
ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಧಿಕಾರ ವಿಕೇಂದ್ರಿಕರಣವಾಗಿ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿಯೇ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಸಲುವಾಗಿ ಗ್ರಾಮ ಪಂಚಾಯತ್ ಎನ್ನುವ ಪರಿಕಲ್ಪನೆಯನ್ನು ಜಾರಿಗೆ ತರಲಾಯಿತು.

ಇದು ಸಾಕಷ್ಟು ಪ್ರಭಾವ ಬೀರಿತು ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಅನುಕೂಲವನ್ನು ಮಾಡಿಕೊಟ್ಟಿದ್ದು ಗ್ರಾಮೀಣ ಭಾಗದ ಜನರಿಗೆ ಗ್ರಾಮ ಪಂಚಾಯಿತಿಯೇ ವಿಧಾನಸೌಧ ಎಂದರೆ ತಪ್ಪಾಗಲಾರದು .
ಆದರೆ ಈ ಗ್ರಾಮೀಣ ಭಾಗದ ವಿಧಾನಸೌಧಕ್ಕೆ ಗ್ರಾಮ ಸಭೆ ನಡೆಯುವ ಸಂದರ್ಭದಲ್ಲಿ ಎಲ್ಲಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬರಬೇಕು ಅಲ್ಲಿಯ ಜನರ ಹಾಗೂ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಸಮಸ್ಯೆಗಳನ್ನು ಕೇಳಬೇಕು ಆ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಬೇಕು ಎನ್ನುವ ಒಂದು ಚೌಕಟ್ಟಿದೆ ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮ ಸಭೆ ಎಂದರೆ ಕೆಲವು ಅಧಿಕಾರಿಗಳಿಗೆ ದಿವ್ಯ ನಿರ್ಲಕ್ಷ ಉಂಟಾಗಿದೆ.

ಗ್ರಾಮ ಸಭೆಗೆ ಸಾಮಾನ್ಯವಾಗಿ 25 ರಿಂದ 30 ಇಲಾಖೆಗಳ ಅಧಿಕಾರಿಗಳು ಬರಬೇಕು ಆದರೆ ಕೆಲವೊಂದು ಇಲಾಖೆಯ ಅಧಿಕಾರಿಗಳು ಮಾತ್ರ ಗ್ರಾಮ ಸಭೆಗೆ ಹಾಜರಿರುತ್ತಾರೆ ಆದರೆ ಕೆಲವು ಅಧಿಕಾರಿಗಳು ಬರುವುದೇ ಇಲ್ಲ ಎನ್ನುವ ದೂರುಗಳು ಗ್ರಾಮೀಣ ಭಾಗದ ಸಾರ್ವಜನಿಕರದ್ದು ಹಾಗೂ ಜನಪ್ರತಿನಿಧಿಗಳದ್ದು ಇದಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ ಉತ್ತರ ನೀಡಬೇಕು .
ಇನ್ನು ಮುಂದೆ ಈಗಾಗದಂತೆ ಎಚ್ಚರ ವಹಿಸಬೇಕು ಎಲ್ಲಾ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಕಡ್ಡಾಯವಾಗಿ ಗ್ರಾಮ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಬೇಕು ಇಲ್ಲವಾದರೆ ಕಳೆದ ಗ್ರಾಮ ಸಭೆಯಲ್ಲಿ ಬಿದರಗೋಡು ಗ್ರಾಮ ಪಂಚಾಯಿತಿಗೆ ನೂಡಲ್ ಆಫೀಸರ್ ಬಂದಿಲ್ಲ ಎಂದು ಗ್ರಾಮ ಸಭೆಯನ್ನೇ ಬಹಿಷ್ಕಾರ ಮಾಡಿದ್ದರು ಇದು ಪುನರಾವರ್ತನೆ ಆಗಬಾರದು ಆ ದೃಷ್ಟಿಯಿಂದ ಮತ್ತೆ ಇದು ಮರುಕಳಿಸದಂತೆ ಎಚ್ಚರ ವಹಿಸಬೇಕು.
ರಘುರಾಜ್ ಹೆಚ್.ಕೆ.9449553305.