
ಶಿವಮೊಗ್ಗದ ಸೆಕ್ರೇಟ್ ಹಾರ್ಟ್ ಚರ್ಚ್ ಫಾದರ್ ಫ್ರಾನ್ಸಿಸ್ ಫರ್ನಾಂಡಿಸ್ ಜಾತಿನಿಂದನೆ ಹಾಗೂ ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲಿನಲ್ಲಿದ್ದು ಇನ್ನು ಜಾಮೀನು ಸಿಕ್ಕಿಲ್ಲ ಇದರ ಬೆನ್ನಲ್ಲೇ ಬೆಂಗಳೂರಿನ ಕಮ್ಮನಹಳ್ಳಿ ಚರ್ಚ್ ಫಾದರ್ ಜಯಕರನ್ ವಿರುದ್ಧ ದಿನಾಂಕ 21-08-2023 ರಂದು ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು .
ಚರ್ಚ್ ನ ಹೊರಗೆ ಹಣ್ಣಿನ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಅನಿವಾಸಿ ಭಾರತೀಯ ಮಹಿಳೆ( ಆಂಗ್ಲೋ ಇಂಡಿಯನ್ ) ದೂರು ನೀಡಿದ್ದಾರೆ.
ಆ ದೂರಿನಲ್ಲಿ ಏನಿದೆ..?!
ನಗರದ ಗೋವಿಂದಪ್ಪ ರಸ್ತೆ ಆರ್ ಎಸ್ ಪಾಳ್ಯದಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯ ಮಹಿಳೆ ಕಮ್ಮನಹಳ್ಳಿ ಚರ್ಚ್ ನ ಭಕ್ತೆ.ತಮ್ಮ ಮನೆಗಳನ್ನು ಆಶೀರ್ವದಿಸಲು ಫಾದರ್ ಗಳನ್ನು ಕರೆಯುವುದು ಕ್ರೈಸ್ತರಲ್ಲಿರುವ ವಾಡಿಕೆ. ಅದರಂತೆ ತಮ್ಮ ಮನೆ ಆಶೀರ್ವದಿಸಬೇಕೆಂದು ಕರೆಯಲು ದಿನಾಂಕ 15-6-2022 ರಂದು ಚರ್ಚ್ ಗೆ ತೆರಳಿದ್ದರಂತೆ.ಹಾಗೆ ಬಂದ ಮಹಿಳೆ ಜತೆ ಜಯಕರನ್ ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾರಂತೆ.ಅದಾದ ಕೆಲವು ದಿನಗಳ ನಂತರ ಮತ್ತೆ ಚರ್ಚ್ ಗೆ ಹೋದಾಗಲೂ ಅಸಭ್ಯವಾಗಿ ವರ್ತಿಸಿದ್ದ ರಂತೆ. ಚರ್ಚ್ ಗೆ ಬಂದಾಗ ಹಾಗು ಹೊರಗೆ ಸಿಕ್ಕಾಗಲೆಲ್ಲಾ ಅಸಭ್ಯ ವರ್ತನೆಯನ್ನು ಮುಂದುವರಿ ಸಿದ್ದರಂತೆ.ಈ ವಿಷಯವನ್ನು ತಮ್ಮ ಸಂಗಾತಿಗೆ ತಿಳಿಸಿದ್ರಂತೆ.ಇದರಿಂದ ಕೆಂಡಾಮಂಡಲವಾದ ಫಾದರ್ ಜಯಕರನ್ ತಮ್ಮ ಬೆಂಬಲಿಗರಾದ ನಿರ್ಮಲ್, ಲೂಯಿಸ್, ಜ್ಞಾನಪು ಮೂಲಕ ಬೆದರಿಕೆ ಹಾಕಿಸಿದ್ದರಂತೆ.ಇದರಿಂದ ಹೆದರಿ 18-4-2023 ರಂದು ಅರ್ಚ್ ಬಿಷಪ್ ರಿಚರ್ಡ್ ಮಚಾದೋ ಅವರಿಗೆ ದೂರು ನೀಡಿದ್ರಂತೆ.