ಶಿವಮೊಗ್ಗ : ಶಿವಮೊಗ್ಗ ಏರ್ಪೋರ್ಟ್ ನಿಂದ ವಿಮಾನ ಹಾರಾಟ ಆರಂಭವಾಗಿದೆ. ಆ.31ರಂದು ಇದರ ಅಧಿಕೃತ ಕಾರ್ಯಕ್ರಮ ರಾಜ್ಯ ಸರ್ಕಾರ ವತಿಯಿಂದ ನಡೆದಿತ್ತು.
ಕಾರ್ಯಕ್ರಮದಲ್ಲಿ ಏರ್ಪೋರ್ಟ್ ಗೆ ಭೂಮಿ ಕೊಟ್ಟ ರೈತರಿಗೆ ಗೌರವಿಸಲು ಸಾಂಕೇತಿಕವಾಗಿ ಕೃಷ್ಣಪ್ಪ ಹಾಗು ಗೋವಿಂದರಾಜು ಎಂಬುವರನ್ನು ಸನ್ಮಾನಿಸಲಾಗಿತ್ತು. ಆ ವೇಳಯಲ್ಲಿ ಇವರಿಬ್ಬರ ವಿರುದ್ಧ ಒಂದಷ್ಟು ಆಕ್ಷೇಪಣೆ ಕೂಗು ಕೇಳಿಬಂದಿತ್ತು.
ಮಾಧ್ಯಮಗಳ ಮುಂದೆ ಸನ್ಮಾನಿತರು.

16 ವರ್ಷದ ಸಮಸ್ಯೆಯ ನಂತರ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಸರ್ಕಾರ ಸ್ಪಂಧಿಸಿರಲಿಲ್ಲ. ನಂತರ ಬಂದ ಸರ್ಕಾರಗಳು ಸ್ಪಂಧಿಸರಿಲ್ಲ.ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬಗೆಹರಿಸಿದೆ ಎಂದು ಸೋಗಾನೆ ಭೂಹಕ್ಕು ರೈತರ ಹೋರಾಟ ಸಮಿತಿ ಅಧ್ಯಕ್ಷರು ಕೃಷ್ಣಪ್ಪ ತಿಳಿಸಿದರು.
ಭೂಮಿ ಕೊಟ್ಟ ರೈತರಿಗೆ ಸೈಟು…?
ಕೆಹೆಚ್ ಬಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಸೈಟ್ ಹಂಚಿಕೆಗೆ ತಾಕೀತು ಮಾಡಿದೆ ಅಂತಿಮ ತೀರ್ಮಾನ ಸೆ. 29 ಆದೇಶ ಹೊರಡಲಿದೆ. ಬಿಎಸ್ ವೈ ಮತ್ತು ಸಂಸದರ ಶ್ರಮದಿಂದ ನಿಲ್ದಾಣ ನಿರ್ಮಾಣಗೊಂಡಿದೆ ಎಂದರು.
ಅಟ್ರಾಸಿಟಿ ಕೇಸು ಹಾಕಬೇಕು..!
ಆ. 31 ರಂದು ರೈತರ ಪರವಾಗಿ ಇಬ್ವರನ್ನ ಸನ್ಮಾನಿಸಲಿ ಎಂಬ ಆಸೆ ಇತ್ತು ನನ್ನನ್ನ ಮತ್ತು ಗೋವಿಂದರಾಜು ಅವರನ್ನ ಸನ್ಮಾನಿಸಲಾಗಿತ್ತು. ಆಗ ಕೆಲವರು ಜಮೀನು ಕಳೆದುಕೊಂಡವರಿಗೆ ನಕಲಿ ರೈತ ಎಂದು ಹೇಳಿದ್ದಾರೆ. ನಮಗೆ ಅವಮಾನ ಮಾಡಲಾಗಿದೆ.
ಜಮೀನು ಕಳೆದುಕೊಂಡಿರುವುದಕ್ಕೆ ದಾಖಲಾತಿ ಇದೆ. ಏಜೆಂಟ್ ದಲ್ಲಾಳಿ ಎಂದಿದ್ದಾರೆ. ಗೋವಿಂದರಾಜು ಅವರು ಎರಡು ಎಕರೆ ಕಳೆದುಕೊಂಡಿದ್ದಾರೆ. ಮತ್ತು ನನ್ನದು ಜಮೀನು 2.18 ಎಕರೆ ಜಮೀನು ಕಳೆದುಕೊಂಡಿರುವೆ. ನಮ್ಮನ್ನ ರೈತರಲ್ಲವೆಂದು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಅವರನ್ನ ಬಂಧಿಸಬೇಲು. ಅಟ್ರಾಸಿಟಿ ಕೇಸ್ ಹಾಕಬೇಕೆಂದು ಆಗ್ರಹಿಸಿದ್ದಾರೆ.
