
ಶಿವಮೊಗ್ಗ:ಇಂದು ನಗರದ ಡಿ ಆರ್ ಸಭಾಂಗಣದಲ್ಲಿ ರಂದು ಸಂಜೆ
ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ಅವರು ನಗರದ ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರಗಳ ಡಿವೈಎಸ್ಪಿಗಳ ಹಾಗೂ ಗುಪ್ತಚರ ಮಾಹಿತಿ ಸಂಗ್ರಹಿಸುವ ಸಿಬ್ಬಂದಿಗಳ ಸಭೆಯನ್ನು ಕರೆದಿದ್ದರು.
ಈ ಸಭೆಯಲ್ಲಿ ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದರು:
1) ಓಸಿ, ಮಟ್ಕಾ, ಇಸ್ಪೀಟು ಜೂಜಾಟಗಳನ್ನು ತಡೆಗಟ್ಟಲು, ಠಾಣಾಧಿಕಾರಿಗಳು ಮತ್ತು ಗುಪ್ತ ಮಾಹಿತಿ ಕರ್ತವ್ಯದ ಸಿಬ್ಬಂದಿಗಳು ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಳ ಮಟ್ಟದ ಮಾಹಿತಿಯನ್ನು ಸಂಗ್ರಹಿಸಿ, ಹೆಚ್ಚಿನ ದಾಳಿಗಳನ್ನು ನಡೆಸಿ, ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಮತ್ತು ಓಸಿ ಬರೆಯುವ ಹಾಗೂ ಓಸಿ ಆಡಿಸುವ ಕಿಂಗ್ ಪಿನ್ ಗಳನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದು ಅವರ ವಿರುದ್ಧ ಬಲವಾದ ಪ್ರಕರಣಗಳನ್ನು ದಾಖಲಿಸಿ, ಪುನಾಃ ಓಸಿ ಮಟ್ಕಾ ಜೂಜಾಟದಲ್ಲಿ ತೊಡಗದಂತೆ ಬಿಗಿ ಮಾಡುವುದು. ಮತ್ತು ಶಿವಮೊಗ್ಗ ಜಿಲ್ಲೆಯಾದ್ಯಂತ ವಿಶೇಷವಾಗಿ ಶಿವಮೊಗ್ಗ ನಗರದಲ್ಲಿ ಸಂಘಟಿತ ಅಪರಾಧಗಳ ವಿರುದ್ಧ ಶೂನ್ಯ ಸಹಿಷ್ಣುತೆ (Zero Tolerance) ಹೊಂದಿದ್ದು, ಸಾರ್ವಜನಿಕರು ಮತ್ತು ಮಾದ್ಯಮಗಳಿಂದ ಯಾವುದೇ ದೂರುಗಳು ಬಂದಾಗ ಕೂಡಲೇ ಸ್ಪಂದಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು.
2) ಪೊಲೀಸ್ ಅಧಿಕಾರಿ / ಸಿಬ್ಬಂಧಿಗಳು ಓಸಿ, ಮಟ್ಕಾ, ಇಸ್ಪೀಟು ಜೂಜಾಟವನ್ನು ತಡೆಗಟ್ಟದೇ ಇದ್ದಲ್ಲಿ ಹಾಗೂ ತಮ್ಮ ಬೇಜವಾಬ್ದಾರಿತನ ಮತ್ತು ನಿರ್ಲಕ್ಷತನದಿಂದ ಓಸಿ, ಮಟ್ಕಾ, ಇಸ್ಪೀಟು ಜೂಜಾಟಗಳು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ಕಂಡು ಬಂದಲ್ಲಿ ಮತ್ತು ಜಿಲ್ಲಾ ಪೊಲೀಸ್ ಕಛೇರಿಯಿಂದ ಡೆಕಾಯ್ (ಮಾರುವೇಶದಲ್ಲಿ) ಟೀಮ್ ಗಳನ್ನು ಕಳುಹಿಸಿದ ಸಂದರ್ಭದಲ್ಲಿ ಯಾವ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ಚಟುವಟಿಕೆಗಳು ನಡೆಯುತ್ತಿರುವುದು ಕಂಡು ಬರುತ್ತದೆಯೋ ಆ ಠಾಣೆಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳೇ ನೇರ ಹೊಣೆಗಾರರಾಗಿರುತ್ತಾರೆ. ಅಂತಹ ಅಧಿಕಾರಿ / ಸಿಬ್ಬಂಧಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಇಲಾಖಾ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ.