ಅಷ್ಟೇ ಅಲ್ಲ, ದಿನಾಂಕ 07.08.2023 ರಂದು ಅರ್ಚ್ ಬಿಷಪ್ ನೇಮಿಸಿದ ಆಂತರಿಕ ಶಿಸ್ತು ಸಮಿತಿ ಮುಂದೆಯೂ ಹೇಳಿಕೆ ನೀಡಿದ್ದಾರೆ.ಆದರೆ ಇದ್ಯಾವುದರಿಂದಲೂ ಪ್ರಯೋಜನವಾಗದ ನಂತರ 21-08-2023 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕ್ರೈಸ್ತ ಫಾದರ್ ಗಳ ವಿರುದ್ಧ ನಿರಂತರ ದೂರು :
“ಕ್ರೈಸ್ತ ಫಾದರ್ ಗಳ ವಿರುದ್ದ ಕೇಳಿಬರುತ್ತಿರುವ ಲೈಂಗಿಕ ದೌರ್ಜನ್ಯ-ಶೋಷಣೆಯಂತ ಆಪಾದನೆ ಗಳು ತುಂಬಾ ಗಂಭೀರ ವಾದಂತವು. ಕ್ರೈಸ್ತರ ಬಗ್ಗೆ ಸಮಾಜ ಕೆಟ್ಟದಾಗಿ ಮಾತನಾಡಿಕೊಳ್ಳೊಕ್ಕೆ ಆಸ್ಪದ ನೀಡುವಂಥ ಕಹಿ ಘಟನೆ ಗಳು.ಸಂನ್ಯಾಸದ ದೀಕ್ಷೆ ಪಡೆಯೊಕ್ಕೆ ಪ್ರತಿ ಯೋರ್ವ ಫಾದರ್,14 ವರ್ಷ ಸಂನ್ಯಾಸದ ಅಧ್ಯಯನ ನಡೆಸಬೇಕಾಗುತ್ತದೆ.ಈ ಅವಧಿಯಲ್ಲಿ ಒಬ್ಬ ಧರ್ಮಗುರು ಏಸುಕ್ರಿಸ್ತರ ಪ್ರತಿನಿಧಿ ಯಾಗಿ ಹೇಗೆ ಬದುಕಬೇಕು. ಬಾಳಬೇಕು.ಸಮಾಜಕ್ಕೆ ಮಾದರಿಯಾ ಗಬೇಕು.ಲೈಂಗಿಕ ಆಕರ್ಷಣೆ,ಆಸಕ್ತಿಗಳಿಂದ ಹೇಗೆ ತಮ್ಮನ್ನು ದೂರವಿಟ್ಟುಕೊಳ್ಳಬೇಕು.ಒಬ್ಬ ಕ್ರೈಸ್ತ ಧರ್ಮಗುರುವಾಗಿ ಹೇಗೆ ಜೀವನ ನಡೆಸಬೇ ಕೆನ್ನುವ ಬಗ್ಗೆ ಹೇಳಿಕೊಡಲಾ ಗುತ್ತದೆ.ಅದನ್ನು ಚಾಚೂ ತಪ್ಪದೇ ಪರಿಪಾಲಿಸುವುದಾಗಿಯೂ ಶಪಥ ಮಾಡುತ್ತಾರೆ.ಆದರೆ ಕೆಲವು ಧರ್ಮಗುರುಗಳು ತಮ್ಮ ಸಂನ್ಯಾಸ ಹಾಗೂ ಅದರ ಪವಿತ್ರತೆಗೆ ಧಕ್ಕೆ ತರುವಂಥ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ಅವರಿಂದಾಗಿ ಏಸು ಹಾಗೂ ಕ್ರೈಸ್ತ ಧರ್ಮಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ದುರಂತದ ವಿಷಯ ಏನಂದ್ರೆ ಇಂಥಾ ನೀತಿಗಟ್ಟ-ಲಜ್ಜೆಗೆಟ್ಟ ಫಾದರ್ ಗಳನ್ನು ರಕ್ಷಿಸುವಂಥ ಕೆಲಸವನ್ನು ಧಾರ್ಮಿಕ ಮುಖಂಡರೆನಿಸಿಕೊಂಡವರು ಮಾಡುತ್ತಿದ್ದಾರೆ.ತಮಗೆ ಬೇಕಾದವರನ್ನೇ ಕಮಿಟಿಗೆ ನೇಮಿಸಿ ಕ್ಲೀನ್ ಚಿಟ್ ನೀಡುವಂತೆ ಮಾಡುತ್ತಿದ್ದಾರೆ.ಫಾದರ್ ಜಯಕರನ್ ವಿಚಾರದಲ್ಲೂ ಹೀಗೆಯೇ ಆಗಬಹುದೆನ್ನುವ ಶಂಕೆ ಕಾಡುತ್ತಿದೆ..” ಎನ್ನುತ್ತಾರೆ…ರಫಾಯಲ್ ರಾಜ್-ಕಥೋಲಿಕ ಕ್ರೈಸ್ತರ ಕನ್ನಡ ಬಳಗ
