
ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ನವರು ನಗರದ ಮೆಟ್ರೋ ಆಸ್ಪತ್ರೆಗೆ ಆಗಮಿಸಿ ಡಯಾಬಿಟಿಸ್ ವೆಲ್ ನೆಸ್ ಸೆಂಟರ್ ಗೆ ಭೇಟಿ ನೀಡಿ ವೈದ್ಯರೊಂದಿಗೆ ಸಿಬ್ಬಂದಿಗಳೊಂದಿಗೆ ನೂತನ ಡಯಾಬಿಟಿಸ್ ಸೆಂಟರ್ ಬಗ್ಗೆ ಮಾಹಿತಿ ತೆಗೆದುಕೊಂಡರು. .
ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಪ್ರಮುಖ ಮುಖಂಡರುಗಳಾದ ಎಸ್. ಕೆ ಮರಿಯಪ್ಪ, ಕೆ ಶ್ರೀಕಾಂತ್ ವೈ ಎಚ್ ನಾಗರಾಜ್, ರಮೇಶ ಹೆಗಡೆ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪೃಥ್ವಿ ಬಿ. ಸಿ ಹಾಗೂ ಮೆಟ್ರೋ ಆಸ್ಪತ್ರೆ ವೈದ್ಯರು ಸಿಬ್ಬಂದಿಗಳು ಹಾಜರಿದ್ದರು.