
ಬೆಂಗಳೂರು: ದೊಡ್ಡ ಕಲ್ಸಂದ್ರ ಬಳಿಯ ಗೋಕುಲ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ ಬೆಂಗಳೂರು ಅರ್ಬನ್ ನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಪ್ರತಿಮಾ ಭೀಕರ ಹತ್ಯೆಯಾಗಿದ್ದು.
ಇಲ್ಲಿಯವರೆಗೂ ಪ್ರತಿಮಾ ಕೂಲೆ ಮಾಡಿದ ಆರೋಪಿಗಳು ಯಾರು ಎಂದು ಪತ್ತೆಯಾಗಿಲ್ಲ ಆದರೆ ಗಣಿ ಮಾಫಿಯಾ ಇದರ ಹಿಂದಿದೆ ಎನ್ನಲಾಗುತ್ತಿದೆ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಿ ಎಂದು ಹೇಳಿದ್ದೆ ತಪ್ಪಾಯಿತು ಅದು ಕೊಲೆಗೆ ಕಾರಣವಾಯಿತಾ..? ಅಪಾರ್ಟ್ಮೆಂಟ್ ನಲ್ಲಿ ಸಿಸಿ ಕ್ಯಾಮೆರಾ ಇದ್ದರೂ ಆರೋಪಿಯ ಪತ್ತೆಯಾಗಿದ್ದರು ಏಕೆ ಇನ್ನೂ ಪೊಲೀಸ್ ಇಲಾಖೆ ಪ್ರಕಟ ಮಾಡಿಲ್ಲ ಈ ಕೊಲೆಯ ಹಿಂದೆ ಬಲವಾದ ಕೈಗಳು ಇದೆಯಾ..? ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಆರೋಪಿಗಳನ್ನು ಬಂಧಿಸಿ ಎಂದು ಆದೇಶ ನೀಡಿದ್ದಾರೆ.
ಆದರೂ ಕಾಣದ ಕೈಗಳು ಇಲ್ಲಿ ಕೆಲಸ ಮಾಡುತ್ತಿದೆಯಾ..? ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ.
ಒಟ್ಟಿನಲ್ಲಿ ಪ್ರಕರಣ ಸಾಕಷ್ಟು ತಿರುವು ಪಡೆದುಕೊಳ್ಳುತ್ತಿದ್ದು ಪ್ರಕರಣದ ನೈಜ್ಯ ಸುದ್ದಿಯ ಹಿಂದೆ ಪತ್ರಿಕೆ ಕೂಡ ಗಮನ ನೀಡಿದ್ದು ಸಂಪೂರ್ಣ ಮಾಹಿತಿಯನ್ನು ನೀಡಲಿದೆ…
ಇತ್ತ ಪ್ರತಿಮಾ ಪಾರ್ಥಿವ ಶರೀರವನ್ನು ತೀರ್ಥಹಳ್ಳಿಗೆ ತಂದಿದ್ದು ನಾಳೆ ಬೆಳಿಗ್ಗೆ ಅಂತ್ಯಸಂಸ್ಕಾರ ನೆರವೇರಲಿದೆ.