
ಶಿವಮೊಗ್ಗ: ಬದಲಾದ ಕಾಲಘಟ್ಟದಲ್ಲಿ ಪತ್ರಿಕೆ ವಿತರಣೆ ಮಾಡುವುದು ಕಷ್ಟಕರ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿ ಯಲ್ಲಿ ಪತ್ರಿಕಾ ವಿತರ ಕರು ಸಂಘಟಿತರಾಗದ ಹೊರತು ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಹೇಳಿದರು.
ಪತ್ರಿಕಾ ಭವನ ಸಭಾಂಗಣ ದಲ್ಲಿ ದಿನಪತ್ರಿಕೆ ಉಪಪ್ರತಿ ನಿಧಿಗಳ ಕ್ಷೇಮಾಭಿವೃದ್ಧಿ ಸಂಘ ಹಮ್ಮಿ ಕೊಂಡಿದ್ದ ದಿನಪತ್ರಿಕೆ ವಿತರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮ, ವೆಬ್ ಮೀಡಿಯಾ, ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಸವಾಲುಗಳ ಮಧ್ಯೆ ಮುದ್ರಣ ಮಾಧ್ಯಮ ಮೇರು ಸ್ಥಾನದಲ್ಲಿ ಇದೆ ಎನ್ನುವುದು ಸಮಾಧಾನದ ವಿಷಯ.ಬಹು ತೇಕರು ಜೀವನ ನಿರ್ವಹಣೆ ಗಾಗಿ ಅರೆಕಾಲಿಕ ವೃತ್ತತಯಾಗಿರುವ ಪತ್ರಿಕೆ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಕಾಯಕ ನಿಜಕ್ಕೂ ಆರೋಗ್ಯಕ್ಕೆ ಸಹಕಾರಿಯಾಗಿದೆ. ಪ್ರತಿನಿತ್ಯ ಮುಂಜಾನೆಯೇ ಹೇಳುವುದು, ಪ್ರತಿನಿತ್ಯ ಸೈಕಲ್ ತುಳಿಯುವುದು ಆರೋಗ್ಯ ನಿರ್ವಹಣೆಗೂ ಸಹಕಾರಿಯಾಗಿದೆ ಎಂದರು.
ಪತ್ರಿಕೆ ವಿತರಣೆ ಮಾಡುವ ವ್ಯಕ್ತಿಗಳನ್ನು ಕೆಲವರು ಕೀಳಾಗಿ ಕಾಣುವ ಮನಃಸ್ಥಿತಿ ಇದೆ. ಅಂತಹ ಕೀಳರಿಮೆ ತೊರೆಯಬೇಕು. ದೇಶದ ಹಲವು ಮಹಾನ್ ವ್ಯಕ್ತಿಗಳು ಕೂಡ ಪತ್ರಿಕೆ ಹಂಚುವ ಕೆಲಸ ಮಾಡುತ್ತಾ ದೇಶದ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಯಾವುದೇ ಕೆಲಸದಲ್ಲಿ ಕೀಳರಿಮೆ ಹೊಂದಬಾರದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮುಕ್ತಾರ್ ಅಹ್ಮದ್ ಮಾತನಾಡಿ, ಅಸಂಘಟಿತ ವಲಯಕ್ಕೆ ಸೇರಿಸುವ ಸರ್ಕಾರದ ನಿರ್ಧಾರ ಘೋಷಣೆಗೆ ಸೀಮಿತವಾಗಬಾರದೇ, ಅದು ಕಾರ್ಯರೂಪಕ್ಕೆ ಬರಬೇಕು ಎಂದು ಮನವಿ ಮಾಡಿದರು.
ಕೊರೋನಾ ಸಂದರ್ಭದಲ್ಲಿ ಪತ್ರಿಕಾ ವಿತರಕರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದರು. ಆಸಂದರ್ಭದಲ್ಲಿ ಅಪಪ್ರಚಾರವನ್ನು ನಡೆಸಲಾಯಿತು. ಈ ರೀತಿ ಅಪಪ್ರಚಾರ ನಡೆಸಬಾರದು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಚಂದ್ರಹಾಸ ಹಿರೇಮಳಲಿ, ಕೆ.ಎಸ್. ಸತೀಶ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ದಿನಪತ್ರಿಕೆ ವಿತರಕರಾದ ಜಯರಾಮ, ಸೀತಾರಾಮ, ಪರಮೇಶ್ವರಪ್ಪ, ಮಂಜುನಾಥ್, ನಾಗರಾಜ ನಾಯ್ಕ, ರಾಮಚಂದ್ರ ಹಾಗೂ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿಗಳಾದ ಮಂಜುನಾಥ್, ಗಣೇಶ್ ಭಟ್, ಮಾಲತೇಶ್, ಅರುಣ್, ಹರೀಶ್ ಇತರರು ಹಾಜರಿದ್ದರು…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…