
ಶಿವಮೊಗ್ಗ: ಗಾಜನೂರು ಸಮೀಪ ತುಂಗಾ ಮೇಲ್ದಂಡೆ ಎಡನಾಲೆಯ ಅಕ್ಕಪಕ್ಕ ಅಕ್ರಮ ಮಣ್ಣು ಮತ್ತು ಕಲ್ಲು ಗಣಿಗಾರಿಕೆ ಹಾಗೂ ಒತ್ತುವರಿ ನಡೆಯುತ್ತಿದ್ದು ಅಧಿಕಾರಿಗಳು ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ.

ನಾಗರಾಜ್ ಎನ್ನುವ ವ್ಯಕ್ತಿ ಬಗರಹುಕಂ ಜಾಗ ತನ್ನದು ಇದೆ ಎಂದು ಒತ್ತುವರಿ ಮಾಡಿಕೊಂಡು ಮಣ್ಣು ತೆಗೆಯುವ ನೆಪದಲ್ಲಿ ಕಲ್ಲು ಮಣ್ಣು ಎರಡನ್ನು ಆಕ್ರಮವಾಗಿ ತೆಗೆದು ಮಾರಾಟ ಮಾಡುತ್ತಿದ್ದು ಇದರ ಬಗ್ಗೆ ತುಂಗಾ ಮೇಲ್ದಂಡೆ ಎಡನಾಲೆಯ ಅಧಿಕಾರಿಗಳು ಆತನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಆತನ ವಿರುದ್ಧ ಎಫ್ಐಆರ್ ದಾಖಲಿಸಿದೆ ಪೊಲೀಸರು ನಿಮ್ಮ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಉಡಾಫೆ ಉತ್ತರ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಾಗಾದರೆ ಇದನ್ನು ನೋಡಿಕೊಳ್ಳುವವರು ಯಾರು ನಿರಂತರವಾಗಿ ಹಗಲು ರಾತ್ರಿ ಎನ್ನದೆ ಇಲ್ಲಿ ಅಕ್ರಮ ಮಣ್ಣು ಮತ್ತು ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಭೂಮಂಡಲವನ್ನು ದೋಚುವ ಕೆಲಸ ನಡೆಯುತ್ತಿದೆ ಈ ನಾಗರಾಜ ಎನ್ನುವ ವ್ಯಕ್ತಿಯಿಂದ ಈತನ ಅಕ್ರಮಕ್ಕೆ ಕಡಿವಾಣ ಹಾಕಲು ತುಂಗಾ ಮೇಲ್ದಂಡೆ ಎಡನಾಲೆಯ ಅಧಿಕಾರಿಗಳು ಇನ್ನಾದರೂ ಕಾರ್ಯಾಮುಖವಾಗುತ್ತಾರ..? ಶಿವಮೊಗ್ಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಇದನ್ನು ಇಲ್ಲಿಗೆ ನಿಲ್ಲಿಸಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರಾ .?ತುಂಗಾನಗರ ಪೊಲೀಸ್ ಠಾಣೆಯ ದಕ್ಷ ಅಧಿಕಾರಿ ಮಂಜುನಾಥ್ ಅವರು ಎಫ್ಐಆರ್ ಹಾಕದೆ ನಿರ್ಲಕ್ಷ ವಹಿಸಿದ್ದು ಏಕೆ..? ಇನ್ನಾದರೂ ಆತನ ವಿರುದ್ಧ ದೂರು ದಾಖಲಿಸಿ ಈ ಅಕ್ರಮಕ್ಕೆ ಕಡಿವಾಣ ಹಾಕುತ್ತಾರ ಕಾದು ನೋಡಬೇಕು.


ರಘುರಾಜ್ ಹೆಚ್. ಕೆ.9449553305.