
ಶಿವಮೊಗ್ಗ: ತೀವ್ರ ಕುತೂಹಲ ಕೇರಳಿಸಿರುವ ಬಿಜೆಪಿ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಯಾರಿಗೆ ಆಗುತ್ತೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಈ ಕುತೂಹಲಕ್ಕೆ ಕಾರಣ ಹಾಲಿ ಶಾಸಕರು ಮಾಜಿ ಸಚಿವರಾಗಿರುವ ಕೆಎಸ್ ಈಶ್ವರಪ್ಪನವರಿಗೆ ಟಿಕೆಟ್ ನೀಡದ ಕಾರಣ ಅವರು ಕೂಡ ಚುನಾವಣಾ ರಾಜಕೀಯ ನಿವೃತ್ತಿ ತೆಗೆದುಕೊಂಡಿರುವ ಕಾರಣ ಯಾರಿಗೆ ಟಿಕೆಟ್ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಅವರ ನಂತರದಲ್ಲಿ ಅವರ ಮಗ ಕೆಇ ಕಾಂತೇಶ್, ಜ್ಯೋತಿ ಪ್ರಕಾಶ್, ದತ್ತಾತ್ರಿ, ಹರಿಕೃಷ್ಣ, ಧನಂಜಯ್ ಸರ್ಜಿ ಹೆಸರುಗಳು ಕೇಳಿಬರುತ್ತಿತ್ತು.
ಈ ನಡುವೆ ನಿನ್ನೆಯ ಬೆಳವಣಿಗೆ ಒಂದರಲ್ಲಿ ಅಚಾನಕ್ಕಾಗಿ ಮಾಜಿ ಸೂಡ ಅಧ್ಯಕ್ಷ,ಮಾಜಿ ನಗರಸಭೆ ಅಧ್ಯಕ್ಷರಾಗಿರುವ ಚನ್ನಬಸಪ್ಪ ಚೆನ್ನಿ ಅವರಿಗೆ ಟಿಕೆಟ್ ಫೈನಲ್ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಏಕೆಂದರೆ ಚನ್ನಬಸಪ್ಪ ಚೆನ್ನಿ ಈಶ್ವರಪ್ಪನವರ ಬಲಗೈ ಬಂಟ ಒಂದು ವೇಳೆ ತಮ್ಮ ಮಗ ಕಾಂತೇಶ್ ಗೆ ಟಿಕೆಟ್ ಕೊಡದಿದ್ದರೆ ತನ್ನ ಬಲಗೈ ಬಂಟ ಹಾಗೂ ಆಪ್ತನಾಗಿರುವ ಚೆನ್ನಿಗೆ ಟಿಕೆಟ್ ನೀಡಬೇಕು ಎಂದು ಈಶ್ವರಪ್ಪನವರ ಬೇಡಿಕೆಯಾಗಿತ್ತು ಎನ್ನುವ ಮಾಹಿತಿ ಇದೆ…
ಒಂದು ವೇಳೆ ಈಶ್ವರಪ್ಪನವರ ಈ ಬೇಡಿಕೆಗೆ ಹೈಕಮಾಂಡ್ ಸಮ್ಮತಿಸಿದರೆ ನಿನ್ನೆಯ ಸುದ್ದಿ ನಿಜವಾಗುತ್ತದೆ ಚನ್ನಬಸಪ್ಪ ಚೆನ್ನಿಗೆ ಬಿಜೆಪಿ ಟಿಕೆಟ್ ಫೈನಲ್ ಆಗುತ್ತದೆ..
ಈಶ್ವರಪ್ಪನವರ ಮೊದಲ ಬೇಡಿಕೆ ತನ್ನ ಮಗನಿಗೆ ಟಿಕೆಟ್ ನೀಡಬೇಕು ಅನ್ನುವುದು ಆ ಬೇಡಿಕೆಗೆ ಹೈಕಮಾಂಡ್ ಒಪ್ಪಿದರೆ ಕಾಂತೇಶ್ ಗೆ ಟಿಕೆಟ್ ಲಭ್ಯವಾಗುವ ಎಲ್ಲಾ ಸಾಧ್ಯತೆಗಳಿವೆ ಪತ್ರಿಕೆ ಕೂಡ ಈಶ್ವರಪ್ಪನವರ ರಾಜಕೀಯ ನಿವೃತ್ತಿ ನಂತರ ಕಾಂತೇಶ್ ಗೆ ಟಿಕೆಟ್ ಲಭ್ಯವಾಗುವ ಬಗ್ಗೆ ಸುದ್ದಿ ಪ್ರಕಟ ಮಾಡಿತ್ತು…
ಈ ಎಲ್ಲಾ ಗೊಂದಲಗಳಿಗೆ ಇಂದು ಸಂಜೆ ತೆರೆ ಬೀಳುವ ಸಾಧ್ಯತೆ ಇದೆ…
ರಘುರಾಜ್ ಹೆಚ್.ಕೆ..9449553305…