ಸೂರಬ: ಇಂದು ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಕಡಸೂರು ಗ್ರಾಮದ ನಿವಾಸಿ ರಾಮಚಂದ್ರಪ್ಪ ಈತನು ತನ್ನ ಮನೆಯ ಹಿಂಭಾಗದ ಹಿತ್ತಲಿನಲ್ಲಿ ಮಾದಕ ವಸ್ತು ಗಾಂಜಾ ಗಿಡವನ್ನು ಬೆಳೆದಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮಾಳಪ್ಪ ಪಿಎಸ್ಐ, ಸೊರಬ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಮನೆಯ ಹಿತ್ತಲಿನಲ್ಲಿ ಅಡಿಕೆ ಗಿಡಗಳ ಮದ್ಯೆ ಸಿಮೆಂಟ್ ಚೀಲದಲ್ಲಿ ಮಣ್ಣು ತುಂಬಿ ಬೆಳೆದಿದ್ದ ಅಂದಾಜು ಮೌಲ್ಯ 3,000/- ರೂ ಗಳ 525 ಗ್ರಾಂ ತೂಕವಿದ್ದ ಹಸಿ ಗಾಂಜಾ ಗಿಡವನ್ನು ವಶಪಡಿಸಿ ಕೊಂಡು ಆರೋಪಿ ರಾಮಚಂದ್ರಪ್ಪ, 50 ವರ್ಷ ಕಡಸೂರು ಗ್ರಾಮ, ಸೊರಬ ಈತನ ವಿರುದ್ಧ ಗುನ್ನೆ ಸಂಖ್ಯೆ 145/2023 ಕಲಂ 8(b), 20(a)(1) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ...