
ತೀರ್ಥಹಳ್ಳಿ : ತ್ರಿಯಂಬಕ ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ವಿದಾತ ಪತ್ರಿಕೆಯ ಟಿ.ಜೆ. ಅನಿಲ್
ತೀರ್ಥಹಳ್ಳಿ ತಾಲೂಕಿ ಪ್ರತಿಷ್ಠಿತ ತ್ರಿಯಂಬಕಪುರ ಗ್ರಾಮಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷರಾಗಿ ವಿಧಾತ ಅನಿಲ್ ಎರಡನೇ ಬಾರಿಗೆ ಮರು ಆಯ್ಕೆಯಾಗಿದ್ದರೆ . ಉಪಾಧ್ಯಕ್ಷರಾಗಿ ಲಕ್ಷೀದೇವಿ ಆಯ್ಕೆಯಾಗಿದ್ದಾರೆ.
ಆ.10 ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡ ಇರ್ವರು ಮಹಿಳಾ ಸದಸ್ಯರೂ ಸೇರಿದಂತೆ ಹಾಲಿ ಬಿಜೆಪಿ ಬೆಂಬಲಿತ 8 ಮಂದಿ ಸದಸ್ಯರುಗಳಿದ್ದೂ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಲಾಭಿ ಮಾಡಲು ಹೊರಟ ಮಾಡಿದರು ಸಂಘಟನಾ ಶಕ್ತಿಯ ಮುಂದೆ ಮುಖಭಂಗಕ್ಕೀಡಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ-ಬಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ-ಎ (ಮಹಿಳೆ) ಮೀಸಲಾತಿ ನಿಗದಿಯಾಗಿತ್ತು.ಬಿಜೆಪಿ ಬೆಂಬಲಿತರಲ್ಲೇ ಬಿಸಿಎಂ-ಎ ಮೂವರು ಮಹಿಳಾ ಸದಸ್ಯರಿದ್ದು ಉಪಾಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಹಣಾಹಣಿ ಏರ್ಪಟ್ಟಿತ್ತು.ಅಧ್ಯಕ್ಷ ಸ್ಥಾನಕ್ಕಾಗಿ ವಿಧಾತ ಅನಿಲ್ ಮತ್ತು ಹುಲ್ಲತ್ತಿ ದಿನೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಲಕ್ಷೀದೇವಿ-ರೇಖಾ ಮಂಜುನಾಥ್ ನಡುವೆ ಚುನಾವಣೆ ನಡೆದು ತಲಾ 6 ಮತಗಳಿಂದ ವಿಧಾತ ಅನಿಲ್-ಲಕ್ಷ್ಮೀದೇವಿ ಜಯಗಳಿಸಿದ್ದು 5 ಮತಗಳನ್ನು ಪಡೆದು ಹುಲ್ಲತ್ತಿ ದಿನೇಶ್-ರೇಖಾ ಮಂಜುನಾಥ್ ಪರಾಭವ ಗೊಂಡಿದ್ದಾರೆ..
.ವರದಿ .ಲಿಯೋ ಅರೋಜ._ 9448137473. 9880123040.