
ಶಿವಮೊಗ್ಗ: “ನಗರದ ಹೊನ್ನಾಳಿ ರಸ್ತೆಯಲ್ಲಿರುವ ಡೇ ನಲ್ಮ್ ಯೋಜನೆ ಅಡಿ ನಿರ್ಮಾಣಗೊಂಡಿರುವ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನ ಆಚರಿಸಲಾಯಿತು.
ನಿರಾಶ್ರಿತರಿಗೆ ಅನುಕೂಲವಾಗಲೆಂದು ಪಾಲಿಕೆಯ ವತಿಯಿಂದ ನಿರ್ಮಿಸಿರುವ ಈ ವಸತಿ ರಹಿತರ ಕೇಂದ್ರದಲ್ಲಿ ಸುಮಾರು 40 ಜನರಿಗೆ ರಾತ್ರಿ ಹೊತ್ತಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಕಳೆದ ಒಂದು ವರ್ಷದಿಂದ ಈ ಕಟ್ಟಡದಲ್ಲಿ ಸೇವೆಯನ್ನ ಒದಗಿಸಲಾಗಿದೆ. ಇಂದು ಪಾಲಿಕೆ ನಲ್ಮ್ ಅಧಿಕಾರಿ ಅನುಪಮ, ಲೋಕೇಶ್ವರಪ್ಲ, ರತ್ನಾಕರ್, ರೇಣು, ಗೀತಾ ಹಾಗೂ ಸಿಬ್ವಂದಿಗಳು ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಣೆ ಮಾಡಿದರು…
ಹಾಗೆ ಈ ದಿನ ಬೃಹತ್ ಸೈಕಲ್ ಜಾಥಾದ ಮೂಲಕ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು..
ಈ ಜಾಥಾದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿಯ ಅನುಪಮ, ಸುಪ್ರಿಯಾ ,ರತ್ನಾಕರ್, ಲೋಕೇಶ್, ಗೀತಾ, ರೇಣು ಹಾಗೂ ಸೈಕಲ್ ಕ್ಲಬ್ ನ ಅಧ್ಯಕ್ಷರು ಕಾರ್ಯದರ್ಶಿ ಸದಸ್ಯರುಗಳು ಭಾಗವಹಿಸಿದ್ದರು….
