
ಶಿವಮೊಗ್ಗ: ಗ್ರಾಮಾಂತರ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಯಾಗಿರುವ ಜಿ ಪಲ್ಲವಿಯವರು ಕಳೆದ 10 ವರ್ಷಗಳಿಂದ ಶಿವಮೊಗ್ಗ ಕಾಂಗ್ರೆಸ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಕಳೆದ 2018ರ ವಿಧಾನ ಸಭಾ ಚುನಾವಣೆಯಲ್ಲಿ ಆಂಕಾಕ್ಷಿಯಾಗಿದ್ದ ಪಲ್ಲವಿಯವರಿಗೆ ಪ್ರಬಲ ಪೈಪೋಟಿಯ ನಡುವೆ ಕಡೆಯ ಕ್ಷಣದಲ್ಲಿ ಹೈಕಮಾಂಡ್ ಇವರನ್ನು ಮನವೊಲಿಸಿದ್ದು, ಟಿಕೆಟ್ ನಿಂದ ವಂಚಿತರಾಗಿದ್ದರು.
ಆದರೆ ಈ ಬಾರಿ ಪ್ರಭಲ ಪೈಪೋಟಿ ಏರ್ಪಟ್ಟಿದ್ದರೂ
ಸಹ ಕ್ಷೇತ್ರದಲ್ಲಿ ನಿರಂತರ ಜನಸಂಪರ್ಕ ಸಾಧಿಸಿದ್ದರಿಂದ ಕಾಂಗ್ರೆಸ್ ಎಲ್ಲಾ ಸಮಿಕ್ಷೆಗಳಲ್ಲಿಯೂ ಪಲ್ಲವಿಯವರ ಹೆಸರು ಮೊದಲ ಸ್ಥಾನದಲ್ಲಿ ಕಾಯ್ದುಕೊಳ್ಳವಲ್ಲಿ ಸಫಲರಾಗಿದ್ದರು. ಆದರೆ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ನಡುವಿನ ಜಾತಿ ಲಾಭಿಯಿಂದಾಗಿ ಗೊಂದಲ ಸೃಷ್ಟಿಯಾಗಿತ್ತು. ಆದಾಗ್ಯೂ ಸಹ ರಾಜ್ಯದ AKMS ಸಂಘಟನೆ, (ಕೊರಮ-ಕೊರಚ) ಕುಳುವ ಸಮಾಜದ ಏಕೈಕ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ರಾಜ್ಯಾದ್ಯಾಂತ ಒತ್ತಡ ಹೇರಿದ್ದರೂ ಹಾಗೂ ಇವರಿಗೆ ಬೆಂಬಲವಾಗಿ ಅಹಿಂದ, ದಲಿತಪರ ಸಂಘಟನೆಗಳ ಒಕ್ಕೂಟಗಳು ನಿಂತಿದ್ದವು. ಸಮಾಜಿಕ ನ್ಯಾಯದ ಅಡಿಯಲ್ಲಿ ಅಲೆಮಾರಿ ಕುಳುವ ಸಮಾಜಕ್ಕೆ ರಾಜಕೀಯ ನ್ಯಾಯ ಓದಗಿಸುವಂತೆ ಕಾಂಗ್ರೆಸ್ ನ ಹಿರಿಯ ನಾಯಕರನ್ನು ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರವನ್ನು ನಿಯೋಗಗಳು ನಿರಂತರವಾಗಿ ಸಂಪರ್ಕಿಸಿ ತೀವ್ರ ಓತ್ತಡ ಹೇರಿದ್ದರು.
ಈ ಎಲ್ಲಾ ಬೆಳವಣಿಗೆಯ ನಡುವೆಯು ಅಂತಿಮವಾಗಿ KPCC ಅಧ್ಯಕ್ಷರು, ವಿಪಕ್ಷನಾಯಕರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ದೆಹಲಿ ಹೈಕಮಾಂಡ್ ಈ ಬಾರಿ ಸಮಾಜಿಕ ನ್ಯಾಯದ ತತ್ವದಡಿ ಮತ್ತು ಮಹಿಳಾ ಸಬಲೀಕರಣದ ಹಿತದೃಷ್ಟಿಯಿಂದ ಪಲ್ಲವಿಯವರ ಹೆಸರು ಬಹುತೇಕ ಫೈನಲ್ ಆಗಿದೆ ಎನ್ನಲಾಗುತ್ತಿದೆ.
ಇಂದು ಅಥವಾ ನಾಳೆ ಬೆಳಿಗ್ಗೆ ಟಿಕೆಟ್ ಘೋಷಣೆಯಾಗುವ ನಿರೀಕ್ಷೆ ಇದೆ. ಈ ನಡುವೆ ಕಳೆದ ಭಾರಿಯ ಪರಾಜಿತ ಅಭ್ಯರ್ಥಿ ಎಸ್.ಕೆ ಶ್ರೀನಿವಾಸ್ ಕರಿಯಣ್ಣ, ರವಿಕುಮಾರ್ ,ಬಲದೇವಕೃಷ್ಣ ಕ್ಷೇತ್ರದ ಟಿಕೆಟ್ಗಾಗಿ ತೀವ್ರ ಲಾಭಿ ನೆಡೆಸುತ್ತಿದ್ದಾರೆ.
ಆದರೆ ಕಣದಲ್ಲಿರುವ ಜೆ.ಡಿ.ಎಸ್ ಮತ್ತು ಬಿ.ಜೆ ಪಿ ಅರ್ಭ್ಯರ್ಥಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯು ಯಾರೆಂಬುದರ ಬಗ್ಗೆ ತ್ರೀವ್ರ ಕುತೂಹಲ ಮೂಡಿಸಿದೆ.
ಶಿವಮೊಗ್ಗ ಗ್ರಾ.ಕ್ಷೇತ್ರದ ಮತದಾರ ಪ್ರಭು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ….
ರಘುರಾಜ್ ಹೆಚ್.ಕೆ…9449553305…