
ತೀರ್ಥಹಳ್ಳಿ: ನಾಳೆ ತೀರ್ಥಹಳ್ಳಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ ಗೌಡ ಅವರಿಗೆ ತೌರೂರ ಸಂಮಾನ ಕಾರ್ಯಕ್ರಮಕ್ಕೆ ಅದ್ದೂರಿ ತಯಾರಿ ನಡೆಯುತ್ತಿದ್ದು.
ಈಗಾಗಲೇ ಇದರ ಸಂಬಂಧವಾಗಿ ಮಂಜುನಾಥ್ ಗೌಡರ ಅಭಿಮಾನಿಗಳು ಹಿತೈಷಿಗಳು ಬಂಧುಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಒಗ್ಗಟ್ಟಾಗಿ 15 ದಿನದಿಂದ ಈ ಕಾರ್ಯದಲ್ಲಿ ತೊಡಗಿದ್ದಾರೆ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ತಿಂಗಳ ಆರನೇ ತಾರೀಕು ಈ ಕಾರ್ಯಕ್ರಮ ನಡೆಯಬೇಕಿತ್ತು ಆದರೆ ಇಡಿ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದ್ದರಿಂದ ಆ ಕಾರ್ಯಕ್ರಮ ಮುಂದೂಡಲಾಗಿತ್ತು.
ಈಗ ಅದೇ ಆರನೇ ತಾರೀಕು ಮತ್ತೆ ಕಾರ್ಯಕ್ರಮ ನಡೆಸಲು ಮುಂದಾಗಿದ್ದು ಅದ್ದೂರಿ ತಯಾರಿ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದು ತೀರ್ಥಹಳ್ಳಿಯ ರಾಜಕೀಯಕ್ಕೆ ಹಾಗೂ ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿ ಆಗಲಿದೆಯಾ ಎನ್ನುವ ಗುಸು-ಗುಸು ಎಲ್ಲೆಡೆ ಹರಿದಾಡುತ್ತಿದೆ.
ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡರು ಒಟ್ಟಿಗೆ ಸೇರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಸ್ವತಃ ಕಿಮ್ಮನೆ ರತ್ನಾಕರ್ ಅವರೇ ಮುಂದಾಳತ್ವ ವಹಿಸಿರುವುದು ಎಲ್ಲರಿಗೂ ಅಚ್ಚರಿತಂದಿದೆ.
ಏಕೆಂದರೆ ಹಿಂದೆ ಹಲವು ಸಾರಿ ಇವರ ನಡುವೆ ಶೀತಲ ಸಮರ ಏರ್ಪಾಡಾಗಿತ್ತು ಆದರೆ ಈಗ ಕಿಮ್ಮನೆ ರತ್ನಾಕರವರೇ ಮಂಜುನಾಥ್ ಗೌಡರಿಗೆ ಸಂಪೂರ್ಣವಾಗಿ ಬೆಂಬಲ ಸೂಚಿಸಿದ್ದು ತೀರ್ಥಹಳ್ಳಿ ಕಾಂಗ್ರೆಸ್ ಪಾಳ್ಯದಲ್ಲಿ ಹರ್ಷ ವ್ಯಕ್ತವಾಗಿದೆ.
ನಾಳಿನ ಕಾರ್ಯಕ್ರಮ ಕುತೂಹಲ ಕೆರಳಿಸಿದ್ದು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ರಘುರಾಜ್ ಹೆಚ್.ಕೆ.9449553305.