
ಮಂಡ್ಯ >>>>ಮಳವಳ್ಳಿ> ಪಟ್ಟಣ ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಕೆಲವು ಕಡೆ ಗ್ರಾಮೀಣ ಭಾಗಗಳಲ್ಲಿ ಗ್ಯಾಸ್ ಸಿಲಿಂಡರ್ ಉಪಯೋಗಿಸುತ್ತಿದ್ದ ಜನರು ಈಗ
ಸೌದೆ ಒಲೆಗಳಲ್ಲಿ ಅಡುಗೆ ಮಾಡಲು ಶುರುಮಾಡಿದ್ದಾರೆ.ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಗ್ಯಾಸ್ ಬೆಲೆ ಏರಿಕೆಯಿಂದ ಕಂಗಾಲಾದ ಜನರು ಸೌದೆ ಒಲೆ ಗಳತ್ತ ಮುಖ ಮಾಡುತ್ತಿರುವುದು ಕಂಡುಬರುತ್ತಿದೆ .
ಕೇಂದ್ರದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಗೃಹ ಉಪಯೋಗಿ ಗ್ಯಾಸ್ ಬೆಲೆ ಕಡಿಮೆ ಮಾಡುವಲ್ಲಿ ಎರಡೂ ಸರ್ಕಾರಗಳು ವಿಫಲವಾಗಿದ್ದು. ಗ್ಯಾಸ್ ಬೆಲೆ ಏರಿಕೆ ಕಡಿಮೆ ಮಾಡಲು ವಿಫಲಗೊಂಡಿವೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ .
ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಲಾಕ್ ಡೌನ್
ಉಂಟಾಗಿ ಜನರ ಸ್ಥಿತಿಗತಿಗಳು ಹದಗೆಟ್ಟಿರುವ ಸಂದರ್ಭದಲ್ಲಿ ಗೃಹ ಉಪಯೋಗಿ ಗ್ಯಾಸ್ ಬೆಲೆ ಏರಿಕೆ ಆಗಿರುವುದರಿಂದ ಬಡಜನರ ಮೇಲೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ದೊಡ್ಡ ಬರೆಯನ್ನೇ ಎಳೆದಿವೆ ಎನ್ನಬಹುದು .
ಗ್ಯಾಸ್ ಬೆಲೆ ಏರಿಕೆ ಆದ ಪರಿಣಾಮ ಗೃಹ ಉಪಯೋಗಿ ಸಿಲಿಂಡರಿನ ಬೆಲೆ ಸಾವಿರ ಹತ್ತಿರ ಗಡಿ ದಾಟುತ್ತಿದೆ .
ಕೂಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರು ಕೃಷಿ ಕೂಲಿ ಮಾಡುವ ಜನರಿಗೆ ಬೀದಿ ವ್ಯಾಪಾರಿ ವಾಣಿಜ್ಯ ಉದ್ಯಮಗಳಲ್ಲಿ ಕೂಲಿ ಕೆಲಸ ಮಾಡುವ ದಿನಗೂಲಿ ನೌಕರರಿಗೆ ಗ್ಯಾಸ್ ಬೆಲೆ ಏರಿಕೆಯಿಂದ ದೊಡ್ಡ ಹೊಡೆತವೇ ಬಿದ್ದಿದೆ .
ಪ್ರತಿನಿತ್ಯ ದಿನಗೂಲಿ ನೌಕರರು 200 ರೂ ನಿಂದ 400 ರೂ ಗಳವರೆಗೆ ಕೂಲಿ ತೆಗೆದು ಕೊಂಡು ಜೀವನ ನಡೆಸುವ ಮಂದಿಗಂತೂ ಜೀವನ ಸಾಗಿಸುವುದು ದೊಡ್ಡ ಸಾಧನೆಯ ಕೆಲಸವಾಗಿದೆ ಅದರಲ್ಲಿ ಈಗ ಗ್ಯಾಸ್ ಬೆಲೆ ಏರಿಕೆಯಿಂದ ಇವರ ಹೊಟ್ಟೆಗೆ ತಣ್ಣೀರು ಬಟ್ಟೆ ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ .
ಕೋರೊನಾ ಸೊಂಕಿನಿಂದ ಲಾಕ್ ಡೌನ್ ನಿಂದ ಚೇತರಿಕೆ ಕಾಣುತ್ತಿರುವ ರಾಜ್ಯದಲ್ಲಿ ಜನರಿಗೆ ಉದ್ಯೋಗವೇ ಇಲ್ಲದಂತಾಗಿದೆ ಪ್ರತಿನಿತ್ಯ ಉದ್ಯೋಗಕ್ಕಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ .
ದಿನಗೂಲಿ ಮಾಡುವ ಮತ್ತು ಕಡು ಬಡತನದ ಜನರಿಗೆ ಈಗ ಶಾಲಾ ಕಾಲೇಜುಗಳು ತೆರೆದಿದ್ದು ಅದರ ಫೀಜು ಬಟ್ಟೆ ಬರೆ ಬುಕ್ಕುಗಳಿಗಾಗಿ ಕೂಲಿ ಮಾಡಿ ಸಂಪಾದಿಸಿದ ಹಣವೆಲ್ಲವೂ ಖಾಲಿಯಾಗುತ್ತಿದೆ ಅಲ್ಲದೆ ಸಾಲ ಶೋಲ ಮಾಡಿ ಮಕ್ಕಳನ್ನು ಶಾಲಾ ಕಾಲೇಜಿಗೆ ಕಳಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ . ಇವುಗಳ ಮಧ್ಯೆ ಗ್ಯಾಸ್ ಬೆಲೆ ಹೆಚ್ಚಾದ ಪರಿಣಾಮ ಜೀವನದ ಜಂಜಾಟ ಬೇಡ ಸಾಕು ಸಾಕಾಗಿ ಹೋಗಿದೆ ಎನ್ನುವ ಜನರು .
ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡುಬಡತನದಲ್ಲಿರುವ ಜನರು ಹಾಗೂ ಮಧ್ಯಮ ವರ್ಗದ ಜನರೂ ಸಹ ಕಟ್ಟಿಗೆ ಒಲೆ ಯತ್ತ ಮುಖ ಮಾಡುತ್ತಿದ್ದಾರೆ ತಮ್ಮ ತೋಟಗಳಲ್ಲಿ ಸೌದೆಗಳನ್ನು ಸಂಗ್ರಹಿಸಿ ಸೌದೆ ಒಲೆಯಲ್ಲಿ ಅಡುಗೆ ಮಾಡಿ ಊಟ ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ .
ಗ್ಯಾಸ್ ಸಹವಾಸವೇ ಬೇಡ ಸೌದೆ ಒಲೆಯ ಊಟವೇ ಬಲು ರುಚಿಯಾಗಿಯೂ ಇರುತ್ತದೆ ಮತ್ತು ಆರೋಗ್ಯವಾಗಿ ಇರಬಹುದು ಎಂಬ ಭಾವನೆಗಳು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಜನರಲ್ಲಿ ವ್ಯಕ್ತವಾಗುತ್ತಿವೆ …

ವರದಿ… ಮಂಜು, ಎಸ್, ಮಳವಳ್ಳಿ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…