3) ಮುಂದಿನ 10 ದಿನಗಳಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುವವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಹೆಚ್ಚಿನ ದಾಳಿಗಳನ್ನು ನಡೆಸಿ NDPS ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸತಕ್ಕದ್ದು. ಹಾಗೆಯೇ ಗಾಂಜಾ ಸೇವನೆ ಪ್ರಕರಣದಲ್ಲಿ ಗಾಂಜಾದ ಮೂಲದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಆ ವ್ಯಕ್ತಿಗೆ ಗಾಂಜಾ ಮಾರಾಟ ಮಾಡಿದ ಮತ್ತು ಗಾಂಜಾ ಬೆಳೆದ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವುದು.
4) ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ, ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಂಜೆಯ ವೇಳೆ ಏರಿಯಾ ಡಾಮಿನೇಷನ್ ವಿಶೇಷ ಗಸ್ತು ಮಾಡಿ, ಅನುಮಾನಾಸ್ಪದ ಮತ್ತು ಸಾರ್ವಜನಿಕ ಉಪಟಳ ನೀಡುವ ವ್ಯಕ್ತಿಗಳ ವಿರುದ್ಧ ಮುಂಜಾಗ್ರತಾ ಪ್ರಕರಣ ಮತ್ತು ಲಘು ಪ್ರಕರಣಗಳನ್ನು ದಾಖಲಿಸತಕ್ಕದ್ದು ಹಾಗೂ ಗಾಂಜಾ ಸೇವನೆಮಾಡಿರುವ ಬಗ್ಗೆ ಅನುಮಾನ ಬಂದವರನ್ನು ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಿ, ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪಟ್ಟಾಗ ಅಂತಹವರ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಅನಿಲ್ ಕುಮಾರ್ ಭುಮರಡ್ಡಿ, ಸುರೇಶ್ ಎಂ
ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ ಹಾಗೂ ಶಿವಮೊಗ್ಗ ನಗರದ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಸಿಬ್ಬಂಧಿಗಳು ಹಾಜರಿದ್ದರು.
ಈ ಮಹತ್ವದ ಸಭೆಯಲ್ಲಿ ದಕ್ಷ ಪ್ರಾಮಾಣಿಕ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಅವರು ನೀಡಿದ ಆದೇಶಗಳನ್ನು ಪೊಲೀಸ್ ಅಧಿಕಾರಿಗಳು ಪಾಲಿಸುತ್ತಾರಾ..? ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಅದರಲ್ಲೂ ಹೆಚ್ಚಾಗಿ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಓಸಿ ಇಸ್ಪೀಟ್ ಗಾಂಜಾ ಹೆಚ್ಚಾಗಿದ್ದು ನಿರಂತರವಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದು ಓಸಿ ಆಡಿಸುವರು ಇಸ್ಪೀಟ್ ಆಡಿಸುವವರು ಹಾಗೂ ಗಾಂಜಾ ಸೇವನೆ ಹಾಗೂ ಮಾರಾಟ ಮಾಡುವವರು ಯಾರು..? ಅವರಿಗೆ ಯಾರು ಸಪ್ಲೈ ಮಾಡುತ್ತಾರೆ..? ಯಾರು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ಮಾಡುತ್ತಾರೆ. ನಿತ್ಯ ಲಕ್ಷ ಲಕ್ಷ ದುಡಿಯುವ ಕೋಟಿಗೆ ಬಾಳುವ ಒಸಿ ಬಿಡ್ಡರ್ ಗಳ ಮನೆ ಆಸ್ತಿಪಾಸ್ತಿಗಳು ಎಲ್ಲಿವೆ ಹೇಗಿವೆ..? ಎಲ್ಲಿ ದಿನ ಓಸಿ ಪಟ್ಟಿ, ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಸಂಗ್ರಹವಾಗುತ್ತಿದೆ..? ಇಲಾಖೆಯಲ್ಲಿರುವ ಯಾರ ಸಹಕಾರ ಇವರಿಗೆ ಇದೆ..? ಎನ್ನುವ ಎಲ್ಲ ಮಾಹಿತಿಯನ್ನು ಸದ್ಯದಲ್ಲೇ ಪತ್ರಿಕೆ ಸಾರ್ವಜನಿಕರ ಮುಂದೆ ತೆರೆದಿಡಲಿದೆ ವೈಟ್ ಅಂಡ್ ಸೀ…..
ರಘುರಾಜ್ ಹೆಚ್.ಕೆ.9449553305.