
ತೀರ್ಥಹಳ್ಳಿ: ತಾಲೂಕಿನ ಹೆಮ್ಮೆಯ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಸದಾ ಸುದ್ದಿಯಲ್ಲಿರುತ್ತದೆ.ಈಗ ಎಸ್ ಎಸ್ ಎಲ್ ಸಿ ಅತ್ಯುತ್ತಮ ಗುಣಮಟ್ಟದ ಫಲಿತಾಂಶಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 25 ಸಾವಿರ ನಗದು & ಪಾರಿತೋಷಕ 25 ಸಾವಿರ ನಗದು & ಪಾರಿತೋಷಕ ಲಭಿಸಿದೆ.
ಶಿಕ್ಷಣ ಇಲಾಖೆಯ ವತಿಯಿಂದ ಬಹುಮಾನದ ಚೆಕ್ ಮತ್ತು ಪಾರಿತೋಷಕವನ್ನು ಶಿವಮೊಗ್ಗ ಜಿಲ್ಲಾ ಉಪ ನಿರ್ದೇಶಕರಾದ ಪರಮೇಶ್ವರ್ ಅವರು ವಿತರಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ತಾಲ್ಲೂಕಿನ ಶೈಕ್ಷಣಿಕ, ಕ್ರೀಡೆ, ಸಹ ಪಠ್ಯ ಚಟುವಟಿಕೆಗಳ ಮೂಲಕ ಗಮನ ಸೆಳೆದಿರುವ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ, ಮತ್ತೊಮ್ಮೆ ಗಮನ ಸೆಳೆದಿದೆ..
2021-22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ, 100 % ಫಲಿತಾಂಶ ದಾಖಲಿಸಿದ್ದು , ಗುಣಮಟ್ಟದ ಶಿಕ್ಷಣದಲ್ಲೂ ಅತ್ಯುತ್ತಮ ಸಾಧನೆ ಮಾಡಿತ್ತು, ಎಸ್ ಎಸ್ ಎಲ್ ಸಿ ಮಕ್ಕಳ ಕಲಿಕಾ ಪ್ರೋತ್ಸಾಹ ಕ್ಕಾಗಿ ರಾತ್ರಿ ವಿಶೇಷ ತರಗತಿಯ ಆಯೋಜನೆ ಈ ಯಶಸ್ವಿನ ಹಿಂದೆ ಇದೆ ಎಂದರೇ ಅತಿಶಯೋಕ್ತಿ ಅಲ್ಲ..
ಶಾಲೆಯ ಕೀರ್ತಿ ಹೆಚ್ಚಿಸಿದ ಶಿಕ್ಷಕರ ಬಳಗಕ್ಕೆ, ಮಕ್ಕಳಿಗೆ, ಎಸ್ ಡಿ ಎಂ ಸಿ ತಂಡಕ್ಕೆ, ಪೋಷಕರಿಗೆ, ಜನಪ್ರತಿನಿಧಿಗಳಿಗೆ, ಕೇರ್ ವರ್ಕ್ಸ್ ಪೌಂಡೇಷನ್ ಬೆಂಗಳೂರು, ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೆ, ತುಂಬು ಹೃದಯದ ಕೃತಜ್ಞತೆಗಳನ್ನು ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ತಿಳಿಸಿದ್ದಾರೆ....
ರಘುರಾಜ್ ಹೆಚ್.ಕೆ..9449553305…