
ತೀರ್ಥಹಳ್ಳಿ: ಪಟ್ಟಣದ ಮೇಲಿನ ಕುರುವಳ್ಳಿ ಬಂಡೆಯಲ್ಲಿ ನಿರಂತರವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಇದರ ಬಗ್ಗೆ ಪತ್ರಿಕೆ ನಿರಂತರವಾಗಿ ವರದಿ ಮಾಡುತ್ತಿದೆ. ವರದಿಯ ಫಲವಾಗಿ ಕಳೆದ ವರ್ಷದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿಗಳ ತಂಡ ಬಂಡೆಗೆ ಭೇಟಿ ನೀಡಿತ್ತು ಆಗ ಅವರಿಗೆ ಅಲ್ಲಿ ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಸ್ಪಷ್ಟವಾಗಿ ಗೋಚರವಾಗಿತ್ತು.
ನಂತರ ಬಹಿರಂಗವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಶ್ರೀಮತಿ ವಿದ್ಯಾ ಅವರು ಸ್ಪೋಟಕ ಬಳಸಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಹೇಳಿರುವ ಆ ವಿಡಿಯೋ ಪತ್ರಿಕೆ ಬಳಿ ಲಭ್ಯವಿದೆ. ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಅರಿವಿಗೆ ಬಂದ ನಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಂಡ ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಬಂಡೆಯಲ್ಲಿ ಇದನ್ನು ನಿಲ್ಲಿಸುವ ಸಲುವಾಗಿ ಟ್ರಂಚ್ ಹೊಡೆಸಿದರು. ಆದರೆ ಈ ಟ್ರಂಚ್ ಹೊಡೆದಿದ್ದನ್ನೇ ಮುಚ್ಚಿ ಮತ್ತೆ ಕಲ್ಲು ಗಣಿಗಾರಿಕೆ ಮಾಡಲು ಶುರು ಮಾಡಿದರು. ಸರ್ಕಾರದ ಆದೇಶಕ್ಕೆ ಸರ್ಕಾರಿ ಅಧಿಕಾರಿಗಳ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ ಇದರಿಂದ ರೋಸಿ ಹೋದ ಗಣಿ ಇಲಾಖೆಯ ಅಧಿಕಾರಿಗಳು ತೀರ್ಥಹಳ್ಳಿಯ ತಹಶೀಲ್ದಾರ್ ಅವರಿಗೂ ಹಾಗೂ ತೀರ್ಥಹಳ್ಳಿಯ ಡಿ ವೈ ಎಸ್ ಪಿ ಅವರಿಗೆ ಲಿಖಿತ ರೂಪದಲ್ಲಿ ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ಹೆಸರು ವಿವರ ಹಾಗೂ ಅವರ ಮೇಲೆ ಹಾಕಿರುವ ಕೇಸುಗಳ ಬಗ್ಗೆ ವಿವರ ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಇದನ್ನು ನಿಲ್ಲಿಸಲು ಟ್ರಂಚ್ ಹೊಡೆದರೆ ಅದನ್ನು ಕೂಡ ಮುಚ್ಚಿದ್ದಾರೆ ಕಾನೂನು ಮೂಲಕ ಇದು ಅಪರಾಧವಾಗಿದ್ದು ಅವರ ಮೇಲೆ ಎಫ್ ಐ ಆರ್ ದಾಖಲಿಸಿ 144 ಸೆಕ್ಷನ್ ಜಾರಿಗೊಳಿಸುವಂತೆ ತಹಶೀಲ್ದಾರ್ ಗೆ ಹಾಗೂ ಡಿವೈಎಸ್ಪಿ ಅವರಿಗೆ ದೂರು ನೀಡಿದ್ದರು.
