
ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿಗೊಳಿಸಿದೆ.
ಜಿಲ್ಲೆಯ ಗಾಜನೂರಿನ ಸಕ್ರೆಬೈಲ್ ಆನೆ ಶಿಬಿರದ ಬಳಿ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ಲಿಮಿಟೆಡ್ ವಾಟರ್ ಬೋಟಿಂಗ್ ನಡೆಸುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಸಿದ ಅರ್ಜಿಯ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿಗೊಳಿಸಿದೆ.
ಸ್ಥಳೀಯ ಅಗ್ರಹಾರದ ನಿವಾಸಿಯಾದ ಗಂಗಾ ಪರಮೇಶ್ವರಿ ಮೀನುಗಾರರ ಸಂಘದ ಅಧ್ಯಕ್ಷರಾದ ಅರಸಯ್ಯ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿಂದ ಏಕ ಸದಸ್ಯ ಪೀಠದ ಮುಂದೆ ನಿನ್ನೆ ಅಂದರೆ ಗುರುವಾರ ವಿಚಾರಣೆಗೆ ಬಂದಿದ್ದು ಅರ್ಜಿದಾರರ ಪರ ವಕೀಲರು ವಾದ ಆಲಿಸಿದ ನ್ಯಾಯ ಪೀಠ ಜಲ ಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕರ್ನಾಟಕ ನೀರಾವರಿ ನಿಗಮ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಿವಮೊಗ್ಗ ವನ್ಯಜೀವಿ ಭಾಗದ ಡಿಸಿಎಫ್ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಲಾಶಯದ ಹಿಂದಿ ನಲ್ಲಿ ವಾಟರ್ ಬೋಟಿಂಗ್ ಚಟುವಟಿಕೆ ನಡೆಸುತ್ತಿರುವ ಜಂಗಲ್ ರೆಸಾರ್ಟ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.
ಅರ್ಜಿದಾರ ಗಾಜನೂರಿನ ಗಂಗಾಪರಮೇಶ್ವರಿ ಮೀನುಗಾರ ಸಂಘದ ಅಧ್ಯಕ್ಷ ಅರಸಯ್ಯ ಪರ ವಾದಿಸಿದ ವಕೀಲರಾದ ನಾಗರಾಜ್ ಜೈನ್ ರವರು ಭದ್ರಾ ಜಲಾಶಯದ ಹಿಂದಿನ ವ್ಯಾಪ್ತಿಯಲ್ಲಿ ಅರ್ಜಿದಾರ ಸಂಘದ ಸದಸ್ಯರು ಅನೇಕ ವರ್ಷಗಳಿಂದ ತೆಪ್ಪಗಳನ್ನು ಬಳಸಿ ಹರಿಗೋಲು ಗಿಲ್ ನೆಟ್ ಮೂಲಕ ಮೀನುಗಾರಿಕೆ ನಡೆಸುತ್ತಿದ್ದಾರೆ ಆದರೆ ಈ ಜಂಗಲ್ ರೆಸಾರ್ಟ್ ಕಳೆದ ಒಂದು ವರ್ಷಗಳ ಹಿಂದೆ ಅಂದರೆ 2022 ರಿಂದ ವಾಟರ್ ಬೋಟಿಂಗ್ ಚಟುವಟಿಕೆ ಮಾಡುವುದರ ಮೂಲಕ ಸ್ಥಳೀಯ ಮೀನುಗಾರರಿಗೆ ಸಮಸ್ಯೆ ಉಂಟಾಗಿದೆ ಹಾಗಾಗಿ ಅರ್ಜಿದಾರರ ಸಂಘದ ಸದಸ್ಯರ ಬದುಕಿನ ಪ್ರಶ್ನೆಯಾಗಿದ್ದು ಈ ಭಾಗದಲ್ಲಿ ಬೋಟಿಂಗ್ ಚಟುವಟಿಕೆ ನಡೆಸುವುದರಿಂದ ಪರಿಸರ ಕುಡಿಯುವ ನೀರಿನ ವಲಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅಲ್ಲದೆ ತಮ್ಮ ಅರ್ಜಿ ವಿಚಾರಣೆ ಮುಗಿಯೋತನಕ ಬೋಟಿಂಗ್ ಚಟುವಟಿಕೆ ನಡೆಸಿದಂತೆ ಜಂಗಲ್ ರೆಸಾರ್ಟ್ ಲಿಮಿಟೆಡ್ ಗೆ ನಿರ್ಬಂಧ ಹೇರಬೇಕು ಎಂದು ಮಧ್ಯಾಂತರ ಮನವಿಯನ್ನು ಮಾಡಿದ್ದಾರೆ.
ಕರ್ನಾಟಕ ನೀರಾವರಿ ನಿಗಮವು ಭದ್ರಾ ಜಲಾಶಯದ ಹಿನ್ನಿರಿನಲ್ಲಿ ಬೋಟಿಂಗ್ ಚಟುವಟಿಕೆ ನಡೆಸಲು ಜಂಗಲ್ ರೆಸಾರ್ಟಿಗೆ ಅನುಮತಿ ನೀಡಿ 2022 ಮೇ 18ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿದಾರರ ಪರ ವಾದ ಆಲಿಸಿರುವ ಘನ ನ್ಯಾಯಾಲಯ ಜಂಗಲ್ ರೆಸಾರ್ಟ್ ನ ವಾಟರ್ ಬೋಟಿಂಗ್ ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದು ಸರ್ಕಾರಕ್ಕೆ ಹಾಗೂ ಸರ್ಕಾರದ ಮೂಲಕ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಪರಿಸರ ವನ್ಯಜೀವಿ ಹಾನಿ ಸಂಬಂಧ ಹೈಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಮುಂದಿನ ವಿಚಾರಣೆಯಲ್ಲಿ ಯಾವ ತೀರ್ಪು ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.