ಹರಿಹರ>>ಆಗಸ್ಟ್ >20>>ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಗ್ರಾಮಾಂತರ ಠಾಣೆಗೆ ನೂತನ ಪಿಎಸ್ಐ ಆಗಿ ಮಲೆಬೆನ್ನೂರು ಪೋಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಿಎಸ್ಐ ವೀರಬಸಪ್ಪ ಕುಸಲಾಪುರ ಅವರು ಹರಿಹರದ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿ ಇಂದು ಅಧಿಕಾರ ಸ್ವೀಕರಿಸಿದರು. ಅವರ ಆರಾಧ್ಯ ದೇವರಾದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.ನಂತರ ಹರಿಹರ ಗ್ರಾಮಂತರ ಠಾಣೆಗೆ ಆಗಮಿಸಿದ್ದರು. ಠಾಣೆಯ ಸಿಬ್ಬಂದಿಗಳು ಬರಮಾಡಿಕೊಂಡು ಶುಭ ಹಾರೈಸಿದರು.
ಅದೇ ರೀತಿ ಹರಿಹರ ಗ್ರಾಮಾಂತರ ಠಾಣೆಯಲ್ಲಿದ್ದ ಪಿಎಸ್ಐ ರವಿಕುಮಾರ್ ರವರು ಹರಿಹರ ಗ್ರಾಮಂತರ ಠಾಣೆಯಿಂದ. ಮಲೆಬೆನ್ನೂರು ಠಾಣೆಗೆ ವರ್ಗಾವಣೆ ಆಗಿ ಅಧಿಕಾರ ಸ್ವೀಕರಿಸಿದರು. ಪಿಎಸ್ಐ ರವಿಕುಮಾರ್ ಅವರು ಪೊಲೀಸ್ ಠಾಣೆ ಆವರಣದಲ್ಲಿರುವ ಸಿದ್ದಿ ವಿನಾಯಕನಿಗೆ ಪೂಜೆ ಸಲ್ಲಿಸಿ ಠಾಣೆಗೆ ತೆರಳಿದರು.ಪಿಎಸ್ಐ ರವಿಕುಮಾರ್ ಅವರಿಗೆ ಮೇಲೆಬೆನ್ನೂರು ಠಾಣೆಯ ಸಿಬ್ಬಂದಿಗಳು ಸ್ವಾಗತ ಕೋರಿದರು.
ವರದಿ.. ಶ್ರೀನಿವಾಸ್ ಆರ್..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…