
ತೀರ್ಥಹಳ್ಳಿ: ನಿನ್ನೆ ಅಂದರೆ ದಿನಾಂಕ 15-09-2023 ರಂದು ಆಗುಂಬೆ ಪೊಲೀಸ್ ಠಾಣೆ,ಆಗುಂಬೆ ನಕ್ಸಲ್ ನಿಗ್ರಹ ಪಡೆ, ಆಗುಂಬೆ ಲಯನ್ಸ್ ಕ್ಲಬ್, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಆಗುಂಬೆ ಇವರ ಸಹಯೋಗದೊಂದಿಗೆ
ಶಿವಮೊಗ್ಗ ಪೊಲೀಸ್ ಪರಿಸ್ಟಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರು ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ ಗಜಾನನ ವಾಹನ ಸುತಾರ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ಇವರ ನೇತೃತ್ವದಲ್ಲಿ ಅಶ್ವಥ್ ಗೌಡ ವೃತ ನಿರೀಕ್ಷಕರು ಮಾಳೂರು ವೃತ್ತ ಹಾಗೂ ರಂಗನಾಥ್ ಅಂತರಗಟ್ಟಿ ಪಿಎಸ್ಐ ಆಗುಂಬೆ ಠಾಣೆ ರವರುಗಳು ಆಗುಂಬೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಸದರಿ ಶಿಬಿರದಲ್ಲಿ ಆಗುಂಬೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಯೋಧರು, ಶಿಕ್ಷಕರು, ಮಾಧ್ಯಮ ಮಿತ್ರರು, ವಿವಿಧ ಸಂಘ ಸಂಸ್ಥೆ ಸದಸ್ಯರು ಹಾಗೂ ನಾಗರಿಕರು ಸೇರಿದಂತೆ ಒಟ್ಟು 110 ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ
ಉಳಿದವರಿಗೆ ಪ್ರೇರಣೆಯಾಗಿರುತ್ತಾರೆ.