
ಶಿವಮೊಗ್ಗ: ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ,
ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ , ಇವರ ಸಹಯೋಗದೊಂದಿಗೆ
2023 – 24 ನೇ ಸಾಲಿನ ಶಿವಮೊಗ್ಗ ಜಿಲ್ಲಾ ಮಟ್ಟದ 14/17 ವಯೋಮಿತಿಯ ಶಾಲಾ ಬಾಲಕ ಹಾಗೂ ಬಾಲಕಿಯರ ಕರಾಟೆ ಸ್ಪರ್ಧೆಯು ದಿನಾಂಕ 23/09/2023 ಶನಿವಾರ ದಂದು ನಡೆದಿದ್ದು.
ಈ ಕರಾಟೆ ಪಂದ್ಯಾವಳಿಯಲ್ಲಿ ಎ ಝೆಡ್ ಮಾರ್ಷಿಯಲ್ ಆರ್ಟ್ಸ್ ನ ಹಾಗೂ* *ಸಹ್ಯಾದ್ರಿ ಶಿವಮೊಗ್ಗ ಡಿಸ್ಟಿಕ್ ಕರಾಟೆ ಅಶೋಷಿಯೇಷನ್ ನ ಕ್ರೀಡಾಪಟುಗಳು ಭಾಗವಹಿಸಿ. ಪ್ರಥಮ ಸ್ಥಾನ = 21
ದ್ವಿತೀಯ ಸ್ಥಾನ = 13
ತೃತೀಯ ಸ್ಥಾನ = 04 ಒಟ್ಟಾರೆ 38 ಪದಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ರಾಜ್ಯಮಟ್ಟಕ್ಕೆ ಆಯ್ಕೆ ಆದಂತಹ ಕ್ರೀಡಾಪಟುಗಳಿಗೆ ಎ ಝೆಡ್ ಮಾರ್ಷಿಯಲ್ ಆರ್ಟ್ಸ್ ನ ಹಾಗೂ ಸಹ್ಯಾದ್ರಿ ಶಿವಮೊಗ್ಗ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ತರಬೇತಿದಾರರುಗಳಾದ ಶಿಹಾನ್ ಎ ಝೆಡ್ ಮುಹೀಬ್
ಸನ್ ಸೈ ಸಾಧಿಕ್ , ಸೇನ್ ಸೈ ಮಂಜುನಾಥ್ , ಸೇನ್ ಸೈ ನವೀನ್ ಸೇನ್ ಸೈ ಸತೀಶ್ .ಸೇನ್ ಸೈ ಭರತ್, ಪೃಥ್ವಿ , ಮಹೇಶ, ಅಪೂರ್ವ, ವಿಜಯ್ , ಸಲಿಂ, ದೀಕ್ಷಾ ಇನ್ನಿತರರು ಶುಭಾಶಯ ತಿಳಿಸಿದ್ದಾರೆ.