Wednesday, April 30, 2025
Google search engine
Homeತೀರ್ಥಹಳ್ಳಿಡಾ/ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ...

ಡಾ/ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘ..!!

ಸಂಘದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಟಿ ವಿ ಸತೀಶ, ಡಾ.ಬಿ.ಅರ್. ಅಂಬೇಡ್ಕರ್ ಎಂತಹ ದೊಡ್ಡ ವ್ಯಕ್ತಿಯಾಗಿದ್ದರು ಎಂಬುದನ್ನು ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಅವರಿಗೆ ಅರವತ್ತು ವರ್ಷವಾದಾಗ ಸಮಾಜ ಬಾಂಧವರು ಹಮ್ಮಿಕೊಂಡಿದ್ದ ಒಂದು ಅಭಿನಂಧನಾ ಸಮಾರಂಭದಲ್ಲಿ ಅವರು ಮಾಡಿದ್ದ ಭಾಷಣ ಒಂದನ್ನು ಕೇಳಿದರೆ  ಸಾಕು ಅವರದ್ದು ಎಷ್ಟೊಂದು ದೊಡ್ಡ ವ್ಯಕ್ತಿತ್ವ ಎಂಬ ಅರಿವಾಗುತ್ತದೆ ಎಂದರು. ಮುಂದುವರೆದು..,

ಅವರ ಬದುಕಿನ ಇಡೀ ಚಿತ್ರಣಗಳು ಅಲ್ಲಿ ದಕ್ಕುತ್ತವೆ. ತೀರಾ ಸಾಮಾನ್ಯ ಬಾಲಕನೊಬ್ಬ ಅದರಲ್ಲೂ ಇತರರಿಂದ ಮಾತ್ರವಲ್ಲ ತಮ್ಮವರಿಂದಲೂ ತಾತ್ಸಾರಕ್ಕೆ ಗುರಿಯಾಗಿದ್ದ ಬಾಲಕನೊಬ್ಬ ಇಡೀ ದೇಶವೇ ಮೆಚ್ಚುವಂತೆ ಬೆಳೆದು ನಿಂತಿರುವ ಹಿಂದಿನ ಬಹು ದೊಡ್ಡ ಶ್ರಮ, ಹೋರಾಟ,ಸ್ವಾಭಿಮಾನಗಳೆಲ್ಲದರ ಅರಿವಾಗುತ್ತದೆ.

 ಅವರು ಮೂವರನ್ನು ತಮ್ಮ ಗುರುಗಳಾಗಿ ಸ್ವೀಕರಿಸಿದ್ದರು.ಅವರ ಮೊದಲನೆಯ ಸರ್ವೋಚ್ಚ ಗುರು ಬುದ್ದ, ಎರಡನೇ ಗುರು ಸಂತ ಕಬೀರ,ಮೂರನೇ ಗುರು ಜ್ಯೋತಿಬಾಪುಲೆ, ಇದಾದ ನಂತರ ಅವರಿಗೆ ಮೂವರು ದೇವತೆಗಳಿದ್ದರು ಪ್ರಥಮ ದೇವತೆ ಜ್ಞಾನ, ಅವರ ದಿಲ್ಲಿಯ ಮನೆಯಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದವು. ದ್ವಿತೀಯ ದೇವತೆ ಆತ್ಮ ಗೌರವ, ತೃತೀಯ ದೇವತೆ ಶೀಲ ಅಥವಾ ಗುಣ. ನಾವು ಮತ್ತು ನಮ್ಮ ಯುವ ಪೀಳಿಗೆ ಅನುಸರಿಸಲೇ ಬೇಕಿರುವ ಮಹತ್ವದ ಸಂಗತಿಗಳಿವು. 

ಇಂತಹ ಸಾಕಷ್ಟು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಅವರ ಭಾಷಣದ ಅನುವಾಧವನ್ನು ಎಫ್ ಹೆಚ್ ಜಕ್ಕಪ್ಪನವರ ಅನುವಾದಿಸಿ ಪ್ರಕಟಿಸಿದ್ದಾರೆ‌. "ಪುಸ್ತಕ ಮನೆ"ಯಲ್ಲಿ ಸಿಕ್ಕ ಈ ಭಾಷಣದ ಪ್ರತಿಗಳನ್ನು ಸಮಾಜಕ್ಕೆ ಹಂಚುವ ಮೂಲಕ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘ ಡಾ.ಬಿ.ಆರ್. ಅಂಬೇಡ್ಕರ್ ರವರ ಮಹಾನ್ ಬದುಕಿನ ಚಿತ್ರಣದ ಬಗ್ಗೆ ಅರಿವು ಮೂಡಿಸುವ ಪುಟ್ಡ ಪ್ರಯತ್ನವನ್ನು ನಡೆಸುವ ಮೂಲಕ ಅಂತಹ ಮಹಾನ್ ಚೇತನಕ್ಕೆ ನಮನ ಸಲ್ಲಿಸುವ ಕಾರ್ಯ  ಮಾಡುತ್ತಿದೆ ಎಂದರು.

ಪಟ್ಟಣದ ಕುವೆಂಪು ರಸ್ತೆಯ ವರ್ತಕರಿಗೆ,ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಡಾ.ಅಂಬೇಡ್ಕರ್ ರವರ ಭಾಷಣದ ಪ್ರತಿಗಳನ್ನು ಹಂಚಲಾಯಿತು. ಕಾರ್ಯದರ್ಶಿ ರಾಮು ಬಿ, ಖಜಾಂಚಿ ಹೆಚ್ ಸಿ ಪವಿತ್ರ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ನಿವೃತ್ತ ನೌಕರರ ಸಂಘದ ಹೆಚ್ ಆರ್ ಕೃಷ್ಣಮೂರ್ತಿ, ಕಾಡಪ್ಪ ಗೌಡ,ಸುಧಾಕರ ಶೆಟ್ಟಿ,ಗುಂಡಪ್ಪ ಗೌಡ ಮತ್ತಿತರು ಇದ್ದರು….

ರಘುರಾಜ್ ಹೆಚ್.ಕೆ..9449553305…

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...