ಶಿವಮೊಗ್ಗ : ನಗರದ ಬಿ.ಹೆಚ್ ರಸ್ತೆಯಲ್ಲಿರುವ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದ್ದ ಎರಡನೇ ದಿನದ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮಕ್ಕೆ ಸಂಜೆ ವೇಳೆಯಲ್ಲಿ ಪ್ರತಿಭಟನೆಯ ಗಾಳಿ ಬೀಸಿತು.

ಜಿಲ್ಲಾ ಕಾಂಗ್ರೆಸ್ ನಿಂದ ಕಾರ್ಯಕರ್ತರು ಕರ್ನಾಟಕ ಸಂಘ ಬಳಿ ಸೂಲಿಬೆಲೆ ವಿರುದ್ಧ ಘೋಷಣೆ ಕೂಗುತ್ತಾ ಕರ್ನಾಟಕ ಸಂಘ ಬಳಿ ಆಗಮಿಸಿದರು. ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪೊರಕೆ ಹಿಡಿದು ದಿಕ್ಕಾರ ಕೂಗಿದರು.



ಪ್ರತಿಭಟಿಸಲು ಬಂದವರು ಪ್ರತಿಭಟನೆ ಎದುರಿಸಿದರು.
ಕಾರ್ಯಕ್ರಮದ ರುವಾರಿಗಳಾದ ನಮೋ ಬ್ರಿಗೇಡ್ ತಂಡದವರು ಕರ್ನಾಟಕ ಸಂಘದ ಹೊರ ಬಂದು ಕಾಂಗ್ರೆಸ್ ಪಕ್ಷದ ವಿರುದ್ಧ ದಿಕ್ಕಾರ ಕೂಗಲು ಆರಂಭಿಸಿದರು.


ಎರಡೂ ಕಡೆಯವರ ಪರಸ್ಪರ ಪ್ರತಿಭಟನೆ ಘೋಷಣೆಗಳು ಸಾರ್ವಜನಿಕರನ್ನು ಕರ್ನಾಟಕ ಸಂಘದ ಮುಂದೆ ನಿಲ್ಲುವಂತೆ ಮಾಡಿತ್ತು.

ಮೋದಿ…ಮೋದಿ…ಮೋದಿ
ಕಾಂಗ್ರೆಸ್ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೋಲೀಸರು ಬಸ್ ನಲ್ಲಿ ಕಾರ್ಯಕರ್ತರನ್ನು ತೆಗೆದುಕೊಂಡು ಸ್ಥಳಾಂತರಿಸುವಾಗ ರಸ್ತೆ ದಾಟಿ ಬಸ್ ಬಳಿ ಬಂದ ನಮೋ ಬ್ರಿಗೇಡ್ ಹಾಗು ಬಿಜೆಪಿ ಕಾರ್ಯಕರ್ತರು ಬಸ್ ಸಾಗುವಾಗ ಡಿವೈಡರ್ ಮೇಲೆ ನಿಂತು ಮೋದಿ ಜೈಕಾರದ ಘೋಷಣೆಗಳನ್ನು ಹಾಕಿದರು.

ಪ್ರತಿಭಟನಾ ಸ್ಥಳಕ್ಕೆ ಗೋ ಮೂತ್ರ ಸಿಂಪಡಿಸಿದರು.

ಎರಡೂ ಕಡೆಯವರ ಪ್ರತಿಭಟನೆ ತಣ್ಣಗಾದ ನಂತರ ನಮೋ ಬ್ರಿಗೇಡ್ ನ ಅಭಿಮಾನಿ ಒಬ್ಬ ಕಾಂಗ್ರೆಸ್ ಪ್ರತಿಭಟನೆ ಮಾಡಿದ ಸ್ಥಳಕ್ಕೆಲ್ಲಾ ಗೋಮೂತ್ರ ಹಾಕಿದರು.
ವರದಿ – ವಿನಯ್ ಕುಮಾರ್ ಹೆಚ್.ಎಮ್