
ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ಕಾರ್ಯಕ್ರಮ.. ಸೂಲಿಬೆಲೆ ವಿರುದ್ದ ಎಫ್ ಐ ಆರ್ ಆಗಿಲ್ಲ
ನಮೋ ಬ್ರಗೇಡ್ 2.O ಹಾಗು ಅಜೇಯ ಸಂಸ್ಕೃತಿ ಬಳಗ ವತಿಯಿಂದ ಯುವ ಬ್ರಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರಿಂದ ಮೂರು ದಿನಗಳ ಕಾಲ ಯಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇನ್ನೂ ಮಲಗಿದರೆ ಏಳುವಾಗ ಭಾರತವಿರುವುದಿಲ್ಲ ಎಂಬ ಶೀರ್ಷಿಕೆಯಡಿಯಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು ಆಗಸ್ಟ್ 28.29.30ರಂದು ಸಂಜೆ 6.30ಕ್ಕೆ ಆಚಾರ್ಯತ್ರರ ಭವನದಲ್ಲಿ ನಡೆಯಲಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುವ ಬ್ರಿಗೇಡ್ ನ ವಿನಯ್ ಶಿವಮೊಗ್ಗ ಭಾರತದ ವಿಶ್ವಗುರುವಾಗುವ ಸಂಧರ್ಭದಲ್ಲಿ ಭಾರತದ ವಿರುದ್ಧ ಸುಳ್ಳು ವಿವಾದಗಳನ್ನು ಸೃಷ್ಠಿಸಿ ಭಾತರದ ಹೆಸರಿಗೆ ದಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಹಾಗು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ತರುವ ನಿಟ್ಟಿನಲ್ಲಿ ಈ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಆಗಸ್ಟ್ 24ರ 2023ರಂದು ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಸೌಂಗಂಧಿಕ ರಘುನಾಥ್ ರವರು ಫೇಸ್ ಬುಕ್ ನಲ್ಲಿ ಚಕ್ರವರ್ತಿ ಸೂಲಿಬೆಲೆ ಹೆಸರಲ್ಲಿ ಬಂದಂತಹ ಆಪೇಕ್ಷಾರ್ಹ ಸಂದೇಶದ ವಿರುದ್ಧ ವಿನೋಬನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ವಿನಯ್ ಶಿವಮೊಗ್ಗ ದೂರಿನ ಎಫ್ ಐ ಆರ್ ಆಗಿಲ್ಲ ಅದನ್ನು ಸೈಬರ್ ವಿಭಾಗ ನೋಡಿಕೊಳ್ಳುತ್ತೆ ಎಂದರು.
ವರದಿ:; ವಿನಯ್ ಶಿವಮೊಗ್ಗ