ನಾವು ನಕಲಿ ಅಲ್ಲ…
ತಂದೆಯ ಹೆಸರಿನಲ್ಲಿ ಏಳು ಎಕರೆ 36 ಗುಂಟೆ ಜಮೀನು ಇತ್ತು. ಮಾರಾಟ ಮಾಡಿ ಎರಡು ಎಕರೆ 18 ಗುಂಟೆ ಉಳಿದಿತ್ತು. ನಮ್ಮ ತಂದೆಯ ಅಕೌಂಟ್ ಗೆ ಹಣ ಬಂದಿದೆ. ನಮ್ಮ ತಂದೆ ಈಗ ಇಲ್ಲ. ನಾವು ನಕಲಿ ಅಲ್ಲವೆಂದು ಹೇಗೆ ಅವರು ಹೇಳಿದ್ದಾರೆ ಎಂದು ಗೋವಿಂದ್ ರಾಜು ಪ್ರಶ್ನಿಸಿದರು.
ರೈತರಿಗೆ ಸನ್ಮಾನ ಮಾಡಬಾರದ…?
ಏರ್ಪೋರ್ಟ್ ಗಾಗಿ ಅತಿ ಹೆಚ್ಚು ದೊಡ್ಡ ಜಮೀನು ಕಳೆದುಕೊಂಡಿದ್ದಾರೆ. ಅವರನ್ನ ಬಿಟ್ಟು ನಿಮ್ಮನ್ನ ಯಾಕೆ ಸನ್ಮಾನಿಸಲಾಯಿತು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕೃಷ್ಣಪ್ಪ, ನಾನು ಬಿಜೆಪಿಗೆ ಸೇರಿಲ್ಲ. 40 ಎಕರೆ ಜಮೀನು ಕಳೆದುಕೊಂಡಿದ್ದಾರೆ. ಅವರಲ್ಲಾ ಒಂದು ಕುಟುಂಬದವರು ಪೋಡಿ ಮಾಡಿದರೆ ಅವರೆಲ್ಲರಿಗೂ ಕಡಿಮೆ ಜಮೀನು ಸಿಗಲಿದೆ. ಹಾಗೆ ನಮ್ಮ ಮತ್ತು ಗೋವಿಂದರಾಜು ಕುಟುಂಬದ್ದಾಗಿದೆ. ಹಾಗೆಂದ ಮಾತ್ರಕ್ಕೆ ನಾನು , ರೈತನೇ ಅಲ್ಲ ಎಂದರೆ ಅಪಮಾನವಾದಂತೆ ತಾನೆ? ನಮ್ಮ ದಾಖಲಾತಿ ಇದೆ. ಸಣ್ಣ ರೈತರಿಗೆ ಸನ್ಮಾನ ಮಾಡಬಾರದ? ನಮ್ಮ ಉದ್ದೇಶ ಭೂಮಿಕೊಟ್ಟ ರೈತರಲ್ಲಿ ಇಬ್ಬರಿಗೆ ಸನ್ಮಾನಿಸಲಿ ಎಂಬ ಉದ್ದೇಶವಿತ್ತು. ಸರ್ಕಾರದ ಮುಂದೆ ನಮ್ಮನ್ನೇ ಸನ್ಮಾನಿಸಿ ಎಂಬ ಬೇಡಿಕೆ ಇರಲಿಲ್ಲ.
ರೈತರಿಗೆ ಅವಮಾನಿಸಿದವರನ್ನು ಗಡಿಪಾರು ಮಾಡಬೇಕು.
ನಮ್ಮನ್ನು ಸನ್ಮಾನಿಸುವ ವೇಳೆ ನಮಗೆ ರೈತರೇ ಅಲ್ಲ ಏಜೆಂಟರ್ ಎಂದರೆ ಸಹಿಸಲು ಸಾಧ್ಯವಾ ಎಂದು ಕೃಷ್ಣಪ್ಪ ಆಕ್ಷೇಪಿಸಿದ್ದಾರೆ. ವಿಜಯ ಕುಮಾರ್ ಆಕ್ಷೇಪಣೆ ಮಾಡಿದ್ದಾರೆ. ಅವರು ರೈತರೂ ಅಲ್ಲ. ರೈತರನ್ನ ಅವಮಾನಿಸಿದ ಅವರನ್ನ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ವರದಿ – ವಿನಯ್ ಕುಮಾರ್ ಹೆಚ್.ಎಮ್