
ಹರಿಹರ:-ಕರೇೂನಾ ಈಗಾಗಲೇ ತನ್ನ ಅಟ್ಟಹಾಸ ಮುಂದುವರಿಸಿದ್ದು ಮೂರನೇ ಅಲೆಯ ಭೀತಿ ಎದುರಾಗಿದೆ .ಕೊರೂನಾ ಮೂರನೇ ಅಲೆಯೂ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು ಎಲ್ಲರೂ ಎಚ್ಚರಿಕೆ ವಹಿಸುವಂತೆ ವಿದ್ಯಾರ್ಥಿಗಳಿಗೆ ನಾಗೇಂದ್ರಪ್ಪ ರಾಜನಹಳ್ಳಿ ಅವರು ಕರೆ ನೀಡಿದರು.
ರಾಜನಹಳ್ಳಿಯ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮುಂಜಾಗ್ರತ ಕ್ರಮವಾಗಿ ಮಾಸ್ಕ್,ಸ್ಯಾನಿಟೈಸರ್ ವಿತರಿಸಿ ಮಾತನಾಡಿದ ಅವರು ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಆಗಮಿಸುತ್ತಿದ್ದಾರೆ.ಶಿಕ್ಷಕರು ಮಕ್ಕಳ ಅನುಕೂಲಕ್ಕಾಗಿ ಶಾಲೆಯನ್ನು ಸುರಕ್ಷಿತವಾಗಿ ಎಲ್ಲಾ ರೀತಿಯಲ್ಲೂ ಸ್ಯಾನಿಟೈಜರ್ ಮಾಡುವುದರ ಮೂಲಕ ಸಾಮಾಜಿಕ ಅಂತರದಲ್ಲಿ ಬೋಧನೆ ಮಾಡುತ್ತಿದ್ದಾರೆ.ರಾಜನಹಳ್ಳಿ ಯ ಪ್ರೌಢಶಾಲೆಯು ಈಗಾಗಲೇ ಹಲವು ಆಧುನಿಕ ಶಿಕ್ಷಣದೊಂದಿಗೆ ತಾಲ್ಲೂಕಿನಲೇ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ ಎಂದರು
ಹನಗವಾಡಿ ಪ್ರೌಢಶಾಲೆ ಪ್ರೌಢಶಾಲೆ ,ಬಿಳಸನೂರು ಪ್ರೌಢ ಶಾಲೆ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಪ್ರೌಢ ಶಾಲೆಗಳಿಗೂ ತೆರಳಿ ಅಲ್ಲಿನ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಣೆ ಮಾಡುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು.
ಇದಕ್ಕೂ ಮೊದಲು ಶಾಲಾ ಮುಖ್ಯೋಪಾಧ್ಯಾಯರಾದ ಚಕ್ರಸಾಲಿ ಅವರು ಮಾತನಾಡಿ ನಾಗೇಂದ್ರಪ್ಪ ರಾಜನಹಳ್ಳಿಯವರು ಇದೆ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಎಂದು ವಕೀಲರ ವೃತ್ತಿಯ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳೊಂದಿಗೆ ಇಡೀ ತಾಲ್ಲೂಕಿನ ಮನೆ ಮಗನಾಗಿದ್ದಾರೆ .ಅವರಂತೆ ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಾಗಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು. ಅಲ್ಲದೆ ಶಾಲೆಗೆ ಬೇಕಾದಂತಹ ಕಟ್ಟಡಗಳು ಸೇರಿದಂತೆ ಅನೇಕ ಮೂಲಭೂತ ಸೌಲಭ್ಯವನ್ನು ಒದಗಿಸಿ ಕೊಡುವಲ್ಲಿ ನಾಗೇಂದ್ರಪ್ಪ ಮಹತ್ತರವಾದ ಪಾತ್ರವನ್ನು ವಹಿಸಿದ್ದಾರೆ.ಅವರಿಗೆ ರಾಜನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿಶೇಷ ಕಾಳಜಿಯನ್ನು ಹೊಂದಿದ್ದಾರೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಶಾಲೆ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು .

ಈ ಸರ್ಕಾರದ ಕರೋನಾ ಮಾರ್ಗಸೂಚಿಯಂತೆ ಸರಳವಾಗಿ ಕಾರ್ಯಕ್ರಮವನ್ನು ನಡೆಸಲಾಯಿತು .ಈ ಸಂದರ್ಭದಲ್ಲಿ ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ಆಟೋ ಕೃಷ್ಣಪ್ಪ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಲಪ್ಪ,ದುರ್ಗಪ್ಪ, ಡಿಎಸ್ಎಸ್ ಸಂಚಾಲಕರಾದ ಜಿ.ಎಂ ಮಂಜಪ್ಪ,ಕರಿಬಸಪ್ಪ,ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಕನ್ನಡ ಪ್ರಾಧ್ಯಾಪಕರಾದ ನಾಗಪ್ಪ ಕಮದೋಡ ನೆರೆವೇರಿಸಿದರು .ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು…
ವರದಿ… ಶ್ರೀನಿವಾಸ್ ಆರ್…..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…