
ನವದೆಹಲಿ: ಪತ್ರಕರ್ತರು ಸುದ್ದಿಗಳನ್ನು ಬರೆದರೆ ಆ ಸುದ್ದಿಗಳ ವಿರುದ್ಧ ಕೇಸ್ ದಾಖಲಿಸುವುದು ಅವರಿಗೆ ಬೆದರಿಕೆ ಹಾಕುವುದು ತಮ್ಮ ಹಣಬಲ ತೋಳ್ಬಲವನ್ನು ಬಳಸಿಕೊಂಡು ಪತ್ರಕರ್ತರನ್ನೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುವುದು ಸಾಮಾನ್ಯವಾದ ಸಂಗತಿಯಾಗಿದೆ.
ಆದರೆ ಇದಕ್ಕೆ ಶೇಕಡ 5ರಷ್ಟು ಪತ್ರಕರ್ತರು ಮಣಿದರೆ 95 ರಷ್ಟು ಪತ್ರಕರ್ತರು ಭ್ರಷ್ಟ ವ್ಯವಸ್ಥೆಯ ವಿರುದ್ಧ ಇಂತಹ ಸಮಾಜಘಾತಕ ಶಕ್ತಿಗಳ ವಿರುದ್ಧ ತಮ್ಮ ಹೋರಾಟ ನಿಲ್ಲಿಸುವುದಿಲ್ಲ ಇಲ್ಲವಾದರೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡದ್ದಕ್ಕೂ ಸ್ವಾರ್ಥಕವಾಗುವುದಿಲ್ಲ ಏಕೆಂದರೆ ಹಣ ಮಾಡಲು ಸಾಕಷ್ಟು ವ್ಯವಹಾರಗಳಿವೆ ಹಣ ಮಾಡಲು ಪತ್ರಿಕೋದ್ಯಮ ವ್ಯವಹಾರ ವಾಗಬಾರದು ,ವ್ಯವಹಾರವಾಗಿಲ್ಲ ಈ ಪೀಠಿಕೆ ಈಗ ಏಕೆಂದರೆ,
ಮಾನ್ಯ ಸರ್ವೋಚ್ಚ ನ್ಯಾಯಾಲಯ ಮಹತ್ವದ ಆದೇಶವನ್ನು ನೀಡಿದ್ದು ಈ ಆದೇಶದಲ್ಲಿ ಪತ್ರಕರ್ತರು ತಮ್ಮ ಅಂಕಣದಲ್ಲಿ ಬರೆದ ಬರಹಗಳು ತಪ್ಪಾಗಿದ್ದರೆ ಅದು ಅಪರಾಧವಲ್ಲ ತಪ್ಪು ವರದಿ ಅಷ್ಟೇ ಅದಕ್ಕೆ ಶಿಕ್ಷಿಸುವ ಅಗತ್ಯತೆ ಇಲ್ಲ ಎನ್ನುವ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ನೀಡಿದೆ.
ಮಣಿಪುರ ಹಿಂಸಾಚಾರ ಕುರಿತಂತೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ನಾಲ್ಕು ಜನ ಸದಸ್ಯರ ಬಂಧನಕ್ಕೆ ಮಧ್ಯಾಂತರ ತಡೆ ನೀಡಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಪರ್ದಿ ವಾಲಾ, ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರ ಅವರನ್ನು ಒಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಐಪಿಸಿ ಸೆಕ್ಷನ್ 153 ಎ ರ ಅಡಿಯಲ್ಲಿ ಯಾವುದೇ ಘಟನೆಯ ಬಗ್ಗೆ ಪತ್ರಕರ್ತರು ತಪ್ಪಾಗಿ ಬರೆದಿದ್ದರೆ ಅದು ಅಪರಾಧಕ್ಕೆ ಸಮಾನವಲ್ಲ, ಅದನ್ನು ತಪ್ಪಾದ ವರದಿ ಎಂದು ಪರಿಗಣಿಸಬಹುದು . ತಪ್ಪು ಮಾಹಿತಿ ತಪ್ಪು ವರದಿ ಮಾಡಿದ ಎಲ್ಲಾ ಪತ್ರಕರ್ತರನ್ನು ವಿಚಾರಣೆ ಮಾಡುತ್ತೀರಾ..? ಎಂದು ತ್ರಿಸದಸ್ಯ ಪೀಠ ಸರ್ಕಾರವನ್ನು ಪ್ರಶ್ನಿಸಿದೆ.
ಮಣಿಪುರ ಸರ್ಕಾರ ಪತ್ರಕರ್ತರ ವಿರುದ್ಧ ಸಲ್ಲಿಸಿದ ಎಫ್ ಆರ್ ನಲ್ಲಿ ಯಾವುದೇ ಗುರುತರವಾದ ಆರೋಪ ಮಾಡಿಲ್ಲ ಹೀಗಿರುವಾಗ ಎಫ್ಐಆರ್ ಅನ್ನು ಏಕೆ ರದ್ದು ಮಾಡಬಾರದು ಎಂದು ನ್ಯಾಯಪೀಠ ಸರ್ಕಾರವನ್ನು ಪ್ರಶ್ನಿಸಿದೆ.
ರಘುರಾಜ್ ಹೆಚ್.ಕೆ.9449553305.