ಆದರೆ ಗಣಿ ಇಲಾಖೆ ನೀಡಿದ ದೂರಿಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎನ್ನುತ್ತಾರೆ ಗಣಿ ಇಲಾಖೆಯ ಅಧಿಕಾರಿಗಳು ಈಗಲೂ ಕೂಡ ನಿರಂತರವಾಗಿ ಸ್ಪೋಟಕ ಬಳಸಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಇದನ್ನು ತಡೆಯ ಬೇಕಾದ ಅಧಿಕಾರಿಗಳೇ ಸುಮ್ಮನಿರುವುದು ನೋಡಿದರೆ ಅವರ ಮೇಲೆ ಅನುಮಾನ ಬರುತ್ತದೆ. ಹಾಗೂ ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರು ಇಲಾಖೆಯ ಅಧಿಕಾರಿಗಳಿಗೆ ಮಾಮೂಲು ಕೊಟ್ಟು ನಡೆಸುತ್ತಿದ್ದೇವೆ ನಮಗೆ ಯಾರ ಭಯವಿಲ್ಲ ಎಂದು ನೇರವಾಗಿ ಹೇಳುತ್ತಾರೆ. ಹಾಗಾದರೆ ಪೊಲೀಸ್ ಇಲಾಖೆಗೆ ತಹಶೀಲ್ದಾರ್ ಗೆ ಜಿಲ್ಲಾಡಳಿತಕ್ಕೆ ಬೆಲೆ ಇಲ್ಲವೇ ಇದೇನು ಅಂದಾ ದರ್ಬಾರ್ ಆಯ್ತಾ..?! ಜಿಲ್ಲೆಯಲ್ಲಿ ದಕ್ಷ, ಪ್ರಾಮಾಣಿಕ ,ಪರಿಸರ ಸ್ನೇಹಿ, ಜಿಲ್ಲಾಧಿಕಾರಿಗಳು, ಹಾಗೂ ಯುವ ದಕ್ಷ ಪ್ರಾಮಾಣಿಕ ಖಡಕ್ ಎಸ್ಪಿ ಮಿಥುನ್ ಕುಮಾರ್ ಇದ್ದಾರೆ ಅವರು ಅವರ ತಳಮಟ್ಟದ ಅಧಿಕಾರಿಗಳು ನೀಡುವ ಸುಳ್ಳು ಮಾಹಿತಿಯನ್ನು ಕೇಳದೆ ನೇರವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ ಇದರ ಸತ್ಯ ಅರಿವಾಗುತ್ತದೆ.
ಇದು ಒಂದು ಕಡೆ ಆದರೆ ಇದರ ಜೊತೆಗೆ ಸರ್ವೆ ನಂಬರ್ 38ರ ಗುತ್ತಿಗೆ ನಕಲಿ ದಾಖಲೆ ನೀಡಿ ಗುತ್ತಿಗೆ ಪಡೆಯಲು ಮುಂದಾಗಿದ್ದಾರೆ. ಅದನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ನಿಲ್ಲಿಸಬೇಕು ಹಾಗೂ ಸರ್ವೇ ನಂಬರ್ 75 ನ್ನು ಕೂಡ ಗುತ್ತಿಗೆ ಪಡೆಯಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಕೂಡ ಜಿಲ್ಲಾಧಿಕಾರಿಗಳು ಗಮನಹರಿಸಿ ನಿಲ್ಲಿಸಬೇಕು.
ಏಕೆಂದರೆ ಕಲ್ಲು ಗಣಿಗಾರಿಕೆ ನಡೆಸುವುದು ಆರ್ಥಿಕವಾಗಿ ಹಿಂದುಳಿದವರು, ಆ ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುವವರು ತೆಗೆದುಕೊಳ್ಳುವುದು ಸೂಕ್ತ ಆದರೆ ಇಲ್ಲಿ ಬಲಿಷ್ಠರು, ಶ್ರೀಮಂತರು, ಆರ್ಥಿಕವಾಗಿ ಸದೃಢವಾಗಿರುವವರು ನಕಲಿ ಸಂಘಗಳನ್ನು ಸೃಷ್ಟಿ ಮಾಡಿಕೊಂಡು ಕಾರ್ಮಿಕರ ಹೆಸರು ಹೇಳಿಕೊಂಡು ಗುತ್ತಿಗೆ ಪಡೆದು ಸ್ಫೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ.
