಡಲಾಗುತ್ತದೆ ಎಂದು ಕತಾರ್‌ನಲ್ಲಿರುವ ಭಾರತದ ದೂತಾವಾಸದಿಂದ ಮಾಹಿತಿ ಲಭ್ಯವಾಗಿದೆ. ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ಹಿನ್ನೆಲೆಯಲ್ಲಿ ಅಲ್ಲಿನ ಜನರು ಹಾಗೂ ಅಫ್ಘಾನ್​ನಲ್ಲಿ ನೆಲೆಸಿರುವ ವಿವಿಧ ದೇಶಗಳ ಪ್ರಜೆಗಳು ಅಭದ್ರತೆ, ಆತಂಕದಿಂದ ಇದ್ದಾರೆ. ಹೀಗಾಗಿ, ಹಲವು ದೇಶಗಳು ತಮ್ಮ ನಾಗರಿಕರನ್ನು ಸ್ವದೇಶಕ್ಕೆ ಮರಳಿ ಕರೆತರುವ ಪ್ರಯತ್ನದಲ್ಲಿ ಇದೆ. ಇದೀಗ ಆಫ್ಘನ್​ನಿಂದ ಮೊದಲ ಬ್ಯಾಚ್​ನಲ್ಲಿ 135 ಜನರನ್ನು ಸ್ಥಳಾಂತರ ಮಾಡಲಾಗುವುದು ಎಂದು ಮಾಹಿತಿ ತಿಳಿದುಬಂದಿದೆ.

ಆಫ್ಘನ್‌ನಿಂದ ಇಂದು 500ಕ್ಕೂ ಹೆಚ್ಚು ಜನರ ಸ್ಥಳಾಂತರ ಮಾಡಲಾಗುವುದು. ಅಫ್ಘಾನಿಸ್ತಾನದ ವಿವಿಧ ಸ್ಥಳಗಳಿಂದ ಭಾರತಕ್ಕೆ ಏರ್‌ಲಿಫ್ಟ್ ಮಾಡಲಾಗುವುದು ಎಂಬ ಬಗ್ಗೆಯೂ ತಿಳಿದುಬಂದಿದೆ. ಅಫ್ಘಾನಿಸ್ತಾನದ ವಿವಿಧ ಕಡೆಗಳಿಂದ ಸುಮಾರು 500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗುವ ಬಗ್ಗೆ ಮಾಹಿತಿ ಲಭಿಸಿದೆ.

ಆಫ್ಘನ್‌ನ ಕಾಬೂಲ್‌ನಲ್ಲಿ ಸಿಲುಕಿದ್ದ 87 ಭಾರತೀಯರ ರಕ್ಷಣೆ ಮಾಡಲಾಗಿರುವ ಬಗ್ಗೆಯೂ ತಿಳಿದುಬಂದಿದೆ. 87 ಭಾರತೀಯರನ್ನು ರಕ್ಷಿಸಿ ತಜಕಿಸ್ತಾನದಿಂದ ಏರ್‌ಲಿಫ್ಟ್ ಮಾಡಲಾಗಿದೆ. ತಜಕಿಸ್ತಾನದಿಂದ ದೆಹಲಿಗೆ 87 ಭಾರತೀಯರ ಏರ್‌ಲಿಫ್ಟ್ ಮಾಡಲಾಗುತ್ತದೆ. ಭಾರತೀಯರ ಜತೆ ಇಬ್ಬರು ನೇಪಾಳಿಗರು ಕೂಡ ಸ್ಥಳಾಂತರ ಎಂದು ತಿಳಿದುಬಂದಿದೆ. ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆ ಮಾಡುವುದಾಗಿ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆ ಭರವಸೆ ನೀಡಿದೆ.

ಭಾರತೀಯರ ರಕ್ಷಣೆಗೆ ವಾಯುಪಡೆಯ C-17 ಗ್ಲೋಬ್ ಮಾಸ್ಟರ್, C-130J ವಿಮಾನ ಸನ್ನದ್ಧವಾಗಿದೆ. ಭಾರತದ 2 ವಿಮಾನಗಳ ಹಾರಾಟಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ. ಸದ್ಯ, ಅಮೆರಿಕದ ನಿಯಂತ್ರಣದಲ್ಲಿ ಕಾಬೂಲ್ ಏರ್‌ಪೋರ್ಟ್ ಇದೆ. 107 ಭಾರತೀಯರು ಸೇರಿದಂತೆ 168 ಜನರ ಏರ್‌ಲಿಫ್ಟ್ ಮಾಡಲಾಗಿದೆ.

ಕನ್ನಡಿಗರ ರಕ್ಷಣೆಯ ಬಗ್ಗೆಯೂ ಶ್ರಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕರ್ನಾಟಕದ ಜನರ ರಕ್ಷಣೆಗಾಗಿ ಹಾಗೂ ಅವರ ಸಹಾಯಕ್ಕಾಗಿ ಕರ್ನಾಟಕದಲ್ಲಿ ಒಬ್ಬ ನೋಡಲ್ ಅಧಿಕಾರಿಯ ನೇಮಕ ಮಾಡಲಾಗಿದೆ.


