
ದಾವಣಗೆರೆ: ಜಿಲ್ಲೆಯ ಅಬಕಾರಿ ಇಲಾಖೆಯ ಆಯುಕ್ತೆ ಸ್ವಪ್ನ, ಹರಿಹರ ಅಬಕಾರಿ ನಿರೀಕ್ಷಕಿ ಶೀಲಾ, ಪ್ರಥಮ ದರ್ಜೆ ಸಹಾಯಕ ಅಶೋಕ್ ಹೆಚ್ಎಂ, ದ್ವಿತೀಯ ದರ್ಜೆ ಸಹಾಯಕಿ ಶೈಲಾಶ್ರೀ, ಸೇರಿದಂತೆ ನಾಲ್ವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ..
ಏನಿದು ಪ್ರಕರಣ :
ಹರಿಹರದ ಉದ್ಯಮಿ ಡಿಜೆ ರಘುನಾಥ್ ದೂರಿನ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತರ ಬಲೆಗೆ ಈ ತಿಮಿಂಗಲಗಳು ಬಿದ್ದಿದ್ದು ಎರಡನೇ ರೈಲ್ವೆ ಗೇಟ್ ಅಮರಾವತಿ ಹರಿಹರದಲ್ಲಿರುವ ಡಿ ಜಿ ಆರ್ ಅಮ್ಯೂಸ್ಮೆಂಟ್ ಪಾರ್ಕ್ ಸಿಎಲ್ ಸೆವೆನ್ ಲೈಸೆನ್ಸ್ ಮಾಡಿಕೊಡಲು 3 ಲಕ್ಷಕ್ಕೆ ಈ ಭ್ರಷ್ಟ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು ಈ ಬೇಡಿಕೆಯನ್ನು ಲೋಕಾಯುಕ್ತರ ಗಮನಕ್ಕೆ ಡಿಜೆ ರಘುನಾಥ್ ತಂದಿದ್ದರು ಆ ದೂರಿನ ಆದರದ ಮೇಲೆ ಡಿಜೆ ರಘುನಾಥ್ 3ಲಕ್ಷ ಹಣವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ನೀಡುವಾಗ ಲೋಕಾಯುಕ್ತರ ಬಲೆಗೆ ಅಬಕಾರಿ ಇಲಾಖೆಯ ಭ್ರಷ್ಟರು ಸಿಕ್ಕಿಬಿದ್ದಿದ್ದಾರೆ..
ಲೋಕಾಯುಕ್ತ ಎಸ್ ಪಿ ಕೌಲಾಪುರೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಪ್ರಭು, ಮಧುಸೂದನ್, ರಾಷ್ಟ್ರಪತಿ, ಹಾವೇರಿಯ ಮಂಜುನಾಥ್ ಪಂಡಿತ್, ಹಾಗೂ ಲೋಕಾಯುಕ್ತ ಸಿಬ್ಬಂದಿಗಳು ಈ ದಾಳಿ ನಡೆಸಿದ್ದಾರೆ .
ಈ ಭ್ರಷ್ಟ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದವು ಆದರೆ ನೇರವಾಗಿ ಸಿಕ್ಕಿರಲಿಲ್ಲ ಈಗ ನೇರವಾಗಿ ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಪಾಲಾಗಿದ್ದಾರೆ.
ರಘುರಾಜ್ ಹೆಚ್. ಕೆ 9449553305.
