
ತೀರ್ಥಹಳ್ಳಿ: ಕಿಂಗ್ಸ್ ಚೆಸ್ ಅಕಾಡೆಮಿ, ದಕ್ಷಿಣ ಕನ್ನಡ ಜಿಲ್ಲೆ ಇವರ ಆಶ್ರಯದಲ್ಲಿ ಜುಲೈ 02 ರಂದು ಮಂಗಳೂರಿನಲ್ಲಿ ನಡೆದ
ಮೂರನೇ ಆವೃತ್ತಿಯ ಕೆಸಿಎ ಟ್ರೋಫಿ ಇಂಟರ್ಸ್ಟೇಟ್ ಡಿಸ್ಟ್ರಿಕ್ಟ್ ಚೆಸ್ ಟೂರ್ನಮೆಂಟ್-2023 ರ ಪಂದ್ಯಾವಳಿಯಲ್ಲಿ ತೀರ್ಥಹಳ್ಳಿ ಪಟ್ಟಣದ ಕುಶಾವತಿಯಲ್ಲಿರುವ ಸಹ್ಯಾದ್ರಿ ಆಂಗ್ಲ ಮಾಧ್ಯಮ ಸಂಸ್ಥೆ ಪ್ರೌಢಶಾಲಾ ವಿಭಾಗದ ಎಂಟನೇ ತರಗತಿ ವಿದ್ಯಾರ್ಥಿನಿ ಕು, ಪಾವನಿ ಇವರು ಕ್ರೀಡೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೆ ಕುಮಾರಿ ಗಾನವಿ 6ನೇ ಸ್ಥಾನ ಪಡೆದಿದ್ದಾರೆ.
ತಾಲೂಕಿಗೆ ಕೀರ್ತಿ ತಂದ ಈ ಇಬ್ಬರು ಯುವ ಪ್ರತಿಭೆಗಳಿಗೆ ಸ್ಥಳೀಯರು ಪೋಷಕರು ಹಾಗೂ ಶಾಲೆಯ ಆಡಳಿತ ಮಂಡಳಿ ಶಿಕ್ಷಕರು, ಅಧ್ಯಕ್ಷರು, ನಿರ್ದೇಶಕರು, ಪದಾಧಿಕಾರಿಗಳು, ಮುಂದೆ ತಾಲೂಕಿಗೆ ಸಂಸ್ಥೆಗೆ ಇನ್ನಷ್ಟು ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ..
ರಘುರಾಜ್ ಹೆಚ್.ಕೆ..9449553305…