
ತೀರ್ಥಹಳ್ಳಿ: ಸಹಕಾರಿ ಕ್ಷೇತ್ರದ ಬೀಷ್ಮ, ತೀರ್ಥಹಳ್ಳಿಯ ಹೆಮ್ಮೆ ವಿಶ್ವ ಸಹಕಾರಿ ಬಿ ಎಸ್ ವಿಶ್ವನಾಥನ್ ನಿಧನಕ್ಕೆ ತಿರ್ಥಹಳ್ಳಿ. ಕ್ಷೇತ್ರದ ಶಾಸಕ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಹಕಾರಿ ಕ್ಷೇತ್ರದ ದಿಗ್ಗಜ ಆರ್ ಎಂ ಮಂಜುನಾಥ್ ಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ,
ತೀರ್ಥಹಳ್ಳಿಯ ನೆಲದಲ್ಲಿ ಸಾಮಾಜಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಸಾಧಕರು ಜನಿಸಿದ್ದಾರೆ ,ಸಾಹಿತ್ಯ ಲೋಕದ ಮೇರು ಪರ್ವತ ಕುವೆಂಪು, ರಾಜಕೀಯ ಕ್ಷೇತ್ರದ ಆದರ್ಶ ವ್ಯಕ್ತಿತ್ವ ಗೋಪಾಲ ಗೌಡರು ಹೀಗೆ ಬೇರೆ ಬೇರೆ ಕ್ಷೇತ್ರದ ಹಲವು ಜನ ಸಾದಕರಿಗೆ ಜನ್ಮ ಕೊಟ್ಟ ತೀರ್ಥಹಳ್ಳಿ, ಸಹಕಾರಿ ಕ್ಷೇತ್ರದಲ್ಲಿ ಬಿ ಎಸ್ ವಿಶ್ವನಾಥನ್ ಗೆ ಜನ್ಮ ಕೊಟ್ಟು ತೀರ್ಥಹಳ್ಳಿ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಗೊಳಿಸುವಂತೆ ಮಾಡಿದ ಹಿರಿಮೆ ತೀರ್ಥಹಳ್ಳಿ ಮಣ್ಣಿನದ್ದಾಗಿದೆ,
ತೀರ್ಥಹಳ್ಳಿ ಹೆಸರು ವಿಶ್ವ ಬ್ಯಾಂಕಿನವರೆಗೆ ತೆಗೆದುಕೊಂಡು ಹೋದ ಕೀರ್ತಿಯೂ ಕೂಡ ವಿಶ್ವನಾಥನ್ ಅವರಿಗೆ ಸಲ್ಲುತ್ತದೆ ಎಂದಿರುವ ಶಾಸಕರು ಶ್ರೇಷ್ಠ ಸಹಕಾರಿ ಬಿ ಎಸ್ ವಿ ನಿಧನ ಜಗತ್ತಿನ ಸಹಕಾರಿ ರಂಗಕ್ಕೆ ಮತ್ತು ತೀರ್ಥಹಳ್ಳಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ,
ಸಹಕಾರಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿ ಸಹಕಾರಿ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ದ ಕೀರ್ತಿ ವಿಶ್ವನಾಥನ್ ಅವರಿಗೆ ಸಲ್ಲುತ್ತದೆ ಅವರ ನಿಧನ ಸಹಕಾರಿ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಹಕಾರಿ ಕ್ಷೇತ್ರದ ದಿಗ್ಗಜ ಅಪೇಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷರು ಆದ ಆರ್ ಎಂ ಮಂಜುನಾಥ್ ಗೌಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಘುರಾಜ್ ಹೆಚ್. ಕೆ..9449553305.