ಕಿಡ್ನ್ಯಾಪ್ ಆಗಿದ್ದಾರೆ ಎನ್ನಲಾದ 150 ಮಂದಿ ರಕ್ಷಣೆ
ಅಫ್ಘಾನಿಸ್ತಾನದ ಕಾಬೂಲ್​ ಏರ್​ಪೋರ್ಟ್​ನಿಂದ ಕಿಡ್ನ್ಯಾಪ್​ ಆಗಿದ್ದಾರೆ ಎನ್ನಲಾಗಿದ್ದ 150 ಭಾರತೀಯರು ಸುರಕ್ಷಿತವಾಗಿರುವ ಕುರಿತು ಶನಿವಾರ (ಆಗಸ್ಟ್ 21) ಮಾಹಿತಿ ಲಭ್ಯವಾಗಿತ್ತು. ಭಾರತೀಯರ ಪಾಸ್​ಪೋರ್ಟ್ ಪರಿಶೀಲಿಸಿದ ತಾಲಿಬಾನಿಗಳು ಕಾಬೂಲ್ ಏರ್​​ಪೋರ್ಟ್ ಬಳಿ ವಾಪಸ್ ಬಿಡುವ ಭರವಸೆ ನೀಡಿದ್ದರು. ಬಳಿಕ, ಅವರೆಲ್ಲರೂ ಸುರಕ್ಷಿತವಾಗಿದ್ದು ಕಾಬೂಲ್​ ವಿಮಾನ ನಿಲ್ದಾಣದ ಬಳಿ ಇರುವ ಗ್ಯಾರೇಜ್​ನಲ್ಲಿ ಇದ್ದಾರೆ ಎಂದು ತಿಳಿದುಬಂದಿತ್ತು.

150 ಭಾರತೀಯರನ್ನು ಕಿಡ್ನ್ಯಾಪ್​ ಮಾಡಿರುವ ಬಗ್ಗೆ ಕಾಬೂಲ್​ನ ಭಾರತೀಯ ದೂತಾವಾಸದ ಸಿಬ್ಬಂದಿ ಕೆಲ ಗಂಟೆಗಳ ಹಿಂದಷ್ಟೇ ಮಾಹಿತಿ ನೀಡಿದ್ದರು. ರಾಯಭಾರ ಕಚೇರಿಯ ಸ್ಥಳೀಯ ಸಿಬ್ಬಂದಿಯಿಂದ ಮಾಹಿತಿ ದೊರೆತಿದ್ದು, ಈ ಬಗ್ಗೆ ಅಫ್ಘಾನಿಸ್ತಾನದ ಮುಸ್ಲಿಂ ಶಿರಜಾದ್​ನಿಂದ ಮಾಡಿರುವ ಟ್ವೀಟ್​ ಲಭ್ಯವಾಗಿತ್ತು. ಆದರೆ, ಭಾರತೀಯರ ಕಿಡ್ನ್ಯಾಪ್​ ಆಗಿರುವ ಬಗ್ಗೆ ಭಾರತ ಸರ್ಕಾರ ತಕ್ಷಣ ಯಾವುದೇ ಖಚಿತತೆ ನೀಡಿರಲಿಲ್ಲ. ಜತೆಗೆ, ಭಾರತದ ವಿದೇಶಾಂಗ ಇಲಾಖೆ ಕೂಡಾ ಅಧಿಕೃತ ಮಾಹಿತಿ ನೀಡಿರಲಿಲ್ಲ. ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಬಿತ್ತರವಾದ ಮಾಹಿತಿ ಆಧರಿಸಿ ಘಟನೆಯ ಬಗ್ಗೆ ತಿಳಿದುಕೊಳ್ಳಲಾಗಿತ್ತು.

ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ ಕಿಡ್ನ್ಯಾಪ್​ ಆಗಿದ್ದಾರೆ ಎನ್ನಲಾಗಿದ್ದ 150 ಮಂದಿ ಭಾರತೀಯರೂ ಸುರಕ್ಷಿತವಾಗಿದ್ದಾರೆ. ಭಾರತೀಯರ ಪಾಸ್​ಪೋರ್ಟ್​ಗಳನ್ನು ತಾಲಿಬಾನ್ ಉಗ್ರರು ಪರಿಶೀಲಿಸಿದ್ದರಾದರೂ ಯಾವುದೇ ರೀತಿಯ ಜೀವಹಾನಿ ಮಾಡಿಲ್ಲ ಎಂದು ಇತ್ತೀಚಿನ ವರದಿಗಳು ತಿಳಿಸಿವೆ..

ವರದಿ… ರಘುರಾಜ್ ಹೆಚ್. ಕೆ

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...