
ತಮ್ಮ ಜೀವನದ 10 ನೇ ವಿಧಾನಸಭಾ ಚುನಾವಣೆಗೆ ನಾಳೆ 18 ರಂದು ನಾಮ ಪತ್ರ ಸಲ್ಲಿಸುತ್ತಿರುವ ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ಆಶೀರ್ವಾದ ಬೇಡಿದರು
ಧರ್ಮಾಧಿಕಾರಿಗಳು ರಾಜ್ಯಸಭಾ ಸದಸ್ಯರು ಆದ ಶ್ರೀ ಡಾ,ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧರ್ಮಾದಿಕಾರಿಗಳೊಂದಿಗೆ ಮಾತುಕತೆ ನಡೆಸಿದರು
ಶುಭವಾಗಲಿ ಎಂದು ಹರಸಿದ ಧರ್ಮಾಧಿಕಾರಿಗಳು ತಮ್ಮ ಜೀವನದ ಹತ್ತನೇ ವಿಧಾನಸಭಾ ಚುನಾವಣೆಯ 5 ನೇ ಗೆಲುವಿನೊಂದಿಗೆ ಮತ್ತೆ ಕ್ಷೇತ್ರಕ್ಕೆ ಬಂದು ಶ್ರೀ ಸ್ವಾಮಿಯ ಆಶೀರ್ವಾದ ಪಡೆಯಿರಿ ಎನ್ನುವ ಸಲಹೆ ನೀಡಿ ಆಶೀರ್ವದಿಸಿದರು
ನಂತರ ಸಚಿವರು ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಬೇಟಿ ನೀಡಿದರು..
ರಘುರಾಜ್ ಹೆಚ್.ಕೆ..9449553305….