
ಬೆಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪೂರ್ಣಿಮಾ ಭೀಕರ ಹತ್ಯೆಯಾಗಿದೆ. ನಿನ್ನೆ ರಾತ್ರಿ ಸುಮಾರು 8:30 ರಿಂದ 9:30ರ ಒಳಗೆ ಈ ಘಟನೆ ನಡೆದಿರುವ ಸಂಭವ ಇದ್ದು ಬೆಳಿಗ್ಗೆ ಪೊಲೀಸರು ಭೇಟಿ ನೀಡಿದಾಗ ಮೊಬೈಲ್ ಹಾಲ್ ನಲ್ಲಿ ಇದ್ದು ಪ್ರತಿಮಾಗೆ ಕತ್ತು ಕೊಯ್ದು ಹೊಟ್ಟೆ ಭಾಗಕ್ಕೆ ಚಾಕು ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ..
ಮೂಲತ : ತೀರ್ಥಹಳ್ಳಿಯ ಹತ್ತಿರ ಕೊಂಡ್ಲೂರು ಪಕ್ಕ ಕಲ್ಕಟ್ಟೆ ಹತ್ತಿರ ನಿವಾಸಿ ಪ್ರತಿಮಾ 2003/ 2005 ರ ಬ್ಯಾಚ್ನಲ್ಲಿ ಕುವೆಂಪು ಯೂನಿವರ್ಸಿಟಿಯಲ್ಲಿ ಗಣಿ ಮತ್ತು ಭೂವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದಿದ್ದರು.
ನಂತರ ಕಿರಿಯ ಭೂ ವಿಜ್ಞಾನಿಯಾಗಿ ಬೆಂಗಳೂರು ರಾಮನಗರದಲ್ಲಿ ಕಾರ್ಯನಿರ್ವಹಿಸಿ ನಂತರ ಪ್ರಮೋಷನ್ ಮೇರೆಗೆ ಬೆಂಗಳೂರು ಅರ್ಬನ್ ನಲ್ಲಿ ಕಳೆದ ನಾಲ್ಕು ವರ್ಷದಿಂದ ಹಿರಿಯ ಭೂ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಮದುವೆಯಾಗಿರುವ ಈಕೆ ಗೆ ಒಂದು ಗಂಡು ಮಗುವಿದ್ದು ಸಂಸಾರದಲ್ಲಿ ಅಷ್ಟೇನೂ ಅನ್ಯೂನತೆ ಇಲ್ಲದೆ ಗಂಡ ಮತ್ತು ಮಗು ಬೇರೆ ವಾಸವಾಗಿದ್ದರು ಈಕೆಯ ಜೊತೆಗೆ ಇರಲಿಲ್ಲ
ದೊಡ್ಡ ಕಲ್ಲಸಂದ್ರ ಹತ್ತಿರ ಗೋಕುಲ್ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಪ್ರತಿಮಾ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು ಜೊತೆಗೆ ಒಂದು ನಾಯಿಯನ್ನು ಸಾಕಿಕೊಂಡಿದ್ದರು.
ಆದರೆ ನಿನ್ನೆ ಭೀಕರವಾಗಿ ಹತ್ಯೆ ಮಾಡಲಾಗಿದೆ ನಿಖರವಾಗಿ ಯಾರು ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲವಾದರೂ ಈಕೆಯ ಗಂಡನ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ ಈತನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರಬಹುದು ಎನ್ನುತ್ತಿವೆ ಬಲ ಮೂಲಗಳು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈ ಪ್ರಕರಣ ಹಲವು ತಿರುವು ಪಡೆದುಕೊಂಡಿದ್ದು ಸಾಮಾನ್ಯವಾಗಿ ಅಪಾರ್ಟ್ಮೆಂಟ್ ಅಲ್ಲಿ ಸಾಕಷ್ಟು ಭದ್ರತೆ ಇರುತ್ತದೆ ಆ ಭದ್ರತೆಯನ್ನು ಮೀರಿಸಿ ಒಳಗೆ ಬಂದು ಕೊಲೆ ಮಾಡಿದ್ದಾರೆ ಎಂದರೆ ಯಾರು ಗೊತ್ತಿರುವವರೇ ಈ ಪ್ರಕರಣದಲ್ಲಿ ಶಾಮಿಲಾಗಿದ್ದಾರೆ ಹಾಗೂ ಅಪಾರ್ಟ್ಮೆಂಟ್ ನಲ್ಲಿರುವ ಸಿಬ್ಬಂದಿಗಳು ಇದರಲ್ಲಿ ಶಾಮೀಲಾಗಿ ಕೈ ಜೋಡಿಸಿರಬಹುದಾ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.
ಒಟ್ಟಿನಲ್ಲಿ ಪೊಲೀಸರ ಸಮಗ್ರ ತನಿಖೆಯಿಂದ ಸತ್ಯ ಹೊರ ಬರಬೇಕಾಗಿದೆ.
ರಘುರಾಜ್ ಹೆಚ್. ಕೆ.9449553305.