
ಶಿವಮೊಗ್ಗ: ಭಾರತದಲ್ಲಿ ಇಸ್ರೋ ಆರಂಭಕ್ಕೆ ಅವಕಾಶ ಮಾಡಿ ಕೊಟ್ಟಿದ್ದು ನೆಹರೂರವರು ಚಂದ್ರಯಾನ -3 ರಲ್ಲಿ ಸಿಕ್ಕ ಯಶಸ್ಸಿನ ಫಲ ಸಂಪೂರ್ಣವಾಗಿ ವಿಜ್ಙಾನಿಗಳಿಗೆ ಸಲ್ಲುತ್ತದೆ.ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಪಕ್ಷ ಚುನಾವಣ ಸಮಯದಲ್ಲಿ ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿತ್ತು ವಿರೋಧ ಪಕ್ಷದವರು ಗ್ಯಾರಂಟಿ ಸುಳ್ಳೆಂದು ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದವು. ಆದರೆ ಈಗಾಗಲೇ ಮೂರು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ ಆಗಸ್ಟ್ 30ರಂದು ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಡಿಸಿಎಮ್ ಡಿ.ಕೆ ಶಿವಕುಮಾರ್ ರವರು ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಿದ್ದಾರೆ ಇದರಿಂದ ಒಂದು ಕೋಟಿ ಹತ್ತು ಲಕ್ಷ ಮಹಿಳೆಯರಿಗೆ ಹಣ ಸಿಗಲಿದೆ ಎಂದರು.
ವೆಚ್ಚಕ್ಕಿಂತ ಪ್ರಚಾರಕ್ಕೆ ಹೆಚ್ಚು ಖರ್ಚು ಮಾಡಿದ್ದಾರೆ
ಚಂದ್ರಯಾನ -3 ಉಡಾವಣೆಗೆ ಸುಮಾರು 615ಕೋಟಿಯಷ್ಟು ವೆಚ್ಚವಾಗಿದೆ ಆದರೆ ಬಿಜೆಪಿಯವರು ಯಶಸ್ಸಿನ ಪ್ರಚಾರಕ್ಕೆ ರಾಕೆಟ್ ಉಡಾವಣೆಗೆ ತಗುಲಿದ ವೆಚ್ಚದ ಎರಡರಷ್ಟು ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
ವರದಿ: ವಿನಯ್ ಕುಮಾರ್ ಹೆಚ್ ಎಂ.