
ಶಿವಮೊಗ್ಗ: ಅಜೇಯ ಸಂಸ್ಕ್ರತಿ ಬಳಗ ಹಾಗು ನಮೋ ಬ್ರಿಗೇಡ್ ವತಿಯಿಂದ ಪ್ರಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮ ಕರ್ನಾಟಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇನ್ನೂ ಮಲಗಿದರೆ ಏಳುವಾಗ ಭಾರತವಿರುವುದಿಲ್ಲ ಉಪನ್ಯಾಸ ಕಾರ್ಯಕ್ರಮದ ನಂತರ ಮಾಧ್ಯಮಗಳ ಬಳಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಶಿವಮೊಗ್ಗದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ಬಗ್ಗೆ ಪ್ರತಿಕ್ರಿಯೆ ನೀಡಿ ಸೋಷಿಯಲ್ ಮೀಡಿಯಾದಲ್ಲಿ ನನ್ನ ಹೆಸರಿನ ಖಾತೆಯಿಂದ ಹೊರ ಬಂದಿರುವ ಸಂದೇಶದ ಬಗ್ಗೆ ಸೋಷಿಯಲ್ ಮೀಡಿಯಾ ನೋಡಿಕೊಳ್ಳುತ್ತಿರುವ ನಮ್ಮ ಹುಡುಗರ ಬಳಿ ಮಾಹಿತಿ ತೆಗೆದುಕೊಳ್ಳುವೆ ಎಫ್ ಐ ಆರ್ ಗೆ ಸೂಕ್ತ ಉತ್ತರ ನ್ಯಾಯಾಲಯದಲ್ಲಿ ನೀಡುತ್ತೇನೆ. ಈ ಹಿಂದೆ ಇಂತಹ ಅನೇಕ ಸಂಗತಿಗಳು ನಡೆದಿದೆ ಆಗ ಎಫ್ ಐ ಆರ್ ದಾಖಲಾಗಿಲ್ಲ ಈಗ ಎಫ್ ಐ ಆರ್ ದಾಖಲಾಗಿದೆ ಇದನ್ನು ಸಹ ಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇನೆ.
ಉಪನ್ಯಾಸ ಕಾರ್ಯಕ್ರಮಕ್ಕೆ ಪೋಲೀಸರು ಬಹಳ ಪ್ರೀತಿಯಿಂದ ಭದ್ರತೆ ಒದಗಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಲಿ ಎಂದು ನೀಡಿರುವ ಭದ್ರತೆಗೆ ಪೋಲೀಸರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದರು.
ವರದಿ : ವಿನಯ್ ಕುಮಾರ್ ಹೆಚ್.ಎಮ್