ದೂರು ದಾಖಲಾಗುತ್ತಿದ್ದಂತೆ ಫಾದರ್ ಪರಾರಿ :
ದೂರು ದಾಖಲಾಗುತ್ತಿದ್ದಂತೆ ಫಾದರ್ ಜಯಕರನ್ ನಾಪತ್ತೆಯಾಗಿದ್ದಾರೆ.ಚರ್ಚ್ ನ ಸುತ್ತಮುತ್ತ ಸುಳಿಯದಂತಾಗಿದ್ದಾರೆ.ಅವರನ್ನು ಸಂಪರ್ಕಿಸಲು ಅವರ 8073353221 ಮೊಬೈಲ್ ಗೆ ಕರೆ ಮಾಡಿದ್ರೂ ಸ್ವಿಚಾಫ್ ಬರುತ್ತಿತ್ತು.ನೈಜವಾಗಿ ನಡೆದಿದ್ದೇನು ಎನ್ನುವುದನ್ನು ತಿಳಿಯೊಕ್ಕೆ ನಿರಂತರವಾಗಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿರುವ ಸೆಕ್ಷನ್ ಗಳೆಲ್ಲವೂ ಜಾಮೀನುಬದ್ದ ಆರೋಪಗಳಿದ್ದಾಗ್ಯೂ ಅವರು ನಾಪತ್ತೆಯಾಗಿದ್ದೇಕೆ ಎನ್ನುವುದು ಶಂಕೆ ಹಾಗೂ ಕುತೂಹಲ ಮೂಡಿಸಿದೆ.ತಾನು ಸರಿಯಾಗಿದ್ದೇನೆ ಎನ್ನುವ ನಂಬಿಕೆ ಇದ್ರೆ ತಪ್ಪು ಮಾಡಿದವವರಂತೆ ಏಕೆ ನಾಪತ್ತೆಯಾಗಬೇಕಿತ್ತು ಎನ್ನುವುದು ಧರ್ಮಕೇಂದ್ರದ ಭಕ್ತಾದಿಗಳ ಪ್ರಶ್ನೆ.
ಕ್ರೈಸ್ತ ಧರ್ಮಗುರು ವಿರುದ್ದ ಕೇಳಿಬಂದಿರುವ ಆಪಾದನೆ ಸಮಾಜದ ಮುಂದೆ ಮತ್ತೊಮ್ಮೆ ಕ್ರೈಸ್ತರು ತಲೆತಗ್ಗಿಸುವಂತೆ ಮಾಡಿದೆ.ಈ ಬಗ್ಗೆ ಒಂದು ನಿಷ್ಪಕ್ಷಪಾತ ತನಿಖೆ ನಡೆಯಬೇಕಿದೆ.ಎಲ್ಲಕ್ಕಿಂತ ಹೆಚ್ಚಾಗಿ ಧಾರ್ಮಿಕ ಮುಖಂಡರೆನಿಸಿಕೊಂಡವರು, ಸಾಂಸರಿಕ ಬದುಕಿನ ವಯೋಸಹಜ ಆಕರ್ಷಣೆ-ಅಗತ್ಯಗಳನ್ನು ನಿಗ್ರಹಿಸಿಕೊಳ್ಳಲಾಗದೆ ಹಾದಿ ತಪ್ಪುತ್ತಿರುವ ಕೆಲವು ನೀತಿಗೆಟ್ಟ ಕ್ರೈಸ್ತ ಗುರುಗಳನ್ನು ಶಿಕ್ಷಿಸುವ,ಕ್ರೈಸ್ತತ್ವದ ಪ್ರತೀಕವಾಗಿ ತೊಟ್ಟಿರುವ ಪವಿತ್ರ ಹಾಗೂ ಶುಭ್ರವಾದ ಬಿಳಿಯ ನಿಲುವಂಗಿಯನ್ನು ಕಳಚಿಸುವಂಥ ಶಿಕ್ಷೆ ನೀಡಬೇಕಿದೆ.ಅವರ ಕಿವಿ ಹಿಂಡುವ ಕೆಲಸ ಮಾಡಬೇಕಿದೆ.ಇಲ್ಲವಾದಲ್ಲಿ ಕ್ರೈಸ್ತ ಸಮುದಾಯಕ್ಕೆ ಮುಜುಗರ ತರಿಸುವಂಥ ಇಂಥಾ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.
ಮಾಹಿತಿ ಕೃಪೆ : ನ್ಯೂಸ್ ಕನ್ನಡ …