
ರಾಜ್ಯ ಸರ್ಕಾರಿ ನೌಕರರಲ್ಲಿ ಎನ್‌ಪಿಎಸ್ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ.
ಹಿಂದೆ ಓ ಪಿ ಎಸ್ ಪದ್ಧತಿ ಜಾರಿಯಲ್ಲಿತ್ತು ನಂತರ ಅದನ್ನು ತೆಗೆದು ಎನ್ ಪಿ ಎಸ್ ಪದ್ಧತಿ ಜಾರಿಗೆ ತರಲಾಯಿತು. ಈಗಲೂ ಹಲವರು ಓ ಪಿ ಎಸ್ ಪದ್ಧತಿಯಲ್ಲಿ ಮುಂದುವರೆದಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡ ಹಾಗೂ ಇನ್ನೂ ಕೆಲವರು ಎನ್‌ಪಿಎಸ್ ಪದ್ದತಿಗೆ ಒಳಪಡುತ್ತಾರೆ.
ಪ್ರಾರಂಭದಲ್ಲಿ ಎನ್‌ಪಿಎಸ್ ಬಗ್ಗೆ ಕುತೂಹಲದಿಂದ ನೋಡುತ್ತಿದ್ದ ಸರ್ಕಾರಿ ನೌಕರರು ತಮಗೆ ಲಾಭವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು ನಂತರ ಸರ್ಕಾರಿ ನೌಕರರು ಕೆಲವರು ನಿವೃತ್ತರಾದಾಗ ಹಾಗೂ ಮರಣ ಹೊಂದಿದಾಗ ಇದರ ಸತ್ಯಾಂಶತೆ ಅವರಿಗೆ ಗೊತ್ತಾಯ್ತು ನಂತರ ಇದರ ವಿರುದ್ಧ ಹೋರಾಟ ಪ್ರತಿಭಟನೆಗಳು ಶುರುವಾದವು.
ಇದು ಯಾವ ಮಟ್ಟಕ್ಕೆ ತಲುಪಿತ್ತು ಎಂದರೆ ಎನ್‌ಪಿಎಸ್ ಪರ ಹೋರಾಟ ನಡೆಸುತ್ತಿದ್ದ ಸರ್ಕಾರಿ ನೌಕರರ ವಿರುದ್ಧ ಹಿಂದೆ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರ ಕೇಸ್ ಗಳನ್ನು ಹಾಕಿ ಕ್ರಮ ಕೈಗೊಂಡಿತ್ತು.
ಆದರೆ ಆ ಸಮಯದಲ್ಲಿ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ನಾವು ಮುಂದೆ ಅಧಿಕಾರಕ್ಕೆ ಬಂದರೆ ಎನ್‌ಪಿಎಸ್ ಪದ್ದತಿಯನ್ನು ರದ್ದು ಮಾಡಿ ಓಪಿಎಸ್ ಪದ್ದತಿಯನ್ನು ಜಾರಿಗೆ ತರುತ್ತೇವೆ ಎಂದು ಹೋರಾಟ ನಡೆಸುತ್ತಿದ್ದ ಸರ್ಕಾರಿ ನೌಕರರಿಗೆ ಆಶ್ವಾಸನೆಯನ್ನು ನೀಡಿದ್ದರು.
ಈಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದು ಎನ್‌ಪಿಎಸ್ ಪದ್ಧತಿಯನ್ನು ರದ್ದು ಮಾಡಿ ಓಪಿಎಸ್ ಅನ್ನು ಮರು ಜಾರಿಗೊಳಿಸುವ ಸಾಧ್ಯತೆ ಅಧಿಕವಾಗಿದೆ. ಹಾಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಎನ್‌ಪಿಎಸ್ ವಿರುದ್ಧ ಹೋರಾಟ ವಿರುದ್ಧ ಹೋರಾಟ ನಡೆಸುತ್ತಿದ್ದವರ ವಿರುದ್ಧ ದಾಖಲಾಗಿರುವ ಕೇಸ್ ಗಳನ್ನು ಕೂಡ ಹಿಂಪಡೆಯುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಇಂದು ನಡೆಯುತ್ತಿರುವ ಕ್ಯಾಬಿನೆಟ್ ಮೀಟಿಂಗ್ ಮಹತ್ವ ಪಡೆದುಕೊಂಡಿದ್ದು ಇದರ ಮುಕ್ತಾಯದ ನಂತರ ಎನ್ಪಿಎಸ್ ನೌಕರರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಅಧಿಕವಾಗಿದೆ.