
ಬೆಂಗಳೂರ : ಪ್ರದೀಪ ಸಾಗರ ಮೂವ್ಹೀಸ್ ಬೆಂಗಳೂರ ಇವರ ಮೂರನೇ ಚಲನಚಿತ್ರ ‘ಬ್ಯಾಂಕ್ ಲೋನ್’ ಕನ್ನಡ ಚಲನಚಿತ್ರ ದ ಚಿತ್ರೀಕರಣ ಕಳೆದ ಹದಿನೈದು ದಿನಗಳಿಂದ ಭರದಿಂದ ಸಾಗಿದೆ .
ನಿರ್ಮಾಪಕ ಪ್ರದೀಪ ಸೋನ್ಸ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಬೆಂಗಳೂರು, ಬೆಳ್ಳೂರ ಕ್ರಾಸ್, ಮಂಥನಹಳ್ಳಿ, ಕುಶಾಲನಗರದ ಸುತ್ತಮುತ್ತ ಭರದಿಂದ ಚಿತ್ರೀಕರಣ ನಡೆಸಿದ್ದಾರಲ್ಲದೆ ‘ಸಾಲ ಸಾಲ ಸಾಲ ಸಾಲದಯ್ಯ ,ಕಾಲ ಕೊಟ್ಟ ಸಾಲ ನಮಗೆ ಸಾಲದಯ್ಯ ‘ ಎನ್ನುವ ಹಾಡಿನ ಚಿತ್ರೀಕರಣವನ್ನು ಖ್ಯಾತ ಜನಪ್ರಿಯ ಜಾನಪದ ಗಾಯಕ ಗುರುರಾಜ ಹೊಸಕೋಟಿ ಅವರ ಆಭಿನಯದಲ್ಲಿ ಮಂಥನಹಳ್ಳಿ ಸುತ್ತಮುತ್ತ ಚಿತ್ರೀಕರಿಸಲಾಗಿದ್ದು ಇದೀಗ ಇನ್ನೊಂದು ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ ಹೊನ್ನಾವರದಲ್ಲಿ ಬೀಡುಬಿಟ್ಟಿದೆ.- ಬೆಂಗಳೂರಿನಂತಹ ನಗರದಲ್ಲಿ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಿ ಬದುಕಲು ಎದುರಾಗುವ ಅಡಚಣೆಗಳ ಬಗ್ಗೆ ಬೆಳಕು ಚೆಲ್ಲಲಿದೆ .ಇದೊಂದು ಬದುಕಿನ ಪಯಣದ ಚಿತ್ರವಾಗಿದ್ದು ಹಲವಾರು ತಿರುವುಗಳನ್ನು ಒಳಗೊಂಡರೂ ತಮ್ಮ ಗುರಿಯನ್ನು ಹೇಗೆ ಮುಟ್ಟುತ್ತಾರೆ ಎಂಬ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುವ ಚಿತ್ರ ಪ್ರೇಕ್ಷಕರ ಮನ ತಟ್ಟುತ್ತದೆ . ಈ ಚಿತ್ರ ಕೂಡ ಯಶಸ್ಸು ಕಾಣುವದರಲ್ಲಿ ಸಂದೇಹವೇ ಇಲ್ಲ. ಇದಕ್ಕಾಗಿ ನಾವು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು ಈಗಾಗಲೇ ಶೇ. ೮೦% ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ .
- ಶಿವಕುಮಾರ್ ಆರಾಧ್ಯ, ಗುರುರಾಜ ಹೊಸಕೋಟಿ ಅವರೂ ತುಂಬಾ ಮನೋಜ್ಞವಾಗಿ ಆಭಿನಯಿಸಿದ್ದಾರೆ. ನಾವು ಅಂದುಕೊಂಡಂತೆ ಈ ಚಿತ್ರದ ಚಿತ್ರೀಕರಣ ೨೫ ರಿಂದ ೩೦ ದಿನಗಳೊಳಗೆ ಸಂಪೂರ್ಣ ಮುಗಿಸುತ್ತಿದ್ದೇವೆ ಎಂದು ನಿರ್ದೇಶಕಿದ್ವಯರಾದ ಪೂರ್ಣಶ್ರೀ ಆರ್,ರಶ್ಮಿ ಎಸ್ ತಿಳಿಸಿದ್ದಾರೆ.

- ‘ಇದು ನನ್ನ ನಿರ್ಮಾಣದ ಮೂರನೇ ಚಿತ್ರವಾಗಿದೆ. ನಿರ್ದೇಶಕರು ಕಥೆ ಹೇಳಿದಾಗ ಇಷ್ಟ ಆಯ್ತು. ಇಂಥ ಘಟನೆಗಳೂ ನಿಜಜೀವನದಲ್ಲಿ ನಡೆದದ್ದು ಕೇಳಿದ್ದೆ ಅದನ್ನೇ ಇದೀಗ ತೆರೆಗೆ ತರುತ್ತಿರುವೆ’ ಎಂದು ನಿರ್ಮಾಪಕ ಪ್ರದೀಪ್ ಸೋನ್ಸ್ ತಿಳಿಸಿದ್ದಾರೆ. ಮುಖ್ಯ ತಾರಾಗಣದಲ್ಲಿ ಪ್ರದೀಪ ಸೋನ್ಸ್ , ಮತ್ತೊಬ್ಬ ಯುವ ನಾಯಕ ನವರಸ ನಟನಾ ಅಕಾಡೆಮಿಯ ಮನೋಜ್ ಶೆಟ್ಟಿ, ಸೇರಾ (ಟೆಂಟ್ ಸಿನಿಮಾ), ಲಿಖಿತಾ ಅನಂತ್, ಶಿವಕುಮಾರ್ ಆರಾಧ್ಯ, ಕಾವ್ಯ,ಗದಗ ನಗರದ ಅವಿನಾಶ್ ಗಂಜಿಹಾಳ, ಮುರುಳೀಧರ್ ಮುಂತಾದವರಿದ್ದಾರೆ.

- ಛಾಯಾಗ್ರಹಣ ಶೇಖರ್, ಚಿತ್ರಕಥೆ, ಸಂಕಲನ ,ತಾಂತ್ರಿಕ ನಿರ್ದೇಶನ ಟಿ. ಮುತ್ತುರಾಜು, ಸಂಭಾಷಣೆಯನ್ನು ಶ್ರೀದೇವಿ ಮಂಜುನಾಥ , ಸಾಹಿತ್ಯದ ಜೊತೆಗೆ ಸಂಗೀತವನ್ನು ವಿ.ಮನೋಹರ ನೀಡಿದ್ದು, ಪ್ರಸಾದನ ಮೋಹನ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ , ಸಹನಿರ್ದೇಶಕರಾಗಿ ಸತೀಶ ಜೋಶಿ, ನಿರ್ದೇಶನವನ್ನು ಈ ಹಿಂದೆ ‘ಶ್ರೀ ಕಬ್ಬಾಳಮ್ಮ ಮಹಿಮೆ’ ಪೌರಾಣಿಕ ಸಿನೇಮಾ ಹಾಗೂ ಈಗಾಗಲೇ ಸುಮಾರು ೯೭ ರಾಷ್ಟ್ರೀಯ ,ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದು ಇನ್ನೂ ಹಲವಷ್ಟು ಪ್ರಶಸ್ತಿಗಳ ನಿರೀಕ್ಷೆಯಲ್ಲಿರುವ ‘ಮನೆ” ಕಲಾತ್ಮಕ ಚಲನಚಿತ್ರದ ಜಂಟಿ ನಿರ್ದೇಶಕಿಯರಾದ ಪೂರ್ಣಶ್ರೀ ಆರ್, ಮತ್ತು ರಶ್ಮೀ ಎಸ್ ನಿರ್ದೇಶನ ಮಾಡುತ್ತಿದ್ದಾರೆ.
****
-ಡಾ.ಪ್ರಭು… ಗಂಜಿಹಾಳ-9448775346..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…