ಇದರಿಂದ ಪರಿಸರಕ್ಕೂ ಹಾನಿ ಸುತ್ತಮುತ್ತಲಿನ ಸರ್ಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿ ಗಳಿಗೂ ನಷ್ಟ ಸಾರ್ವಜನಿಕರ ನೆಮ್ಮದಿ ಕೂಡ ಹಾಳು ಸರ್ಕಾರದ ಬಕ್ಕಸಕ್ಕು ಕೂಡ ನಷ್ಟ ಆದ್ದರಿಂದ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಇಂದಿನ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ನೊಂದ ಸ್ಥಳೀಯರ ಮನವಿಯಾಗಿದೆ.
ಇದೆಲ್ಲದರ ಬಗ್ಗೆ ವಿವರವಾಗಿ ತಿಳಿಸಿ ಸಾರ್ವಜನಿಕರ ಹಿತಾಸಕ್ತಿಗಾಗಿ, ನೈಸರ್ಗಿಕ ಸಂಪತ್ತನ್ನು ಉಳಿಸುವುದಕ್ಕಾಗಿ ಸರ್ಕಾರದ ಬಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸುವುದಕ್ಕಾಗಿ ಮುಂದೆ ಆಗಬಹುದಾದ ದೊಡ್ಡ ಅನಾಹುತ ಒಂದನ್ನು ತಪ್ಪಿಸುವುದಕ್ಕೆ ಪತ್ರಿಕೆ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ, ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರ ಬೆಂಗಳೂರು ಇವರಿಗೆ, ಪೋಲಿಸ್ ಮಹಾ ನಿರ್ದೇಶಕರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೃಪತುಂಗ ರಸ್ತೆ ಬೆಂಗಳೂರು ಇವರಿಗೆ, ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ( ಐಜಿಪಿ) ಪಶ್ಚಿಮ ವಲಯ ದಾವಣಗೆರೆ ಇವರಿಗೆ, ವಲಯ ಅರಣ್ಯ ಅಧಿಕಾರಿಗಳು ತೀರ್ಥಹಳ್ಳಿ ವಲಯ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಶಿವಮೊಗ್ಗ ಉಪವಿಭಾಗ ಶಿವಮೊಗ್ಗ ಜಿಲ್ಲೆ ಇವರಿಗೆ, ತಹಸಿಲ್ದಾರ್ ತೀರ್ಥಹಳ್ಳಿ ತಾಲೂಕ್ ಇವರಿಗೆ, ಹೆಚ್ಚುವರಿ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕರ್ನಾಟಕ ರಾಜ್ಯ ಬೆಂಗಳೂರು ಇವರಿಗೆ, ಜಂಟಿ ನಿರ್ದೇಶಕರು ದಕ್ಷಿಣ ವಲಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೈಸೂರು ಇವರಿಗೆ ಗಣಿ ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಶಿವಮೊಗ್ಗ ಇವರಿಗೆ ಸೂಕ್ತ ಮಾಹಿತಿ ಹಾಗೂ ಕ್ರಮಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.. ಮುಂದೆ ಇವೆಲ್ಲವನ್ನೂ ಇಟ್ಟುಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಘನ ನ್ಯಾಯಾಲಯದಲ್ಲಿ ಸಲ್ಲಿಸಿದರೆ ಶಾಶ್ವತವಾಗಿ ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಘನ ನ್ಯಾಯಾಲಯ ಫುಲ್ ಸ್ಟಾಪ್ ಹಾಕುತ್ತದೆ ಹಾಗೂ ಈ ಅಕ್ರಮದಲ್ಲಿ ಭಾಗಿಯಾಗಿರುವ ವಿರುದ್ಧ ಕ್ರಮ ಹಾಗೂ ಶಿಕ್ಷೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ತುಂಬಿ ಕೊಡುವಂತೆ ಆದೇಶ ನೀಡುತ್ತದೆ.. ಅಷ್ಟರೊಳಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿಗಳ ತಂಡ ಇದನ್ನು ನಿಲ್ಲಿಸಲಿ ಎನ್ನುವುದು ಪತ್ರಿಕೆಯ ಆಗ್ರಹ ಹಾಗೂ ಆಶಯ…
ರಘುರಾಜ್ ಹೆಚ್.ಕೆ..9449553305…